ಮಹಿಳಾ ವಿವಿಧೋದ್ದೇಶ ಸಹಕಾರಿ ಸಂಘದ ಮಹಾಸಭೆ: ರೂ. 30.50 ಲಕ್ಷ ಲಾಭ, ಶೇ.12 ಡಿವಿಡೆಂಡ್ ಘೋಷಣೆ – ಗೌರಿ ಯಚ್

0

ಪುತ್ತೂರು: ಪುತ್ತೂರು ಶ್ರೀ ರಾಧಾಕೃಷ್ಣ ಮಂಇದರ ರಸ್ತೆ ಬಳಿ ಪ್ರಧಾನ ಕಚೇರಿ ಮತ್ತು ಶಾಖೆಯನ್ನು ಹೊಂದಿದ್ದು, ದರ್ಬೆ ಮತ್ತು ಉಪ್ಪಿನಂಗಡಿಯಲ್ಲಿ ಶಾಖೆಗಳನ್ನು ಜೊತೆಗೆ ನೆಹರುನಗರದಲ್ಲಿ ಪಡಿತರ ವಿತರಣಾ ಕೇಂದ್ರ ಹೊಂದಿರುವ ಪುತ್ತೂರು ಮಹಿಳಾ ವಿವಿಧೋದ್ದೇಶ ಸಹಕಾರಿ ಸಂಘವು 2021-22ನೇ ವರದಿ ಸಾಲಿನಲ್ಲಿ ರೂ. 3೦,೦೦,53೦.67 ಲಾಭ ಪಡೆದಿದ್ದು, ಶೇ. 12 ಡಿವಿಡೆಂಡ್ ನೀಡುವುದಾಗಿ ಸಂಘದ ಅಧ್ಯಕ್ಷೆ ಗೌರಿ ಯಚ್ ಅವರು ಘೋಷಣೆ ಮಾಡಿದ್ದಾರೆ.


ಪುತ್ತೂರು ಕೋ ಓಪರೇಟಿವ್ ಟೌನ್ ಬ್ಯಾಂಕ್ ಸಭಾಂಗಣದಲ್ಲಿ ಸೆ.೧೦ರಂದು ನಡೆದ ಸಂಘದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸಂಘವು ದ.ಕ ಜಿಲ್ಲೆಯ ಎಲ್ಲಾ ತಾಲೂಕಿಗೆ ಒಳಪಟ್ಟ ಅರ್ಹ ಮಹಿಳೆಯರನ್ನು ಸಂಘದ ಸದಸ್ಯರನ್ನಾಗಿಸುವಲ್ಲಿ ಸದಸ್ಯರು ಸಹಕಾರ ನೀಡಬೇಕು. ಅದೇ ರೀತಿ ಸದಸ್ಯರ ಸಂಖ್ಯೆಯನ್ನು ೨೫೦೦ ಕ್ಕೆ ಏರಿಸಬೇಕು. ಅದೇ ರೀತಿ ಸಂಘದಿಂದ ಸಾಲ ಪಡೆದವರು ಸೂಕ್ತ ಸಮಯದಲ್ಲಿ ಹಿಂದಿಗಿರುಸುವಲ್ಲಿ ಸಹಕಾರ ನೀಡಬೇಕು ಎಂದ ಅವರು ಸಂಘದ ಮುಂದಿನ ಯೋಜನೆಯನ್ನು ಸಭೆಯ ಮುಂದಿಟ್ಟರು. ಸಾಲ ನೀಡಿಕೆಯಿಂದ ಪಾಲು ಬಂಡವಾಳವನ್ನು ರೂ.೮೦ ಲಕ್ಷಕ್ಕೆ ವೃದ್ಧಿಸುವುದು. ಠೇವಣಿಯನ್ನು ರೂ.೧೩ ಕೋಟಿಗೆ ಹೆಚ್ಚಿಸುವುದು. ಸಾಲ ನೀಡಿಕೆಯನ್ನು ರೂ.೧೧ ಕೋಟಿಗೆ ಹೆಚ್ಚಿಸುವುದು.ಮಹಿಳಾ ಸ್ವಸಹಾಯ ಗುಂಪುಗಳ ರಚನೆ, ನಿರ್ವಾಹಣೆ, ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳುವುದು. ಹೊಸ ಸ್ವಸಹಾಯ ಗುಂಪುಗಳ ರಚನೆಗೆ ಪ್ರೋತ್ಸಾಹ ಹಾಗು ಸಾಲ ನೀಡಿಕೆ. ವ್ಯಾಪಾರ ವೀಭಾಗಕ್ಕೆ ಹೊಸ ಪೀಠೋಪಕರಣಗಳನ್ನು ಅಳವಡಿಸುವುದು, ನವೀಕರಿಸುವುದು, ಸದಸ್ಯರಿಗೆ ಸ್ವ ಉದ್ಯೋಗಕ್ಕೆ ಉತ್ತೇಜನ ನೀಡುವ ಬಗ್ಗೆ ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯ, ಹೊಸ ಶಾಖೆ ತೆರಯಲು ಸಂಘವು ಸಿದ್ಧತೆ ನಡೆಸುತ್ತಿದೆ ಎಂದರು.

ಮಹಾಸಭೆಯ ಕಾರ್ಯಕ್ರಮವನ್ನು ನಗರಸಭೆ ಮಾಜಿ ಅಧ್ಯಕ್ಷೆ ಕಮಲ ಮತ್ತು ಸಂಘದ ಹಿರಿಯ ನಿರ್ದೇಶಕಿ ಶಶಿಕಲಾರವರು ಉದ್ಘಾಟಿಸಿದರು. ಸಂಘದ ಕಿರಿಯ ಗುಮಸ್ತೆ ಸಾವಿತ್ರಿ ಮಹಾಸಭೆ ತಿಳುವಳಿಕೆ ಪತ್ರ ಮಂಡಿಸಿದರು. ಶಾಖಾ ವ್ಯವಸ್ಥಾಪಕಿ ಚೈತ್ರ ಅವರು ೨೦೨೦-೨೧ ನೇ ಸಾಲಿನ ನಿರ್ಣಯ ವರದಿ ಮಂಡಿಸಿದರು. ೨೦೨೨-೨೩ ನೇ ವಾರ್ಷಿಕ ವರದಿಯನ್ನು ದರ್ಬೆ ಶಾಖಾ ವ್ಯವಸ್ಥಾಪಕಿ ವಿದ್ಯಾ ಎಸ್ ಮಂಡಿಸಿದರು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಾಲಕೃಷ್ಣ ಟಿ ಅವರು ಬಜೆಟ್ ಗಿಂತ ಮೀರಿದ ಖರ್ಚನ್ನು ಮಂಡಿಸಿದರು. ಸಂಘದ ಆಯವ್ಯಯದ ತಃಖ್ತೆಯ ವಿವರವನ್ನು ಲೆಕ್ಕಾಧಿಕಾರಿ ಅಶ್ವಿನಿ ಕೆ ಮಂಡಿಸಿದರು. ಸಂಘದ ಗುಮಾಸ್ತ ನಿತಿನ್ ಸಂಘ ಆಡಳಿತ ಮಂಡಳಿಯ ಯೋಜನೆ ಮಾಹಿತಿ ನೀಡಿದರು. ಲೆಕ್ಕಪರಿಶೋಧನೆಯನ್ನು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಾಲಕೃಷ್ಣ ಟಿ ಮಂಡಿಸಿದರು. ಇದೇ ಸಂದರ್ಭದಲ್ಲಿ ಉಪನಿಯಮದ ತಿದ್ದು ಪಡಿ ಕುರಿತು ಮಾಹಿತಿ ನೀಡಲಾಯಿತು.

ಮಹಿಳಾ ಅಧಿಕಾರಿಗಳಿಗೆ ಸನ್ಮಾನ:
ಸರಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಆಶಾ ಪುತ್ತೂರಾಯ, ಶಿಶು ಅಭಿವೃದ್ದಿ ಯೋಜನಾಧಿಕಾರಿ ಶ್ರೀಲತಾ ಎಸ್, ಆಹಾರ ನಿರೀಕ್ಷಕಿ ಸರಸ್ವತಿ ಅವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು. ಸಂಘದ ನಿರ್ದೇಶಕಿಯರಾದ ಜಯಶ್ರೀ ಎಸ್ ಶೆಟ್ಟಿ, ಯಶೋದಾ, ಉಷಾ ಚಂದ್ರ ಮುಳಿಯ ಸನ್ಮಾನಿತರನ್ನು ಪರಿಚಯಿಸಿದರು. ಸನ್ಮಾನಿತರಾದ ಶ್ರೀಲತಾ ಅವರು ಮಾತನಾಡಿ ಮಹಿಳೆಯರ ನಗುಮುಖ ನಮಗೆ ನೆಮ್ಮದಿ ತಂದು ಕೊಡುತ್ತದೆ. ಇಂತಹ ಸನ್ಮಾನ ನಮ್ಮ ಜವಾಬ್ದಾರಿಯನ್ನು ಹೆಚ್ಚಿಸಿದೆ ಎಂದರು. ಡಾ. ಆಶಾ ಪುತ್ತೂರಾಯ ಅವರು ಮಾತನಾಡಿ ಮಹಿಳೆಯರು ಇಷ್ಟೊಂದು ಸಂಖ್ಯೆಯಲ್ಲಿ ಸೇರುವುದನ್ನು ಇದೇ ಮೊದಲ ಭಾರಿ ಮಹಿಳಾ ವಿವಿದ್ದೋಶ ಸಹಕಾರಿ ಸಂಘದ ಮೂಲಕ ನೋಡುವ ಅವಕಾಶ ಸಿಕ್ಕಿದೆ. ಸಮಾಜದಲ್ಲಿ ಅನೇಕರು ಸಂಬಳ ಪಡೆದಯದೇ ಕೆಲಸ ಮಾಡುವವರಿದ್ದಾರೆ. ಅವರಿಗೆ ಹೆಚ್ಚು ಹೆಚ್ಚು ಪ್ರೋತ್ಸಾಹ ಸಿಗಲಿ ಎಂದರು.

ಅಂಗನವಾಡಿ, ಆಶಾ ಕಾರ್ಯಕರ್ತೆಯರಿಗೆ ಗೌರವ:
ಲೀನಾ ಡಿ ಸೋಜಾ, ಮಮತಾ, ಮಾಲಿನಿ, ವಸಂತಿ ಬಿ, ಪದ್ಮಾವತಿ, ಗೌರಮ್ಮ, ಪವಿತ್ರಾ, ರಶ್ಮಿತಾ, ಬೇಬಿ ಕೆ, ರೀಟಾ, ಶೋಭಾ ಪಿ, ಪವಿತ್ರಾ , ಲೀಲಾ ಸೇರಿದಂತೆ ೧೫ ಅಂಗನವಾಡಿ ಕಾರ್ಯಕರ್ತೆಯರು ಮತ್ತು ೧೧ ಮಂದಿ ಆಶಾ ಕಾರ್ಯಕರ್ತೆಯರಾದ ಮೀನಾಕ್ಷಿ, ಉಷಾ, ಜಯಲತಾ, ಚಂದ್ರಾವತಿ, ಇಂದಿರಾ, ಸುಲೋಚನಾ, ಶ್ಯಾಮಲ, ಬೇಬಿ, ರೇಖಾ, ಮಮತಾ, ಅನಿತಾ ಹರೀಶ್ ಅವರನ್ನು ಸಂಘದ ವತಿಯಿಂದ ಗೌರವಿಸಲಾಯಿತು. ಸಂಘದ ನಿರ್ದೇಶಕಿ ಮೋಹಿನಿ ಪಿ ನಾಯ್ಕ್ ಗೌರವ ಕಾರ್ಯಕ್ರಮ ನಿರ್ವಹಿಸಿದರು.

ಸಂಘದ ಸಕ್ರೀಯ ಸದಸ್ಯರಿಗೆ ಗೌರವ:
ಸಂಘದ ಸಕ್ರೀಯ ಸದಸ್ಯರಾದ ಮಹಾಲಕ್ಷ್ಮೀ, ಭವಾನಿ, ಹೇಮಲತಾ ಕೆ, ಉಮಾವತಿ, ಇಂದಿರಾ, ಮಾರಾಟ ವಿಭಾಗದ ಗ್ರಾಹಕಿಯರಾದ ಜಯಲಕ್ಷ್ಮೀ ಅವರನ್ನು ಗೌರವಿಸಲಾಯಿತು. ಸಂಘದ ನಿರ್ದೇಶಕಿ ಇಂದಿರಾ ಸಕ್ರೀಯಾ ಸದಸ್ಯರಕಾರ್ಯಕ್ರಮ ನಿರ್ವಹಿಸಿದರು.

ಬಡ ವಿದ್ಯಾರ್ಥಿಗಳಿಗೆ ಸಹಾಯ, ಉಪಕಾರ ನಿಧಿ ವಿತರಣೆ:
ಅರ್ಹ ಬಡ ವಿದ್ಯಾರ್ಥಿಗಳಿಗೆ ಧನ ಸಹಾಯ ವಿತರಿಸಲಾಯಿತು. ವಿಜಯಲಕ್ಷ್ಮೀ ಕಾರ್ಯಕ್ರಮ ನಿರ್ವಹಿಸಿದರು. ಇದೇ ಸಂದರ್ಭದಲ್ಲಿ ಸಾರ್ವಜನಿಕ ಉಪಕಾರ ನಿಧಿಯಿಂದ ಹಲವಾರು ಮಂದಿಗೆ ತಲಾ ರೂ.೫ ಸಾವಿರ ನೀಡಲಾಯಿತು. ಬೊಳುವಾರು ಶಾಲೆಗೆ ಕಪಾಟು ಕೊಡುಗೆಯಾಗಿ ನೀಡಲಾಯಿತು. ೨೦೨೦-೨೧ ರ ಮೆಡಿಕಲ್ ಕ್ಯಾಂಪ್ ನಡೆಸಿದ ಪ್ರತಿನಿಧಿಗಳನ್ನು ಮತ್ತು ಸಂಘದ ಹಿರಿಯ ಸದಸ್ಯೆ ಕೆ.ಪಿ.ಪುಷ್ಪಾ ಅವರನ್ನು ಗೌರವಿಸಲಾಯಿತು. ಅದೃಷ್ಟ ಮಹಿಳೆಯಾಗಿ ನೇತ್ರಾವತಿ ಅವರು ಆಯ್ಕೆ ಆದರು. ಬಳಿಕ ಮಹಿಳೆಯರಿಗೆ ವಿವಿಧ ರೀತಿಯ ಸ್ಪರ್ಧೆಗಳನ್ನು ಏರ್ಪಡಿಸಲಾಯಿತು. ಕಾರ್ಯಕ್ರಮದ ಆರಂಭದಲ್ಲಿ ಸಂಘದ ಸದಸ್ಯರಾಗಿದ್ದು ನಿಧನರಾದ ಕಲ್ಯಾಣಿ, ಜಯಲಕ್ಷ್ಮೀ, ಶ್ಯಾಮಲ, ಹರಿಣಾಕ್ಷಿ, ಚಿತ್ರವತಿ, ಮಂಜುಳಾ, ಪುಷ್ಪಾವತಿ, ಶಾಂತಿ ಅವರ ಆತ್ಮಕ್ಕೆ ಚಿರಶಾಂತಿ ಕೋರಿ ಒಂದು ನಿಮಿಷದ ಮೌನಪ್ರಾರ್ಥನೆ ಸಲ್ಲಿಸಲಾಯಿತು. ಸಂಘದ ಮರಣೋತ್ತರ ನಿಧಿಯಿಂದ ಹಣ ಪಡೆದು ಕೊಂಡವರ ಕುರಿತು ಸಂಘದ ನಿರ್ದೇಶಕಿ ಅರ್ಪಣಾ ಎಸ್ ಅವರು ಮಾಹಿತಿ ನೀಡಿದರು. ನಿರ್ದೇಶಕಿ ಜಯಶ್ರೀ ಎಸ್ ಶೆಟ್ಟಿ ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ನಿರ್ದೇಶಕರಾದ ಮೋಹಿನಿ ದಿವಾಕರ್, ಪ್ರೇಮಲತಾ ರಾವ್, ಶಶಿಕಲಾ, ವತ್ಸಲಾ ರಾಜ್ಞಿ, ಉಷಾ ಮುಳಿಯ, ಯಶೋಧ, ಜಯಶ್ರೀ ಎಸ್ ಶೆಟ್ಟಿ, ವಿಜಯಲಕ್ಷ್ಮೀ, ಇಂದಿರಾ ಪಿ ಆಚಾರ್ಯ, ಮೋಹಿನಿ ಪಿ ನಾಯ್ಕ್, ಅರ್ಪಣಾ ಎಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ನಿರ್ದೇಶಕಿ ಮೋಹಿನಿ ದಿವಾಕರ್ ಸ್ವಾಗತಿಸಿದರು. ಹಿರಿಯ ನಿರ್ದೇಶಕಿ ಪ್ರೇಮಲತಾ ರಾವ್ ವಂದಿಸಿದರು. ಸಂಘದ ನಿರ್ದೇಶಕಿ ವತ್ಸಲಾ ರಾಜ್ಞಿ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here