ಪುತ್ತೂರು: ಮೂಲಭೂತ ಸೌಕರ್ಯಗಳ ಪೈಕಿ ಅತೀ ಅಗತ್ಯಗಳಲ್ಲಿ ಒಂದಾದ ರಸ್ತೆಯೇ ಇಲ್ಲದೆ ತೊಂದರೆ ಅನುಭವಿಸುತ್ತಿದ್ದ ಪುಣಚ ಸಮೀಪದ ಬಡ ಕುಟುಂಬವೊಂದಕ್ಕೆ ರೈ ಎಸ್ಟೇಟ್ ಎಜುಕೇಶನಲ್ ಚಾರಿಟೇಬಲ್ ಟಸ್ಟ್ ಸ್ಪಂದಿಸಿದೆ.
ಪುಣಚ ಸಮೀಪದ ತೋರಣ ಕಟ್ಟೆ ನಿವಾಸಿ ಪುಷ್ಪಾರವರ ಮನೆಗೆ ಹೋಗಲು ರಸ್ತೆ ಇರಲಿಲ್ಲ. ಅನಾರೋಗ್ಯ ಪೀಡಿತರಾದರೆ ಅಂತವರನ್ನು ಹೊತ್ತುಕೊಂಡು ಹೋಗಬೇಕಾದ ಪರಿಸ್ಥಿತಿ ಇತ್ತು. ಕಳೆದ 15 ವರ್ಷಗಳಿಂದ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳಿಗೆ ಸತತವಾಗಿ ಮನವಿ ಮಾಡಿದ್ದರೂ ರಸ್ತೆಯ ವ್ಯವಸ್ಥೆ ಆಗಿರಲಿಲ್ಲ. ರಸ್ತೆ ಇಲ್ಲದೆ ಬಡ ಕುಟುಂಬದವರು ತೊಂದರೆ ಅನುಭವಿಸುತ್ತಿರುವ ಬಗ್ಗೆ ಇತ್ತೀಚೆಗೆ ಮಾಹಿತಿ ಪಡೆದ ರೈ ಎಸ್ಟೇಟ್ ಎಜುಕೇಶನಲ್ ಚಾರಿಟೇಬಲ್ ಟ್ರಸ್ಟ್ ಪ್ರವರ್ತಕರಾದ ಕೋಡಿಂಬಾಡಿ ರೈ ಎಸ್ಟೇಟ್ ಮಾಲಕ ಅಶೋಕ್ ಕುಮಾರ್ ರೈ ಅವರು ಅಲ್ಲಿಗೆ ತೆರಳಿ ಪರಿಸ್ಥಿತಿ ವೀಕ್ಷಿಸಿದರಲ್ಲದೆ ರಸ್ತೆ ನಿರ್ಮಾಣ ಮಾಡಲು ಬೇಕಾದ ಸಹಾಯ ನೀಡಿದರು. ಇದೀಗ ಬಡ ಕುಟುಂಬಕ್ಕೆ ಮನೆಗೆ ಹೋಗಲು ರಸ್ತೆ ಸಿದ್ಧವಾಗಿದೆ.