ಬೆಳಂದೂರು ಗ್ರಾ.ಪಂ.ಸಾಮಾನ್ಯ ಸಭೆ

0

ವಸತಿ ಯೋಜನೆ ಮನೆ ನಿರ್ಮಾಣ ಪೂರ್ಣಗೊಳಿಸಲು ಅವಧಿ ವಿಸ್ತರಣೆಗೆ ಒತ್ತಾಯ

ಕಾಣಿಯೂರು: ಬೆಳಂದೂರು ಗ್ರಾಮ ಪಂಚಾಯತ್ ಸಾಮಾನ್ಯ ಸಭೆಯು ಗ್ರಾ.ಪಂ.ಅಧ್ಯಕ್ಷರಾದ ಲೋಹಿತಾಕ್ಷ ಕೆಡೆಂಜಿಕಟ್ಟರವರ ಅಧ್ಯಕ್ಷತೆಯಲ್ಲಿ ಗ್ರಾ.ಪಂ.ಸಭಾಂಗಣದಲ್ಲಿ ನಡೆಯಿತು. ವಸತಿ ಯೋಜನೆಯ ಮನೆಗಳನ್ನು ಪೂರ್ಣಗೊಳಿಸಲು ಸರಕಾರವು 90 ದಿನಗಳನ್ನು ನಿಗದಿಪಡಿಸಿರುವುದರಿಂದ ಕೆಲ ಫಲಾನುಭವಿಗಳು ಮನೆ ಕಟ್ಟಲು ಧಾರಕಾರ ಸುರಿದ ಮಳೆಯಿಂದಾಗಿ ಮನೆ ನಿರ್ಮಾಣ ಜಾಗಕ್ಕೆ ವಾಹನದಲ್ಲಿ ಸಾಮಾಗ್ರಿಗಳನ್ನು ಕೊಂಡೊಯ್ಯಲು ಸಾಧ್ಯವಾಗದಿರುವುದರಿಂದ ಇನ್ನೂ 2 ತಿಂಗಳ ಅವಧಿಯನ್ನು ವಿಸ್ತರಣೆಗೊಳಿಸಬೇಕೆಂದು ಸಂಬಂಧಪಟ್ಟ ನಿಗಮಕ್ಕೆ ಬರೆಯಲು ನಿರ್ಣಯ ಕೈಗೊಳ್ಳಲಾಯಿತು. ಬೆಳಂದೂರು ಗ್ರಾಮದ ಪ್ರಗತಿ ಶಾಲೆ ಸಮೀಪ ರಸ್ತೆಯು ಜರಿದು ಹೋಗಿರುವುದರಿಂದ ಅಪಾಯಕಾರಿ ನಾಮಫಲಕ ಅಳವಡಿಸುವಂತೆ ನಿರ್ಣಯಕೈಗೊಳ್ಳಲಾಯಿತು. ಗ್ರಾ.ಪಂ. ಉಪಾಧ್ಯಕ್ಷೆ ತೇಜಾಕ್ಷಿ ಕೊಡಂಗೆ, ಸದಸ್ಯರಾದ ಮೋಹನ್ ಅಗಳಿ, ವಿಠಲ ಗೌಡ ಅಗಳಿ, ಪ್ರವೀಣ್ ಕೆರೆನಾರು, ರವಿಕುಮಾರ್ ಕೆಡೆಂಜಿ, ಜಯರಾಮ ಬೆಳಂದೂರು, ಜಯಂತ ಅಬೀರ, ಉಮೇಶ್ವರಿ ಅಗಳಿ, ಗೌರಿ ಮಾದೋಡಿ, ಗೀತಾ ಕುವೆತ್ತೋಡಿ, ಹರಿಣಾಕ್ಷಿ ಬನಾರಿ, ಪಾರ್ವತಿ ಮರಕ್ಕಡ, ಕುಸುಮಾ ಅಂಕಜಾಲು, ತಾರಾ ಅನ್ಯಾಡಿ ಚರ್ಚೆಯಲ್ಲಿ ಪಾಲ್ಗೊಂಡರು. ಸಿಬ್ಬಂದಿ ಗೀತಾರವರು ಸರಕಾರದ ಸುತ್ತೋಲೆ, ಸಾರ್ವಜನಿಕ ಅರ್ಜಿಗಳನ್ನು ಓದಿದರು. ಪ್ರಭಾರ ಪಂಚಾಯತ್ ಅಭಿವೃದ್ಧಿ ಅಧಿಕಾರಿ ನಾರಾಯಣರವರು ಸಭೆ ನಿರ್ವಹಿಸಿದರು. ಸಿಬ್ಬಂದಿಗಳಾದ ಹರ್ಷಿತ್ ಕೂರ, ಮಮತಾ, ಸಂತೋಷ್‌ರವರು ಸಹಕರಿಸಿದರು.

LEAVE A REPLY

Please enter your comment!
Please enter your name here