- ದಂತ ಆರೋಗ್ಯ ಕಿಟ್ ವಿತರಣೆ ಮತ್ತು ಗಿಡ ನೆಟ್ಟು ಪೋಷಿಸಿದ ವಿದ್ಯಾರ್ಥಿಗಳಿಗೆ ಬಹುಮಾನ
ಉಪ್ಪಿನಂಗಡಿ: ಜೇಸಿಐ ಉಪ್ಪಿನಂಗಡಿ ಘಟಕ, ಯುವ ಜೇಸಿ ವಿಭಾಗ ಹಾಗೂ ಜೇಸಿಐ ಉಪ್ಪಿನಂಗಡಿ ಚಾರಿಟೇಬಲ್ ಟ್ರಸ್ಟ್ ಉಪ್ಪಿನಂಗಡಿ ಇದರ 44 ನೇ ವರ್ಷದ ಜೇಸಿ ಸಪ್ತಾಹ “ಸ್ಪಂದನ” ಮತ್ತು ಜೇಸಿಐ ಭಾರತದ “ನಮಸ್ತೆ” 2022 ಕಾರ್ಯಕ್ರಮ ಧರ್ಮಸ್ಥಳ ಮಂಜುನಾಥೇಶ್ವರ ಎಜುಕೇಶನ್ ಸೊಸೈಟಿ ಆಡಳಿತ ಮಂಡಳಿಯ ಶ್ರೀ ಲಕ್ಷ್ಮೀ ನಾರಾಯಣ ಹಿರಿಯ ಪ್ರಾಥಮಿಕ ಶಾಲೆ ಕಾಂಚನದಲ್ಲಿ ವೈಯಕ್ತಿಕ ಸ್ವಚ್ಛತೆ ಮತ್ತು ದಂತ ಆರೋಗ್ಯ ಮಾಹಿತಿ ಕಾರ್ಯಾಗಾರ, ಗಿಡ ನೆಟ್ಟು ಪೋಷಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ, ದಂತ ಕಿಟ್ ವಿತರಣೆ ಕಾರ್ಯಕ್ರಮ ನಡೆಯಿತು.
ಶಾಲಾ ಮುಖ್ಯಗುರು ಲಕ್ಷಣ್ ಗೌಡ ದೀಪ ಬೆಳಗಿಸಿ, ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಅದ್ವಿಕ್ ದಂತ ಕ್ಲಿನಿಕ್ ಡಾಕ್ಟರ್ ಶ್ವೇತಾ ಆಶಿತ್ ಆರೋಗ್ಯ ಕುರಿತು ಮಾಹಿತಿ ನೀಡಿ, ಪೋಷಕರು, ಶಿಕ್ಷಕರು ಮಕ್ಕಳ ದಂತ ಆರೋಗ್ಯಕ್ಕೆ ಹೆಚ್ಚಿನ ಮುತುವರ್ಜಿ ನೀಡಬೇಕು. ಈ ಕುರಿತು ಹೆಚ್ಚಿನ ಜಾಗೃತಿ ಮೂಡಿಸಬೇಕೆಂದರು. ಸ್ಥಳೀಯ ಸಮುದಾಯ ಆರೋಗ್ಯ ಅಧಿಕಾರಿ ಜ್ಯಯಿಸಿ ಶಿಬು ವೈಯಕ್ತಿಕ ಸ್ವಚ್ಛತೆ ಕುರಿತು ಮಾಹಿತಿ ನೀಡಿ, ನಮ್ಮನ್ನು ಕಾಡುತ್ತಿರುವ ವಿವಿಧ ರೋಗಗಳನ್ನು ತಡೆಗಟ್ಟಲು ವೈಯಕ್ತಿಕ ಸ್ವಚ್ಛತೆಗೆ ವಿಶೇಷ ಗಮನ ನೀಡಬೇಕು ಎಂದರು.
ಬಜತ್ತೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಸ್ಮಿತಾ ಧನಂಜಯ, ಸ್ಥಳೀಯರಾದ ಚರಣ್ ಶಾಮಿಯಾನ ಮಾಲಕ ರುಕ್ಮಯ ಪುಯಿಲ, ವಿಕ್ರಂ ಯುವಕ ಮಂಡಲ ಅಧ್ಯಕ್ಷ ಜೇಸಿ ಅನಿಲ್ ಪಿಂಟೊ ಪುಯಿಲ, ಜೇಸಿಐ ಉಪ್ಪಿನಂಗಡಿ ಚಾರಿಟೇಬಲ್ ಟ್ರಸ್ಟ್ ಉಪಾಧ್ಯಕ್ಷ ಜೇಸಿ ಆನಂದ ರಾಮಕುಂಜ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಜೇಸಿ ಸಪ್ತಾಹದ ಸಹನಿರ್ದೇಶಕ ಸುರೇಶ್ ಅತಿಥಿಗಳನ್ನು ವೇದಿಕೆಗೆ ಬರಮಾಡಿಕೊಂಡರು. ಸಪ್ತಾಹದ ಸಹ ನಿರ್ದೇಶಕರಾದ ಮಹೇಶ್ ಖಂಡಿಗ ಜೇಸಿವಾಣಿ ವಾಚಿಸಿದರು.
ಘಟಕಾಧ್ಯಕ್ಷ ಜೇಸಿ ಮೋಹನ್ ಚಂದ್ರ ತೋಟದ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕಿ ಸುಮಾನ ಬಹುಮಾನ ವಿತರಣೆ ಕಾರ್ಯಕ್ರಮ ನಿರೂಪಿಸಿದರು. ಜೇಸಿ ದಿವಾಕರ ಶಾಂತಿನಗರ, ಜೇಸಿ ಪ್ರವೀಣ್ ಪಿಂಟೊ ಪುಯಿಲ ಸಹಕರಿಸಿದರು.
ಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಶಾಲೆಯ 120 ಮಕ್ಕಳಿಗೆ ಅದ್ವಿಕ್ ದಂತ ಕ್ಲಿನಿಕ್ ಡಾಕ್ಟರ್ ಆಶಿತ್ ಕೊಲ್ಗೋಟ್ , ಬ್ರಷ್, ಮತ್ತು ದಂತ ಆರೋಗ್ಯ ಮಾಹಿತಿ ಪತ್ರ ಒಳಗೊಂಡ ದಂತ ಆರೋಗ್ಯ ಕಿಟ್ ನೀಡಿ ಸಹಕರಿಸಿದರು. ರಾಷ್ಟ್ರ ಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.