ರೈ ಎಸ್ಟೇಟ್ ಎಜುಕೇಶನಲ್ ಚಾರಿಟೇಬಲ್ ಟ್ರಸ್ಟ್ ಫಲಾನುಭವಿಗಳ ಸಮಾವೇಶದ ಪೂರ್ವಭಾವಿ ಸಭೆ-ವಿವಿಧ ಸಮಿತಿಗಳಿಗೆ ಸಂಚಾಲಕರ ನೇಮಕ

0

ಪುತ್ತೂರು: ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಎದುರಿನ ಗದ್ದೆಯಲ್ಲಿ ಅಕ್ಟೋಬರ್ 26ರಂದು ನಡೆಯಲಿರುವ ರೈ ಎಸ್ಟೇಟ್‌ ಎಜುಕೇಶನಲ್ ಮತ್ತು ಚಾರಿಟೇಬಲ್ ಟ್ರಸ್ಟ್ ಫಲಾನುಭವಿಗಳ ಸಮಾವೇಶದ ಪೂರ್ವಭಾವಿ ಸಭೆ ದರ್ಬೆಯಲ್ಲಿರುವ ರೈ ಎಸ್ಟೇಟ್‌ ಎಜುಕೇಶನಲ್ ಮತ್ತು ಚಾರಿಟೇಬಲ್ ಟ್ರಸ್ಟ್ ಕಛೇರಿಯಲ್ಲಿ ಸೆ. 10ರಂದು ನಡೆಯಿತು. ಸಮಾವೇಶದ ಯಶಸ್ಸಿಗಾಗಿ ಸಭೆಯಲ್ಲಿ ವಿವಿಧ ಸಮಿತಿಗಳಿಗೆ ಸಂಚಾಲಕರನ್ನು ನೇಮಕ‌‌ ಮಾಡಲಾಯಿತು.

ಸಮಾವೇಶದ ಜತೆಗೆ ದೀಪಾವಳಿಯ ವಸ್ತ್ರ ವಿತರಣೆ – ಅಶೋಕ್ ರೈ
ಟ್ರಸ್ಟ್ ಪ್ರವರ್ತಕರಾದ ಕೋಡಿಂಬಾಡಿ ರೈ ಎಸ್ಟೇಟ್ ಮಾಲಕ ಅಶೋಕ್ ಕುಮಾರ್ ರೈ ಸಭೆಯಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿ ನಮ್ಮ‌ ಟ್ರಸ್ಟ್ ಮೂಲಕ ಸುಮಾರು 8658 ಜನರಿಗೆ ಬೇರೆ ಬೇರೆ ರೀತಿಯಲ್ಲಿ ಸಹಕಾರ ನೀಡಲಾಗಿದೆ. ಕಟ್ಟಡ ಕಾರ್ಮಿಕರಿಗೆ ಗುರುತಿನ ಚೀಟಿ ವಿತರಣೆ, ಮನೆ ನಿರ್ಮಾಣ, ಮನೆ ದುರಸ್ತಿ, ದುರಸ್ತಿಗೆ ಬೇಕಾದ ಸಾಮಾಗ್ರಿ , ಆನಾರೋಗ್ಯ, ಮದುವೆ, ವಿದ್ಯಾಭ್ಯಾಸಕ್ಕೆ ಧನಸಹಾಯ, ಮಹಿಳೆಯರಿಗೆ ಟೈಲರಿಂಗ್ ತರಬೇತಿ ಮತ್ತು ಹೊಲಿಗೆ ಯಂತ್ರ ವಿತರಣೆ, ವಾಹನ ಚಾಲನೆ ತರಬೇತಿ ಸೇರಿದಂತೆ ಜನರ ಹಲವು ಸಮಸ್ಯೆಗಳಿಗೆ ಸ್ಪಂದನೆ ನೀಡಲಾಗಿದೆ. ಈ ಫಲಾನುಭವಿಗಳನ್ನು ಕರೆದು ಸಮಾವೇಶದ ಜೊತೆಗೆ ವ‌ರ್ಷಂಪ್ರತಿ ದೀಪಾವಳಿ ದಿನ ವಸ್ತ್ರ ವಿತರಿಸುವ ರ್ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು. ಈ ವರ್ಷ ಸುಮಾರು 20 ಸಾವಿರಕ್ಕೂ ಅಧಿಕ ‌‌‌‌‌ ಜನರು ಭಾಗವಹಿಸುವ ನಿರೀಕ್ಷೆ ಇದೆ. ಇವರಿಗೆ ವ್ಯವಸ್ಥಿತವಾಗಿ ವಸ್ತ್ರ ಮತ್ತು ಊಟ ವಿತರಿಸುವ ಕಾರ್ಯಕ್ರಮ ನಡೆಯಲಿದೆ ಎಂದು ಅಶೋಕ್ ರೈ ತಿಳಿಸಿದರು. ಕಾರ್ಯಕ್ರಮವನ್ನು ಯಾವ ರೀತಿ ನಡೆಸಬಹುದು ಎಂದು ಸಭೆಯಲ್ಲಿ ಚರ್ಚೆ ನಡೆಸಲಾಯಿತು. ಸಭೆಯಲ್ಲಿ ಭಾಗವಹಿಸಿದ್ದ ಪ್ರಮುಖರಿಂದ ಸಲಹೆ ಸ್ವಿಕರಿಸಿ ಕಾರ್ಯಕ್ರಮದ ಯಶಸ್ಸಿಗಾಗಿ 10 ಸಮಿತಿಗಳನ್ನು ರಚನೆ ಮಾಡಿ ಸಮಿತಿಗೆ ಸಂಚಾಲಕರನ್ನು ಆಯ್ಕೆ ಮಾಡಿ ಜವಾಬ್ದಾರಿ ಹಂಚಲಾಯಿತು. ಮುಂದಿನ ಸಭೆಯಲ್ಲಿ ಪ್ರತಿ ಸಮಿತಿಗೆ ಸದಸ್ಯರನ್ನು ಆಯ್ಕೆ ಮಾಡುವುದೆಂದು ತೀರ್ಮಾನಿಸಲಾಯಿತು.

ಸಮಿತಿ ರಚನೆ:
ವಸ್ತ್ರ ವಿತರಣೆ ಸಮಿತಿಯ ಸಂಚಾಲಕರಾಗಿ ಉದಯ ಬೆಳ್ಳಾರೆ, ಶೋಭಾಮಯ್ಯ ಕೊಡಿಪ್ಪಾಡಿ, ಗುರುಪ್ರಸಾದ್ ರೈ ಕುದ್ಕಾಡಿ, ಲೋಕೇಶ್ ಅಡೋಳಿ, ಯೋಗೀಶ್ ಸಾಮಾನಿ ಸಂಪಿಗೆದಡಿ, ರಾಕೇಶ್, ಸುನಿಲ್ ಗೌಡ, ಪ್ರವೀಣ್ ಶೆಟ್ಟಿ ತಿಂಗಳಾಡಿ, ದಿವಾಕರ ವಿಟ್ಲ, ಪ್ರಕಾಶ್ ಕೊಯಿಲ, ರವಿಂದ್ರ ಪೂಜಾರಿ ಸಂಪ್ಯ, ವಸ್ತ್ರ ಸಂಯೋಜನೆ ಸಮಿತಿಯ ಸಂಚಾಲಕರಾಗಿ ನಿಹಾಲ್ ಶೆಟ್ಟಿ, ರಿತೇಶ್ ಶೆಟ್ಟಿ, ನಿತಿನ್ ಸೂರಂಬೈಲು, ಆರ್.ಪಿ. ಕೌಡಿಚ್ಚಾರ್, ಭರತ್ ಪುಣಚ, ಎಲ್ಯಣ್ಣ ಪೂಜಾರಿ ಕುಂಡಡ್ಕ, ಸ್ವಯಂಸೇವಕರ ಸಮಿತಿ ಸಂಚಾಲಕರಾಗಿ ಪ್ರಜ್ವಲ್ ರೈ, ಪುರುಷೋತ್ತಮ ಕೋಲ್ಪೆ, ಚಪ್ಪರ ಸಮಿತಿ ಸಂಚಾಲಕರಾಗಿ ಯೋಗೀಶ್ ಸಾಮಾನಿ ಸಂಪಿಗೆದಡಿ, ಅಜಿತ್ ರೈ, ಬಾಬು ರೈ ಕೋಟೆ, ದೇವರಾಜ್ ಸಿಂಹವನ, ರವಿ ಕಜೆಕ್ಕಾರ್, ಮಹಾಲಿಂಗ ಕಜೆಕ್ಕಾರ್, ಮಾಧ್ಯಮ ಮತ್ತು ಪ್ರಚಾರ ಸಮಿತಿ ಸಂಚಾಲಕರಾಗಿ ಜಯಪ್ರಕಾಶ್ ಬದಿನಾರು, ಸಂತೋಷ್ ಕುಮಾರ್ ಶಾಂತಿನಗರ, ರಾಮದಾಸ್ ಶೆಟ್ಟಿ ವಿಟ್ಲ, ಕೃಷ್ಣಪ್ರಸಾದ್ ಬೊಳ್ಳಾವು, ದಿನೇಶ್ ಕೆ , ಆಹಾರ ಸಿದ್ಧತೆ ಸಮಿತಿ ಸಂಚಾಲಕರಾಗಿ ವಾರಿಸೇನ ಜೈನ್ ಕೋಡಿಯಾಡಿ, ಅಶೋಕ್ ಕುಮಾರ್ ರೈ ಅರ್ಪಿಣಿಗುತ್ತು, ಶಿವಪ್ರಸಾದ್ ರೈ ಮಠಂತಬೆಟ್ಟು, ಕೇಶವ ಭಂಡಾರಿ ಕೈಪ, ಆಹಾರ ವಿತರಣೆ ಸಮಿತಿ ಸಂಚಾಲಕರಾಗಿ ಸದಾಶಿವ ರೈ ಸೂರಂಬೈಲು, ಜಗನ್ಮೋಹನ ರೈ ಸೂರಂಬೈಲು, ಸೀತಾರಾಮ ರೈ ಕೆದಂಬಾಡಿ, ವಿಜಯ ಪೂಜಾರಿ ಚೀಮುಳ್ಳು, ಅಬ್ದುಲ್ ಕುಂಇಿ ಮುಂಡೂರು, ಸ್ವಾಗತ ಸಮಿತಿ ಸಂಚಾಲಕರಾಗಿ ಸೀತಾರಾಮ ಶೆಟ್ಟಿ ಹೆಗ್ಡೆಹಿತ್ತಿಲು, ಸದಾಶಿವ ರೈ ಸೂರಂಬೈಲು, ನಿರಂಜನ ರೈ ಮಠಂತಬೆಟ್ಟು, ಶಶಿಕುಮಾರ್ ಬಾಲ್ಯೊಟ್ಟು, ರಾಜಾರಾಮ ಶೆಟ್ಟಿ ಕೋಲ್ಪೆ, ಎ.ಜತೀಂದ್ರ ಶೆಟ್ಟಿ ಅಲಿಮಾರ, ಮುರಳೀಧರ ರೈ ಮಠಂತಬೆಟ್ಟು, ಕಾರ್ಯಕ್ರಮ ನಿರ್ವಹಣೆ ಸಮಿತಿ ಸಂಚಾಲಕರಾಗಿ ನಿರಂಜನ್ ರೈ ಮಠಂತಬೆಟ್ಟು, ಜಗನ್ನಾಥ ಶೆಟ್ಟಿ ನಡುಮನೆ, ಲೋಕೇಶ್ ಬೆತ್ತೋಡಿ, ಮನ್ಮಥ ಶೆಟ್ಟಿ ಕೊಡಿಪ್ಪಾಡಿ, ಬಾಲಕೃಷ್ಣ ರೈ, ಮೇಲುಸ್ತುವಾರಿ ಸಮಿತಿ ಸಂಚಾಲಕರಾಗಿ ಸೀತಾರಾಮ ಶೆಟ್ಟಿ ಹೆಗ್ಡೆಹಿತ್ತಿಲು, ನಿರಂಜನ್ ರೈ ಮಠಂತಬೆಟ್ಟು, ಶಶಿಕುಮಾರ್ ರೈ ಬಾಲ್ಯೊಟ್ಟು, ಅಶೋಕ್ ಕುಮಾರ್ ರೈ ಅರ್ಪಿಣಿಗುತ್ತು, ಸೀತಾರಾಮ ರೈ ಕೆದಂಬಾಡಿರವರನ್ನು ಆಯ್ಕೆ ಮಾಡಲಾಯಿತು. ಸಭೆಯಲ್ಲಿ ಪೆರುವಾಯಿ, ವಿಟ್ಲ, ಪುಣಚ ಬೆಟ್ಟಂಪ್ಪಾಡಿ, ನಿಡ್ಪಳ್ಳಿ, ಕೆದಂಬಾಡಿ, ಪೆರ್ನೆ, ಬಲ್ನಾಡು, ಇಡ್ಕಿದು, ಕಬಕ, ಕೊಡಿಪ್ಪಾಡಿ, ಪಡ್ನೂರು, ಕೆದಿಲ, ಕೋಡಿಂಬಾಡಿ, ಹೀರೆಬಂಡಾಡಿ, ಉಪ್ಪಿನಂಗಡಿ, ಚಿಕ್ಕಮುಡ್ನೂರು, ಬನ್ನೂರು, ಬಡಗನ್ನೂರು, ಕೊಳ್ತಿಗೆ, ಕೆಮ್ಮಿಂಜೆ, ಸವಣೂರು ಭಾಗದ ಪ್ರಮುಖರು ಭಾಗವಹಿಸಿದ್ದರು.

ನಿರಂಜನ್ ರೈ ಮಠಂತಬೆಟ್ಟು ಸ್ವಾಗತಿಸಿದರು. ರಾಜಾರಾಮ ಶೆಟ್ಟಿ ಕೊಲ್ಪೆ, ಸೀತಾರಾಮ ಶೆಟ್ಟಿ ಹೆಗ್ಡೆಹಿತ್ತಿಲು, ಎ. ಜತೀಂದ್ರ ಶೆಟ್ಟಿ ಅಲಿಮಾರ, ಸದಾಶಿವ ರೈ ಸೂರಂಬೈಲು, ಪ್ರವೀಣ್ ಶೆಟ್ಟಿ ತಿಂಗಳಾಡಿ, ವಾರಿಸೇನ ಜೈನ್, ಅಶೋಕ್ ಕುಮಾರ್ ರೈ ಅರ್ಪಿಣಿಗುತ್ತು, ನಿಹಾಲ್ ಶೆಟ್ಟಿ, ಜಗನ್ಮೋಹನ ರೈ ಸೂರಂಬೈಲು, ಸೀತಾರಾಮ ರೈ ಕೆದಂಬಾಡಿ, ಪುರುಷೋತ್ತಮ ಕೋಲ್ಪೆ, ಶೋಭಾಮಯ್ಯ ಕೊಡಿಪ್ಪಾಡಿ, ರವೀಂದ್ರ ಪೂಜಾರಿ ಸಂಪ್ಯ, ಮುರಳೀಧರ ರೈ ಮಠಂತಬೆಟ್ಟು, ಯೋಗೀಶ್ ಸಾಮಾನಿ ಸಂಪಿಗೆದಡಿ, ಜಯಪ್ರಕಾಶ್ ಬದಿನಾರು, ಜಗನ್ನಾಥ ಶೆಟ್ಟಿ ನಡುಮನೆ, ಪ್ರಜ್ವಲ್ ರೈ, ಪ್ರಕಾಶ್ ರೈ ಕೊಯಿಲ, ರಿತೇಶ್ ರೈ ಮಂಗಳೂರು, ರೇಖಾ ರೈ ಕಟ್ಟಾತ್ತಾರು, ರೇವತಿ ಪೆರುವಾಯಿ, ಪುಷ್ಪಾವತಿ ಸೂರ್ಯ, ಮೋಹನ್ ಸೂರ್ಯ, ಪ್ರದೀಪ್ ಪುತ್ತೂರು, ಎಲ್ಯಣ್ಣ ಪೂಜಾರಿ ಕುಂಡಡ್ಕ, ಆರ್. ಪಿ. ಕೌಡಿಚ್ಚಾರ್, ದಿನೇಶ್ ಕೆ. ಕೆಮ್ಮಿಂಜೆ, ಗುರುಪ್ರಸಾದ್ ರೈ ಕುದ್ಕಾಡಿ, ಉದಯ ಪಾಟಾಳಿ ಬೆಳ್ಳಾರೆ, ದಿವಾಕರ ಚಂದಳಿಕೆ, ಕೃಷ್ಣಪ್ರಸಾದ್ ಬೊಳ್ಳಾವು, ಅಬ್ಧುಲ್ ಕುಂಇಿ ಮುಂಡೂರು, ಶಿವಾಜಿ ಬನ್ನೂರು, ನಿತಿನ್, ರವಿ ಕಜೆಕ್ಕಾರ್, ಲೋಕೇಶ್, ಜಗನ್ನಾಥ ಗೌಡ, ರಾಕೇಶ್ ರೈ , ದಿನೇಶ್ ಕರ್ಕೆರ, ರಾಜೇಶ್ ಪ್ರಸಾದ್, ರಾಮದಾಸ್ ಶೆಟ್ಟಿ ವಿಟ್ಲ, ಚಂದ್ರಾವತಿ ರೈ, ವಿನಿತಾ, ನೀಲಮ್ಮ, ಸುನಿಲ್ ಗೌಡ, ಉಮಾನಾಥ ಶೆಟ್ಟಿ, ನಿತಿನ್ ರೈ, ಸುಜಿತ್ ಎಸ್. ಮುಂತಾದವರು ಸಲಹೆ ಸೂಚನೆ ನೀಡಿದರು.

LEAVE A REPLY

Please enter your comment!
Please enter your name here