








ಕಡಬ: ಕುಟ್ರುಪಾಡಿ ಗ್ರಾಮ ಪಂಚಾಯತಿಯ 2021-22ನೇ ಸಾಲಿನಲ್ಲಿ ಅನುಷ್ಠಾನವಾದ ಕಾಮಗಾರಿ ಮತ್ತು ಲೆಕ್ಕಪತ್ರಗಳ ಜಮಾಬಂದಿ ಸಭೆಯು ಸೆ.13ರಂದು ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ವಾಣಿ ನಾಗೇಶ್ ಇವರ ಅಧ್ಯಕ್ಷತೆಯಲ್ಲಿ ಜರಗಿತು. ಸಭೆಯ ನೋಡಲ್ ಅಧಿಕಾರಿಯಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್ ಆರ್ ಉಪಸ್ಥಿತರಿದ್ದರು, ಸಹಾಯಕ ಅಭಿಯಂತರರಾದ ಸಂಗಪ್ಪ ಹುಕ್ಕೇರಿ, ಗ್ರಾಮ ಪಂಚಾಯತ್ ಸದಸ್ಯರು, ಗ್ರಾಮಸ್ಥರು ಉಪಸ್ಥಿತರಿದ್ದರು. ಆನಂದ ಎ ಸ್ವಾಗತಿಸಿ ವರದಿ ವಾಚಿಸಿದರು.














