ತ್ರೋಬಾಲ್ ಪಂದ್ಯಾಟ: ದರ್ಬೆ ಬೆಥನಿ ಆ.ಮಾ. ಪ್ರೌಢ ಶಾಲೆ ತಂಡ ಮೈಸೂರು ವಿಭಾಗ ಮಟ್ಟಕ್ಕೆ ಆಯ್ಕೆ

0

ಪುತ್ತೂರು : ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ ದಕ್ಷಿಣ ಕನ್ನಡ ಮಂಗಳೂರು ಇವರ ವತಿಯಿಂದ ಸಂತ ಪಾವಲರ ಹಿರಿಯ ಪ್ರಾಥಮಿಕ ಶಾಲೆ ಬೆಳ್ತಂಗಡಿ ತಾಲೂಕು ನಾರಾವಿ ಇಲ್ಲಿ ನಡೆದ ಜಿಲ್ಲಾ ಮಟ್ಟದ ಪ್ರೌಢಶಾಲಾ ವಿಭಾಗದ ತ್ರೋಬಾಲ್ ಪಂದ್ಯದಲ್ಲಿ ಬೆಥನಿ ಆಂಗ್ಲ ಮಾಧ್ಯಮ ಪ್ರೌಢ ಶಾಲೆ ದರ್ಬೆ ಇಲ್ಲಿನ ಬಾಲಕಿಯರ ತಂಡ ಪ್ರಥಮ ಸ್ಥಾನವನ್ನು ಪಡೆದು ಮೈಸೂರು ವಿಭಾಗ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.

ಅವನಿ ರೈ, ವೈಶಾಲಿ ಕೆ, ವೈಷ್ಣವಿ, ರಿಯಾ ಜೆ ರೈ, ಡಿಯೋರ ಐನಿಶ್ ರೆಬೆಲ್ಲೋ, ಸೋಹಾನಿ ಕುಟಿನ್ಹಾ, ಫಾತಿಮತ್ ಹಫೀಧಾ, ಯಶ್ವಿ ಡಿ ಶೆಟ್ಟಿ, ಹಿತಶ್ರಿ, ಸಿಂಚನ, ಕೆ ಸಾನ್ವಿ, ಹರ್ಷಿತಾ ಭಾಗವಹಿಸಿದ್ದರು. ಅವನಿ ರೈ ‘ಉತ್ತಮ ಹಿಡಿತಗಾರ್ತಿ’ ಮತ್ತು ವೈಶಾಲಿ ಕೆ ‘ಉತ್ತಮ ಎಸೆತಗಾರ್ತಿ’ಯಾಗಿ ಈ ಪಂದ್ಯದಲ್ಲಿ ಮಿಂಚಿದರು ಎಂಬುದಾಗಿ ಶಾಲಾ ಮುಖ್ಯಶಿಕ್ಷಕಿ ಸಿಸ್ಟರ್ ಶಾಂತಿ ತಿಳಿಸಿರುತ್ತಾರೆ.

LEAVE A REPLY

Please enter your comment!
Please enter your name here