ಆದರ್ಶ ವಿವಿದೋದ್ಧೇಶ ಸಹಕಾರಿ ಸಂಘದ ಮಹಾಸಭೆ

0

ರೂ. 506.59 ಕೋಟಿ ವ್ಯವಹಾರ, ರೂ.1.20 ಕೋಟಿ ಲಾಭ, ಶೇ.14 ಡಿವಿಡೆಂಡ್ ಘೋಷಣೆ- ಸವಣೂರು ಸೀತಾರಾಮ ರೈ

ಪುತ್ತೂರು: ದರ್ಬೆ ಪ್ರಶಾಂತ್ ಮಹಲ್‌ನಲ್ಲಿ ಕೇಂದ್ರ ಕಚೇರಿಯನ್ನು ಹೊಂದಿರುವ ಆದರ್ಶ ವಿವಿದೋದ್ಧೇಶ ಸಹಕಾರ ಸಂಘವು 2021-22ನೇ ಸಾಲಿನಲ್ಲಿ 509 ಕೋಟಿ 56 ಲಕ್ಷ ರೂ., ವ್ಯವಹಾರ ನಡೆಸಿ 1,20,06,593-59 ರೂ.ಲಾಭಗಳಿಸಿದೆ. ಲಾಭಾಂಶದಲ್ಲಿ ಸಂಘದ ಸದಸ್ಯರಿಗೆ ಶೇ.14 ಡಿವಿಡೆಂಡ್ ನೀಡಲಾಗುವುದು. ಲೆಕ್ಕ ಪರಿಶೋಧನೆಯಲ್ಲಿ ಸಂಘವು ಸತತವಾಗಿ ಎ ಶ್ರೇಣಿಯನ್ನು ಪಡೆದುಕೊಂಡಿರುತ್ತದೆ ಎಂದು ಸಂಘದ ವಾರ್ಷಿಕ ಮಹಾಸಭೆಯಲ್ಲಿ ಅಧ್ಯಕ್ಷ ಕೆ.ಸೀತಾರಾಮ ರೈ ಸವಣೂರು ಹೇಳಿದರು.


ಮಹಾಸಭೆಯು ಸೆ. 10 ರಂದು ದರ್ಬೆ ಪ್ರಶಾಂತ್ ಮಹಲ್‌ನ ಸನ್ನಿಧಿ ಸಭಾಂಗಣದಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಂಘವು ಜಿಲ್ಲೆಯಲ್ಲಿ ಒಟ್ಟು 12 ಶಾಖೆಗಳನ್ನು ಹೊಂದಿದ್ದು, ವರ್ಷಾಂತ್ಯಕ್ಕೆ ಸಂಘದಲ್ಲಿ 7368 ಸದಸ್ಯರಿದ್ದು ರೂ.2,52,86,300 ಪಾಲು ಬಂಡವಾಳ ಹೊಂದಿದೆ. ರೂ.99.81 ಕೋಟಿ ಠೇವಣಿ ಹೊಂದಿರುತ್ತದೆ. ರೂ 79,32,59,627 ನ್ನು ವಿವಿಧ ರೂಪದ ಸಾಲ ವಿತರಿಸಲಾಗಿದ್ದು ರೂ.2,65,71,114 ಸುಸ್ತಿಯಾಗಿರುತ್ತದೆ. ವಿವಿಧ ನಿಧಿಗಳಲ್ಲಿ ರೂ. 4,09,20,890-92 ಹಾಗೂ ರೂ. 23,10 ಲಕ್ಷ ವನ್ನು ವಿವಿಧ ಬ್ಯಾಂಕ್‌ಗಳಲ್ಲಿ ಧನ ವಿನಿಯೋಗಿಸಲಾಗಿದೆ. ಲಾಭಾಂಶವನ್ನು ಉಪ ನಿಬಂಧನೆಯಂತೆ ವಿಂಗಡಣೆ ಮಾಡಲಾಗಿದ್ದು ಸದಸ್ಯರಿಗೆ ಶೇ.14 ಡಿವಿಡೆಂಡ್ ಹಾಗೂ ಸಿಬ್ಬಂದಿಗಳಿಗೆ ಎರಡು ತಿಂಗಳ ವೇತನದ ಬೋನಸ್ ವಿತರಿಸಲಾಗುವುದು ಎಂದರು.

. ಉಪಾಧ್ಯಕ್ಷ ಯನ್.ಸುಂದರ ರೈ ಸವಣೂರು, ನಿರ್ದೇಶಕರಾದ ಎನ್.ಜಯಪ್ರಕಾಶ್ ರೈ ಚೊಕ್ಕಾಡಿ, ಕೆ.ರವೀಂದ್ರನಾಥ ಶೆಟ್ಟಿ ಕೇನ್ಯ ಸುಳ್ಯ, ಚಿಕ್ಕಪ್ಪ ನಾಕ್ ಅರಿಯಡ್ಕ, ಬಿ.ಮಹಾಬಲ ರೈ ಬೋಳಂತೂರು, ಎಸ್.ಯಂ. ಬಾಪು ಸಾಹೇಬ್ ಸುಳ್ಯ, ಯನ್. ರಾಮಯ್ಯ ರೈ ಕೆದಂಬಾಡಿ, ವಿ.ವಿ ನಾರಾಯಣ ಭಟ್ ನರಿಮೊಗರು, , ಅಶ್ವಿನ್ ಎಲ್.ಶೆಟ್ಟಿ ಸವಣೂರು, ಜೈರಾಜ್ ಭಂಡಾರಿ ಪುತ್ತೂರು, ಸೀತಾರಾಮ ಶೆಟ್ಟಿ ಬಿ. ಮಂಗಳೂರು, ಮಹಾದೇವ ಎಂ. ಮಂಗಳೂರು, ಯಮುನಾ ಎಸ್ ರೈ ಗುತ್ತುಪಾಲ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಅಧ್ಯಕ್ಷ ಸೀತಾರಾಮ ರೈ ಸವಣೂರು ಸ್ವಾಗತಿಸಿದರು. ಸಂಘದ ಮಹಾಪ್ರಬಂಧಕ ವಸಂತ ಜಾಲಾಡಿಯವರು ವರದಿ ವಾಚಿಸಿದರು. ಪುತ್ತೂರು ಶಾಖಾ ವ್ಯವಸ್ಥಾಪಕಿ ಪ್ರಜ್ಞಾಶ್ರೀ, ಪಿ, ಕೇಂದ್ರ ಕಚೇರಿ ವ್ಯವಸ್ಥಾಪಕ ಸುನಾದ್ ರಾಜ್ ಶೆಟ್ಟಿ ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ಪಂಜ ಶಾಖೆಯ ವ್ಯವಸ್ಥಾಪಕ ಪರಮೇಶ್ವರ ಗೌಡ ವಂದಿಸಿದರು.

ಸಂಘದ ಪ್ರಧಾನ ಕಚೇರಿಗೆ ಸ್ವಂತ ಕಟ್ಟಡ ನಿರ್ಮಿಸುವ ನಿಟ್ಟಿನಲ್ಲಿ ಸವಣೂರಿನಲ್ಲಿ ೭೫ ಸೆಂಟ್ಸ್ ಜಾಗವನ್ನು ಸವಣೂರಿನಲ್ಲಿ ಖರೀದಿಸಲಾಗಿದೆ. ಈ ವರ್ಷ ಸದ್ರಿ ಸ್ಥಳದಲ್ಲಿ ಶಂಕು ಸ್ಥಾಪನೆಯನ್ನು ಮಾಡಲಾಗುವುದು. ಇದರಲ್ಲಿ ಸುಮಾರು ರೂ.೨.೫ಕೋಟಿ ವೆಚ್ಚದ ಭವ್ಯ ಕಟ್ಟಡ ನಿರ್ಮಿಸಿ, ಸಂಘಕ್ಕೆ ೨೫ ವರ್ಷ ಪೂರೈಸುವ ಸಮಯದಲ್ಲಿ ಕಟ್ಟಡವನ್ನು ಲೋಕರ್ಪಣೆ ಮಾಡಲಾಗುವುದು. .
.ಜಿಲ್ಲೆಯಲ್ಲಿ ಮೂರು ಹೊಸ ಶಾಖೆ ತೆರೆಯುವ ಯೋಜನೆಯಿದೆ.

-ಕೆ.ಸೀತಾರಾಮ ರೈ, ಸವಣೂರು, ಅಧ್ಯಕ್ಷರು

LEAVE A REPLY

Please enter your comment!
Please enter your name here