ಶೇಣಿ, ಸಾಮುಗರು ಕಟ್ಟಿದ ಸೌಧದಲ್ಲಿ ನಾವು ಕೂತ್ತಿರುವುದು ನೆನಪಿರಲಿ – ಶೇಣಿ ಸಂಸ್ಮರಣೆಯಲ್ಲಿ ನಾ ಕಾರಂತ ಪೆರಾಜೆ

0

ಪುತ್ತೂರು: ಬಹಳಷ್ಟು ಮಂದಿ ನಮ್ಮ ಹೆಸರಿನ ಜೊತೆ ಕಲಾವಿದ ಎಂದು ಹಾಕಿಸಿಕೊಳ್ಳುತ್ತೇವೆ. ನಮಗಿದು ನಾಚಿಕೆಯಾಗಬೇಕು. ಯಾಕೆಂದರೆ ಶೇಣಿಯವರು ಮತ್ತು ಸಾಮುಗರು ಕಟ್ಟಿದ ಸೌಧದೊಳಗೆ ನಾವು ಕೂತು ಶೇಣಿಯರ ಶಿಷ್ಯ. ಸಾಮುಗರ ಶಿಷ್ಯ ಎಂದು ಹೇಳುತ್ತೇವೆ ಎಂದು ನೆನಪಿನಲ್ಲಿರಬೇಕೆಂದು ಅಡಿಕೆ ಪತ್ರಿಕೆ ಉಪಸಂಪಾದಕ ನಾ.ಕಾರಂತ ಪೆರಾಜೆ ಅವರು ಹೇಳಿದರು.

ಶೇಣಿ ಗೋಪಾಲಕೃಷ್ಣ ಭಟ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ನಟರಾಜ ವೇದಿಕೆಯಲ್ಲಿ ದೇವಸ್ಥಾನ, ಆಂಜನೇಯ ಯಕ್ಷಗಾನ ಕಲಾ ಸಂಘ ಬೊಳುವಾರು, ಹರಿಕಥಾ ಪರಿಷತ್ ಸಹಯೋಗದೊಂದಿಗೆ ನಡೆಯುತ್ತಿರುವ ಶೇಣಿ ಸಂಸ್ಮರಣೆ ಮತ್ತು ಹರಿಕಥಾ ಸಪ್ತಾಹದ ಸೆ.11ರಂದು ನಡೆದ ಸಮಾರೋಪ ಸಮಾರಂಭದಲ್ಲಿ ಅವರು ಶೇಣಿ ಸಂಸ್ಮರಣೆ ಮಾಡಿದರು. ಪುರಾಣದ ಪಾತ್ರಗಳು ಬರೇ ಆರಾಧ್ಯ ದೈವಗಳಲ್ಲ. ಆ ಪಾತ್ರಗಳಿಗೂ ಮನಸ್ಸು, ವೈಚಾರಿಕತೆ ಇದೆ ಎಂದು ತೋರಿಸಿಕೊಟ್ಟ ದೊಡ್ಡ ಮಹಾತ್ಮ ಶೇಣಿಯವರದ್ದು.

ಬಹಳಷ್ಟು ಮಂದಿ ನಮ್ಮ ಹೆಸರಿನ ಜೊತೆ ಕಲಾವಿದ ಎಂದು ಹಾಕಿಕೊಳ್ಳುತ್ತೇವೆ. ನಮಗೆ ನಾಚಿಕೆ ಆಗಬೇಕು ಎಂದ ಅವರು ಯಾವ ಕಾಲದಲ್ಲಿ ಶೇಣಿಯವರು ಸಾಮುಗರು ಪಾತ್ರಗಳಿಗೆ ವೈಚಾರಿಕ ಚಿಂತನೆಯನ್ನು ಕೊಟ್ಟು ದೊಡ್ಡ ಸೌಧ ನಿರ್ಮಿಸಿದ್ದಾರೋ. ಅ ಸೌಧದೊಳಗೆ ಕೂತು ನಾವು ಶೇಣಿಯವರ ಶಿಷ್ಯ. ಸಾಮಗರ ಶಿಷ್ಯ ಎಂದು ಹೇಳಿಕೊಳ್ಳುತ್ತೇವೆಯಷ್ಟೆ. ಶೇಣಿ ಸಾಮುಗರು ಅಸ್ತಂಗತ ಆಗುವ ಮುಂದೆ ಏನು ಕಟ್ಟಿಕೊಟ್ಟರೋ ಅದು ಸಂಪೂರ್ಣ. ಆದಕ್ಕಿಂತ ಆಚೆ ಚಿಂತನೆಗಳು ಈ ಕಾಲದಲ್ಲಿ ಯೋಚಿಸಲು ಸಾಧ್ಯವಿಲ್ಲ. ಹಿರಿಯ ಚೇತನರರು ಗಟ್ಟಿಯಾದ ಅರ್ಥಗಾರಿಕೆಯನ್ನು ಕಟ್ಟಿ ಕೊಟ್ಟಿದ್ದಾರೆ. ಅವರು ರೂಪಿಸಿ ಕೊಟ್ಟ ಪಾತ್ರವನ್ನು ಯಥಾಸಾಧ್ಯ ಸಂಘ ಸಂಸ್ಥೆಗಳು ಮಂದುವರಿಸಿಕೊಂಡು ಹೋಗುತ್ತಿರುವುದು ಸಂತೋಷದಾಯಕ ವಿಚಾರ.

ಹರಿಕಥಾ ಸಪ್ತಾಹದ ಮೂಲಕ ಶೇಣಿಯವರನ್ನು ಪುನಃ ನೆನಪಿಸುವುದು ಉತ್ತಮ ವಿಚಾರ ಎಂದರು.

ಮನೆ ಮನೆಗೆ ಹರಿಕಥೆ ತಲುಪಿಸುವ ಯೋಜನೆ:

ಶೇಣಿ ಗೋಪಾಲಕೃಷ್ಣ ಭಟ್ ಪ್ರತಿಷ್ಠಾನದ ಅಧ್ಯಕ್ಷರಾಗಿರುವ ನಿಮಾನ ನಿಲ್ದಾಣ ಪ್ರಾಧಿಕಾರದ ನಿವೃತ್ತ ನಿರ್ದೇಶಕ ಎಂ.ಆರ್ ವಾಸುದೇವ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ ಯಕ್ಷಗಾನ, ತಾಳಮದ್ದಳೆ, ಹರಿಕಥೆಯಲ್ಲಿ ದೈತ್ಯ ಪ್ರತಿಭೆಯಾಗಿರುವ ಶೇಣಿ ಗೋಪಾಲಕೃಷ್ಣ ಅವರ ನೆನಪಿನಲ್ಲಿ ಹಲವು ಕಾರ್ಯಕ್ರಮ ನಡೆಸಿದೆ. ಅವರ ಶತಮನಾನೋತ್ಸವ ಸಂದರ್ಭದಲ್ಲಿ 103 ಕಡೆ ಹರಿಕಥೆ ನಡೆಸಿದ್ದೇವೆ. ಕಿರಿಯರನ್ನು ಈ ರಂಗದಲ್ಲಿ ತಯಾರು ಮಾಡುವ ಉದ್ದೇಶದಿಂದ ಈ ಸಂಸ್ಥೆ ಕೆಲಸ ಮಾಡಿದೆ. ಹರಿಕಥೆಯನ್ನು ಮನೆ ಮನೆಗೆ ತಲುಪಬೇಕೆಂಬ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮ ನೀಡುತ್ತಿದ್ದೇವೆ ಈ ನಿಟ್ಟಿನಲ್ಲಿ ಪುತ್ತೂರಿನಲ್ಲಿ ಕ್ರೀಯಾಶೀಲ ಸಮಿತಿ ಭಾಸ್ಕರ್ ಬಾರ್ಯರ ಮೂಲಕ ಸಿಕ್ಕಿದೆ ಎಂದರು.

ಪುರಾಣಗಳನ್ನು ಯುವ ಪೀಳಿಗೆಗೆ ತಲುಪಿಸುವ ವ್ಯವಸ್ಥೆಯಾಗಬೇಕು:

ಚೇತನಾ ಆಸ್ಪತ್ರೆಯ ಡಾ..ಶ್ರೀಕಾಂತ ರಾವ್ ಅವರು ಮಾತನಾಡಿ ಶೇಣಿಯವರ ವಿಚಾರಗಳು ತುಣಕುಗಳ ಯುವ ಪೀಳಿಗೆಗೆ ತಲುಪವಂತಹ ವ್ಯವಸ್ಥೆಯಲ್ಲಿ ಬರಬೇಕಾಗಿದೆ. ಪುರಾಣಗಳ ಉಪನ್ಯಾಸ ಯುವ ಪೀಳಿಗೆಗೆ ಬಹಳ ಅಗತ್ಯ ಎಂದರು.

ಶೇಣಿಯವರ ಸಣ್ಣ ಹೊತ್ತಗೆಯನ್ನು ತರುವಲ್ಲಿ ಸಹಕಾರ:

ಕಾವು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿಯವರು ಮಾತನಾಡಿ ಹರಿಕಥೆಯ ಮೂಲಕ ಶೇಣಿಯವರ ಚಿಂತನೆಗಳನ್ನು ಮತ್ತೊಮ್ಮೆ ಸಮಾಜದ ಮುಂದೆ ತಂದು ನಿಲ್ಲಿಸಿದಂತಾಗಿದೆ. ಮೊನ್ನೆ ಮೊನ್ನೆ ಗತಿಸಿದವರನ್ನು ನಾವು ಮರೆಯುತ್ತೇವೆ. ಇವತ್ತು ಅನೇಕ ಸಾಧಕರು ಸಮಾಜದಲ್ಲಿ ಹುಟ್ಟಿ ಬದಕಿ ಅವರದ್ದೇ ಸಧನೆ ಕೊಟ್ಟವರಿದ್ದಾರೆ. ಆದರೆ ಇವತ್ತು ಶೇಣಿ ಗೋಪಾಲಕೃಷ್ಣ ಭಟ್ ಅವರ ಚಾರಿಟೇಬಲ್ ಟ್ರಸ್ಟ್ ಮೂಲಕ ನಿತ್ಯನಿರಂತರ ಸ್ಮರಣೆ ಮಾಡುವ ಕಾರ್ಯಕ್ರಮ ಸಮಾಜಕ್ಕೆ ವಿಶೇಷ ಸಂದೇಶ ಕೊಡುತ್ತಿದೆ. ಇದಕ್ಕೆ ಯಾರೆ ಕೈ ಜೋಡಿಸಿದರು ಅಭಿನಂದನಾರ್ಹರು. ಇದರಿಂದ ಶೇಣಿಯವರಿಗೆ ಏನು ಸಿಗುವುದಿಲ್ಲ. ಆದರೆ ಈ ಸಮಾಜಕ್ಕೆ ಉತ್ತಮ ಸಂದೇಶ ಸಿಗುತ್ತದೆ. ಈ ನಿಟ್ಟಿನಲ್ಲಿ ಶೇಣಿಯವರ ಸಣ್ಣ ಸಣ್ಣ ಹೊತ್ತಗೆಯನ್ನು ತರುವುದಾದರೆ ನನ್ನ ಸಹಕಾರವಿದೆ ಎಂದರು. ಯಕ್ಷರಂಗ ಪುತ್ತೂರು ಇದರ ಅಧ್ಯಕ್ಷ ಕೆ.ಸೀತಾರಾಮ ಶಾಸ್ತ್ರಿ, ಸುಳ್ಯ ಶ್ರೀ ರಾಘವೇಂದ್ರ ಮಠದ ಅಧ್ಯಕ್ಷ ಶ್ರೀಕೃಷ್ಣ ಸೋಮಯಾಜಿ, ನಿವೃತ್ತ ಜಿಲ್ಲಾ ಆರೋಗ್ಯಾಧಿಕಾರಿ ಡಾ. ರಾಮಕೃಷ್ಣ ರಾವ್ ಅವರು ಯಕ್ಷಗಾನ, ಹರಿಕಥೆ ಕುರಿತು ಮಾತನಾಡಿದರು. ವೇದಿಕೆಯಲ್ಲಿ ಟ್ರಸ್ಟ್‌ನ ಗೌರವ ಸಲಹೆಗಾರ ಸಾಮೆತ್ತಡ್ಕ ಗೋಪಾಲಕೃಷ್ಣ ಭಟ್ ಉಪಸ್ಥಿತರಿದ್ದರು. ಶೇಣಿ ಗೋಪಾಲಕೃಷ್ಣ ಭಟ್ ಚಾರಿಟೇಬಲ್ ಟ್ರಸ್ಟ್‌ನ ಪುತ್ತೂರು ಘಟಕದ ಸಂಚಾಲಕರಾದ ಭಾಸ್ಕರ ಬಾರ್ಯ ಸ್ವಾಗತಿಸಿದರು. ಚಾರಿಟೇಬಲ್ ಟ್ರಸ್ಟ್‌ನ ಕಾರ್ಯದರ್ಶಿ ಪಿ.ವಿ.ರಾವ್ ವಂದಿಸಿದರು. ಆಂಜನೇಯ ಮಹಿಳಾ ಯಕ್ಷಗಾನ ಕಲಾ ಸಂಘದ ಶುಭ ಜೆ ಸಿ ಅಡಿಗ ಕಾರ್ಯಕ್ರಮ ನಿರೂಪಿಸಿದರು. . ಸಭಾ ಕಾರ್ಯಕ್ರಮದ ಬಳಿಕ ಶ್ರೀರಾಮ ವನಗಮನ ಎಂಬ ಯಕ್ಷಗಾನ ತಾಳಮದ್ದಳೆ ನಡೆಯಿತು.

LEAVE A REPLY

Please enter your comment!
Please enter your name here