ತಾಲೂಕು ಮಟ್ಟದ ಪದವಿ ಪೂರ್ವ ಕಾಲೇಜುಗಳ  ತ್ರೋಬಾಲ್ ಪಂದ್ಯಾಟ – ಫಿಲೋಮಿನಾ ಕಾಲೇಜಿಗೆ ವಿನ್ನರ್ಸ್, ರನ್ನರ್ಸ್ ಪ್ರಶಸ್ತಿ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಪದವಿ ಪೂರ್ವ ಶಿಕ್ಷಣ ಇಲಾಖೆ ದ.ಕ ಹಾಗೂ ಉಪ್ಪಿನಂಗಡಿ ಸರಕಾರಿ ಪದವಿ ಪೂರ್ವ ಕಾಲೇಜಿನ ಸಹಯೋಗದಲ್ಲಿ ಸೆ.9 ರಂದು ನಡೆದ ತಾಲೂಕು ಮಟ್ಟದ ಹುಡುಗರ ಹಾಗೂ ಹುಡುಗಿಯರ ತ್ರೋಬಾಲ್ ಪಂದ್ಯಾಟದಲ್ಲಿ ಮಾಯಿದೆ ದೇವುಸ್ ಚರ್ಚ್ ಸಮೂಹ ಶಿಕ್ಷಣ ಸಂಸ್ಥೆಗಳಲ್ಲೊಂದಾದ ದರ್ಬೆ ಫಿಲೋನಗರದ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜು ಹುಡುಗಿಯರ ವಿಭಾಗದಲ್ಲಿ ವಿನ್ನರ್ಸ್ ಹಾಗೂ ಹುಡುಗರ ವಿಭಾಗದಲ್ಲಿ ರನ್ನರ್ಸ್ ಪ್ರಶಸ್ತಿಯನ್ನು ಗಳಿಸಿರುತ್ತದೆ.

ಹುಡುಗರ ವಿಭಾಗದಲ್ಲಿ ದ್ವಿತೀಯ ವಾಣಿಜ್ಯ ವಿಭಾಗದ ಪಿ.ಅಬ್ದುಲ್ ಹಫೀಜ್, ಅಬ್ದುಲ್ ಶಫೀಕ್, ಮೊಹಮದ್ ತಮೀಝ್, ಪ್ರಥಮ ವಾಣಿಜ್ಯ ವಿಭಾಗದ ಮೊಹಮದ್ ರಯೀಸ್, ಮೊಹಮದ್ ರಿಜಾಸ್, ಅಬೂಬಕ್ಕರ್ ಸಿದ್ಧೀಕ್, ಇಬ್ರಾಹಿಂ ಶಾಝಿಲ್, ಮೊಹಮದ್ ಝಯಾನ್, ದ್ವಿತೀಯ ವಿಜ್ಞಾನ ವಿಭಾಗದ ಮೊಹಮದ್ ಹಿಶಾಮ್, ಜಲಾಲ್ ಅಹಮದ್, ಪಿ.ಕೆ ಮೊಹಮದ್ ಸಮೀಹ್ ಹಾಗೂ ಹುಡುಗಿಯರ ವಿಭಾಗದಲ್ಲಿ ದ್ವಿತೀಯ ವಿಜ್ಞಾನ ವಿಭಾಗದ ಎಂ.ಎಸ್ ಚೈತನ್ಯ, ಡಿಂಪಲ್ ಬಂಗೇರ, ಚೈತ್ರಿಕಾ ಎಂ, ನಫೀಶತ್ ಅಝೀನಾ, ದ್ವಿತೀಯ ಕಲಾ ವಿಭಾಗದ ನವ್ಯಶ್ರೀ ಜಿ, ಪ್ರಥಮ ವಿಜ್ಞಾನ ವಿಭಾಗದ ತನೀಶಾ ಪಿ.ರೈ, ನಾಗಶ್ರೀ ಜೆ.ನಾಕ್, ಅನಘಾ ಕೆ.ಎನ್, ಪ್ರಥಮ ವಾಣಿಜ್ಯ ವಿಭಾಗದ ಪ್ರಥ್ವಿ ಕೆ, ದ್ವಿತೀಯ ವಾಣಿಜ್ಯ ವಿಭಾಗದ ವರ್ಷಾರವರು ಭಾಗವಹಿಸಿದ್ದರು. ಇವರುಗಳಿಗೆ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ಎಲ್ಯಾಸ್ ಪಿಂಟೋ ಹಾಗೂ ರಾಜೇಶ್ ಮೂಲ್ಯರವರು ತರಬೇತಿ ನೀಡಿರುತ್ತಾರೆ. ಕ್ರೀಡಾಪಟುಗಳ ಸಾಧನೆಗೆ ಕಾಲೇಜಿನ ಸಂಚಾಲಕ ವಂ|ಲಾರೆನ್ಸ್ ಮಸ್ಕರೇನ್ಹಸ್, ಪ್ರಾಂಶುಪಾಲ ವಂ|ಅಶೋಕ್ ರಾಯನ್ ಕ್ರಾಸ್ತಾ, ಕ್ಯಾಂಪಸ್ ನಿರ್ದೇಶಕ ವಂ|ಸ್ಟ್ಯಾನಿ ಪಿಂಟೋರವರು ಮೆಚ್ಚುಗೆ ಸೂಚಿಸಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.