ಈಶ್ವರಮಂಗಲ ಗಜಾನನ ವಿದ್ಯಾ ಸಂಸ್ಥೆಯ ನಿರ್ದೇಶಕ ಮೇನಾಲ ಏಳ್ನಾಡುಗುತ್ತು ನಿತಿನ್ ಪ್ರಸಾದ್ ಹೆಗ್ಡೆರವರಿಗೆ ಶ್ರದ್ಧಾಂಜಲಿ

0

ಪುತ್ತೂರು: ಆ.31ರಂದು ನಿಧನರಾದ ಪ್ರಗತಿಪರ ಕೃಷಿಕ, ಈಶ್ವರಮಂಗಲ ಗಜಾನನ ವಿದ್ಯಾ ಸಂಸ್ಥೆಯ ನಿರ್ದೇಶಕ ಮೇನಾಲ ಏಳ್ನಾಡುಗುತ್ತು ನಿತಿನ್ ಪ್ರಸಾದ್ ಹೆಗ್ಡೆಯವರ ಉತ್ತರಕ್ರಿಯೆಯು ಸೆ.12ರಂದು ಈಶ್ವರಮಂಗಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಸಭಾಭವನದಲ್ಲಿ ಜರಗಿತು.

ಜನಮಾನಸದಲ್ಲಿ ಹೆಸರು- ಮೇನಾಲ ಕಿಶನ್ ಜೆ. ಶೆಟ್ಟಿ
ಈ ಸಂದರ್ಭದಲ್ಲಿ ಶ್ರದ್ಧಾಂಜಲಿ ಸಲ್ಲಿಸುವ ಕಾರ್‍ಯಕ್ರಮದಲ್ಲಿ ಉದ್ಯಮಿ ಹಾಗೂ ಅಡ್ಯಾರ್ ಗಾರ್ಡನ್ ಸಂಸ್ಥೆಯ ಮಾಲಕ ಮೇನಾಲ ಕಿಶನ್ ಜೆ. ಶೆಟ್ಟಿರವರು ಮಾತನಾಡಿ ಮೇನಾಲ ಏಳ್ನಾಡುಗುತ್ತು ನಿತಿನ್ ಪ್ರಸಾದ್ ಹೆಗ್ಡೆರವರು ಕುಟುಂಬ ಹಾಗೂ ಸಮಾಜದಲ್ಲಿ ಎಲ್ಲರ ಪ್ರೀತಿ, ವಿಶ್ವಾಸಕ್ಕೆ ಪಾತ್ರರಾಗಿ, ಸಮಾಜದಲ್ಲಿ ಮೇರು ವ್ಯಕ್ತಿತ್ವವನ್ನು ಹೊಂದಿ, ಜನಮಾನಸದಲ್ಲಿ ಹೆಸರನ್ನು ಗಳಿಸಿದ್ದರು ಎಂದು ಹೇಳಿದರು.

ಎಲ್ಲರೊಂದಿಗೆ ಅತ್ಮೀಯತೆ- ಮುಂಡ್ಯ ಶ್ರೀಕೃಷ್ಣ ಭಟ್
ಪ್ರಗತಿಪರ ಕೃಷಿಕ ಮುಂಡ್ಯ ಶ್ರೀಕೃಷ್ಣ ಭಟ್‌ರವರು ಮಾತನಾಡಿ ನಿತಿನ್ ಪ್ರಸಾದ್ ರವರು ಸಮಾಜದಲ್ಲಿ ಎಲ್ಲರೊಂದಿಗೆ ಅತ್ಮೀಯತೆಯಿಂದ ಸಾಮಾಜಿಕ ಹಾಗೂ ಧಾರ್ಮಿಕ ಸೇವೆಯನ್ನು ಮಾಡುತ್ತಿದ್ದರು. ಇವರ ಬದುಕು ಸಮಾಜಕ್ಕೆ ಅನುಕರಣೀಯ ಎಂದು ಹೇಳಿದರು.

ಗೌರವಕ್ಕೆ ಪಾತ್ರರಾಗಿದ್ದರು- ಕುಂಬ್ರ ದುರ್ಗಾಪ್ರಸಾದ್ ರೈ
ನ್ಯಾಯವಾದಿ ಕುಂಬ್ರ ದುರ್ಗಾಪ್ರಸಾದ್ ರೈಯವರು ಮಾತನಾಡಿ ನಿತಿನ್ ಪ್ರಸಾದ್‌ರವರು ಉತ್ತಮ ಕೃಷಿಕರಾಗಿ, ಸರಳ ಸಜ್ಜನಿಕೆಯ ಬದುಕಿನಿಂದ ಜೀವನವನ್ನು ಸಾಗಿಸಿ, ಸಮಾಜದಲ್ಲಿ ಗೌರವಕ್ಕೆ ಪಾತ್ರರಾಗಿದ್ದರು ಎಂದು ಹೇಳಿದರು.

ನಿತಿನ್ ಪ್ರಸಾದ್ ಹೆಗ್ಡೆರವರ ಪತ್ನಿ ತಾರಾ ಎನ್ ಹೆಗ್ದೆ, ಪುತ್ರಿ ತನಿಷಾ, ಸಹೋದರಿ ನೂತನ ಹಾಗೂ ಮೇನಾಲ ಏಳ್ನಾಡುಗುತ್ತು, ನೂಜಿಬೈಲು, ಬಾಳ್ಕಟ್ಟಬೀಡು ಮತ್ತು ಕುರಿಕ್ಕಾರ ಕುಟುಂಬಸ್ಥರು ಉಪಸ್ಥಿತರಿದ್ದರು.

ಸಮಾರಂಭದಲ್ಲಿ ಸಾಮಾಜಿಕ, ರಾಜಕೀಯ, ಧಾರ್ಮಿಕ, ಶೈಕ್ಷಣಿಕ ಕ್ಷೇತ್ರದ ಮುಖಂಡರುಗಳು, ಜನಪ್ರತಿನಿಧಿಗಳು, ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಸೇರಿದಂತೆ ಒಂದು ಸಾವಿರಕ್ಕೂ ಹೆಚ್ಚು ಮಂದಿ ಭಾಗವಹಿಸಿದರು.

LEAVE A REPLY

Please enter your comment!
Please enter your name here