ಕಾಣಿಯೂರು ಗ್ರಾ.ಪಂ. ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾರ್ಯಗಳ ಕುರಿತು ಸಭೆ

0

  • ಸಬ್‌ಸ್ಟೇಶನ್ ಶೀಘ್ರ ಸ್ಥಾಪನೆ, ಆರೋಗ್ಯ ಕೇಂದ್ರದಲ್ಲಿ ಖಾಲಿಯಿರುವ ಹುದ್ದೆಗಳ ಸಹಿತ ವಿವಿಧ ಬೇಡಿಕೆಗಾಗಿ ಸಚಿವರಿಗೆ ಮನವಿ ಮಾಡಲು ನಿರ್ಧಾರ

ಕಾಣಿಯೂರು: ಕಾಣಿಯೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾರ್ಯಗಳ ಕುರಿತು ಗ್ರಾ.ಪಂ.ವ್ಯಾಪ್ತಿಯ ಪ್ರಮುಖರ ಸಭೆಯು ಚಾರ್ವಾಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಾಣಿಯೂರಿನ ಸಭಾಭವನದಲ್ಲಿ ಸೆ.13ರಂದು ನಡೆಯಿತು.

ಈ ಸಂದರ್ಭದಲ್ಲಿ ಕಾಣಿಯೂರು ಗ್ರಾ.ಪಂ. ಉಪಾಧ್ಯಕ್ಷರು, ಬೆಳಂದೂರು ಬಿಜೆಪಿ ಮಹಾ ಶಕ್ತಿ ಕೇಂದ್ರದ ಅಧ್ಯಕ್ಷ ಗಣೇಶ್ ಉದನಡ್ಕ ಮಾತನಾಡಿ, ಕಾಣಿಯೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಮೆಸ್ಕಾಂ ಸಬ್‌ಸ್ಟೇಶನ್‌ನ ಉದ್ದೇಶವನ್ನು ಇಟ್ಟುಕೊಂಡಿದ್ದು, ಸಬ್‌ಸ್ಟೇಶನ್ ಬೇಡಿಕೆ ಬಗ್ಗೆ ಸಂಬಂಧಪಟ್ಟ ಸಚಿವರುಗಳಿಗೆ ಈಗಾಗಲೇ ಮನವಿ ಮಾಡಲಾಗಿದೆ. ಈ ನಿಟ್ಟಿನಲ್ಲಿ ಚಾರ್ವಾಕ ಗ್ರಾಮದ ಮುದುವ ಎಂಬಲ್ಲಿ ಸುಮಾರು ೭೦ಸೆಂಟ್ಸ್ ನಿವೇಶನವನ್ನು ಸಬ್‌ಸ್ಟೇಶನ್ ಉದ್ದೇಶಕ್ಕಾಗಿ ಕಾದಿರಿಸಲಾಗಿದ್ದು, ಮುಂದಿನ ಹಂತವಾಗಿ ಸಬ್‌ಸ್ಟೇಶನ್ ಶೀಘ್ರದಲ್ಲಿ ಕಾರ್ಯರೂಪಕ್ಕೆ ತರುವ ನಿಟ್ಟಿನಲ್ಲಿ ಸಚಿವರಾದ ಎಸ್ ಅಂಗಾರ, ಇಂಧನ ಸಚಿವ ಸುನಿಲ್ ಕುಮಾರ್, ಸಂಸದರಾದ ಶೋಭಾ ಕರಂದ್ಲಾಜೆ, ನಳಿನ್ ಕುಮಾರ್ ಕಟೀಲ್‌ರವರಿಗೆ ಮನವಿ ಮಾಡಲಾಗುವುದು. ಅಲ್ಲದೇ ಕಾಣಿಯೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಖಾಲಿಯಿರುವ ಹುದ್ದೆಗಳನ್ನು ನೇಮಕ ಮಾಡುವಂತೆ ಆರೋಗ್ಯ ಸಚಿವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗುವುದು, ಜೊತೆಗೆ ಚಾರ್ವಾಕ ಗ್ರಾಮದ ಕುಂಬ್ಲಾಡಿ ಐರಳ ಎಂಬಲ್ಲಿ ಈಗಾಗಲೇ ಹಲವಾರು ದುರಂತಗಳು ನಡೆದಿದ್ದು, ಇಲ್ಲಿ ಸೇತುವೆ ನಿರ್ಮಾಣಕ್ಕೆ ಬೇಡಿಕೆ ಸಲ್ಲಿಸಲಾಗುವುದು ಮತ್ತು ಕಾಣಿಯೂರು ಪ್ರೌಢ ಶಾಲೆಯ ಕಟ್ಟಡ ನಿರ್ಮಾಣ ಹಾಗೂ ರಸ್ತೆ ದುರಸ್ಥಿಗಾಗಿ ಸಚಿವರಿಗೆ ಮನವಿ ಮಾಡಲಾಗುವುದು ಎಂದವರು ರಾಜ್ಯ ಸಚಿವರಾದ ಎಸ್. ಅಂಗಾರರವರ ಶಿಫಾರಸಿನಂತೆ ಕೇಂದ್ರ ಸಚಿವರಾದ ಶೋಭಾ ಕರಂದ್ಲಾಜೆಯವರ ಪ್ರಯತ್ನದೊಂದಿಗೆ ಸಚಿವ ಕೋಟ ಶ್ರೀನಿವಾಸ್ ಪೂಜಾರಿಯವರ ವಿಶೇಷ ಅನುದಾನದಲ್ಲಿ ಬೈತಡ್ಕ – ನಾಣಿಲ-ಗುಜ್ಜರ್ಮೆ ರಸ್ತೆಯು ರೂ ೩ಕೋಟಿಯಲ್ಲಿ ಅಭಿವೃದ್ಧಿಗೊಂಡಿದ್ದು, ಶೀಘ್ರದಲ್ಲಿ ಉದ್ಘಾಟನೆಗೊಳ್ಳಲಿದೆ ಎಂದರು.

ಕಾಣಿಯೂರು ಗ್ರಾ.ಪಂ. ಅಧ್ಯಕ್ಷೆ ಲಲಿತಾ ದರ್ಖಾಸು, ಚಾರ್ವಾಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಆನಂದ ಗೌಡ ಮೇಲ್ಮನೆ, ಚಾರ್ವಾಕ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಧನಂಜಯ ಕೇನಾಜೆ, ಉಪಾಧ್ಯಕ್ಷ ಬಾಲಕೃಷ್ಣ ಗೌಡ ಇಡ್ಯಡ್ಕ, ಚಾರ್ವಾಕ ಸಿ.ಎ ಬ್ಯಾಂಕ್ ಉಪಾಧ್ಯಕ್ಷ ಮುರಳೀಧರ ಪುಣ್ಚತ್ತಾರು ಸುಳ್ಯ ಬಿಜೆಪಿ ಮಂಡಲ ಸಮಿತಿ ಸದಸ್ಯ ಶಿವರಾಮ ರೈ ಪಿಜಕ್ಕಳ, ಸಹಕಾರ ಪ್ರಕೋಷ್ಠದ ಸದಸ್ಯ ಧರ್ಮೇಂದ್ರ ಗೌಡ ಕಟ್ಟತ್ತಾರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ರಾಮಣ್ಣ ಗೌಡ ಮುಗರಂಜ, ದೇವಿಪ್ರಸಾದ್ ದೋಳ್ಪಾಡಿ, ವಿಶ್ವನಾಥ ದೇವಿನಗರ, ವಸಂತ ದಲಾರಿ, ಬಾಲಕೃಷ್ಣ ರೈ ಕಾಸ್ಪಾಡಿಗುತ್ತು, ಕೀರ್ತಿಕುಮಾರಿ ಅಂಬುಲ, ತೇಜಕುಮಾರಿ ಉದ್ಲಡ್ಡ, ಅಂಬಾಕ್ಷಿ ಕೂರೇಲು, ಗಂಗಮ್ಮ ಗುಜ್ಜರ್ಮೆ, ಸುಲೋಚನಾ ಮಿಯೋಳ್ಪೆ, ಪ್ರವೀಣ್‌ಚಂದ್ರ ರೈ ಕುಮೇರು, ಸುರೇಶ್ ಓಡಬಾಯಿ, ಪುರಂದರ ಗೌಡ ಮಾಳ, ಪುಟ್ಟಣ್ಣ ಗೌಡ ಮುಗರಂಜ, ಕುಸುಮಾಧರ ಇಡ್ಯಡ್ಕ, ಅನಂತಕುಮಾರ್ ಬೈಲಂಗಡಿ, ವಿಶ್ವನಾಥ ಮರಕ್ಕಡ, ಕೊರಗಪ್ಪ ಗೌಡ ಇಡ್ಯಡ್ಕ, ಹೊನ್ನಪ್ಪ ಗೌಡ ಕೀಲೆ, ಲಕ್ಷ್ಮಣ ಗೌಡ ಮುಗರಂಜ, ಗೋಪಾಲಕೃಷ್ಣ ಅಬಿಕಾರ, ಮೀರಾ ದೋಳ್ಪಾಡಿ, ಸುನಂದ ಅಬ್ಬಡ, ಯಶವಂತ ಗೌಡ, ಮಾಧವ ಗೌಡ ಕಟ್ಟತ್ತಾರು, ಸುಂದರ ಬೆದ್ರಾಜೆ, ಸುರೇಶ್ ಬಂಡಾಜೆ, ವೀರಪ್ಪ ಗೌಡ ಉದ್ಲಡ್ಡ, ಸದಾಶಿವ ಜತ್ತೋಡಿ, ಸೀತಾರಾಮ ಎಣ್ಮೂರು, ರಾಧಾಕೃಷ್ಣ, ಯತೀಶ್, ಪುನಿತ್ ಮರ್ಲಾಣಿ, ಜತ್ತಪ್ಪ ಗೌಡ ಉದ್ಲಡ್ಡ ಉಪಸ್ಥಿತರಿದ್ದರು. ಸುಳ್ಯ ಬಿಜೆಪಿ ಮಂಡಲ ಸಮಿತಿ ಸದಸ್ಯ ಶಿವರಾಮ ರೈ ಪಿಜಕ್ಕಳ ಸ್ವಾಗತಿಸಿ, ಸಹಕಾರ ಪ್ರಕೋಷ್ಠದ ಸದಸ್ಯ ಧರ್ಮೇಂದ್ರ ಗೌಡ ಕಟ್ಟತ್ತಾರು ವಂದಿಸಿದರು.

LEAVE A REPLY

Please enter your comment!
Please enter your name here