ನಿಡ್ಪಳ್ಳಿ; ಶ್ರೀ ಕ್ಷೇ.ಧ.ಗ್ರಾ.ಯೋಜನೆಯ ಒಕ್ಕೂಟದ ತ್ರೈಮಾಸಿಕ ಸಭೆ

0

ನಿಡ್ಪಳ್ಳಿ; ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ.ಟ್ರಸ್ಟ್ ಪುತ್ತೂರು, ಬೆಟ್ಟಂಪಾಡಿ ವಲಯದ ನಿಡ್ಪಳ್ಳಿ ಒಕ್ಕೂಟದ ತ್ರೈಮಾಸಿಕ ಸಭೆ ಒಕ್ಕೂಟದ ಅಧ್ಯಕ್ಷ ರಾಧಾಕೃಷ್ಣ ಪಾಟಾಳಿ ಬಡಕ್ಕಾಯೂರು ಇವರ ಅಧ್ಯಕ್ಷತೆಯಲ್ಲಿ ಡಿ.7 ರಂದು ನಿಡ್ಪಳ್ಳಿ ಶ್ರೀ ಶಾಂತದುರ್ಗಾ ದೇವಸ್ಥಾನದ ಅನುಗ್ರಹ ಸಭಾ ಭವನದಲ್ಲಿ ನಡೆಯಿತು.

ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಇಂಚರ ಫೌಂಡೇಶನ್ ಪುತ್ತೂರು ಇದರ ಕೌನ್ಸಿಲರ್ ಕು.ಶ್ವೇತಾ  ಅರೋಗ್ಯಕರ ಜೀವನ ನಡೆಸುವ ಬಗ್ಗೆ ಮಾಹಿತಿ ನೀಡಿದರು.

  ಯೋಜನೆಯ ತಾಲೂಕು ಲೆಕ್ಕ ಪರಿಶೋಧಕಿ ಲತಾ ಇವರು ಮಾತನಾಡಿ ಸಂಘದ ಗುಣ ಲಕ್ಷಣಗಳು ಮತ್ತು ಸಂಘದಲ್ಲಿ ಸದಸ್ಯರು ವ್ಯವಹರಿಸಲು ಇರ ಬೇಕಾದ ಅರ್ಹತೆ ಹಾಗೂ ಯೋಜನೆಯ ನಿಯಮಗಳ ಬಗ್ಗೆ ಮಾಹಿತಿ ನೀಡಿದರು.

    ಸೇವಾ ಪ್ರತಿನಿಧಿ ಶಾಲಿನಿ.ಕೆ ಒಕ್ಕೂಟದ ಮಾಹಿತಿ ನೀಡಿದರು.ದೇವಸ್ಥಾನದ ಆಡಳಿತ ಮಂಡಳಿ ಕಾರ್ಯದರ್ಶಿ ಮಂಜುನಾಥ ರೈ ವೇದಿಕೆಯಲ್ಲಿ ಉಪಸ್ಥಿತರಿದ್ದರು.

       ಸಾಮೂಹಿಕ ಧ್ಯೇಯ ಗೀತೆಯೊಂದಿಗೆ ಆರಂಭವಾದ ಸಭೆಯಲ್ಲಿ ಸಿದ್ದಿವಿನಾಯಕ ತಂಡದ ಸದಸ್ಯ ಐತ್ತಪ್ಪ ನಾಯ್ಕ ಸ್ವಾಗತಿಸಿದರು. ಅಂದಿನ ಜವಾಬ್ದಾರಿ ತಂಡಗಳಾದ ಸಿದ್ದಿವಿನಾಯಕ ತಂಡದ ಕುಶಾಲಪ್ಪ ನಾಯ್ಕ ಮತ್ತು ಶಾಂಭವಿ ತಂಡದ ಕವಿತಾ  ತಂಡದ ವರದಿ ವಾಚಿಸಿದರು. ಒಕ್ಕೂಟದ ಕಾರ್ಯದರ್ಶಿ ಶ್ರೀಮತಿ.ಕೆ ಒಕ್ಕೂಟದ ವರದಿ ವಾಚಿಸಿದರು.ಸಂಘಗಳ ಹಾಜರಾತಿ ಮತ್ತು ಗ್ರೇಡಿಂಗ್  ನಡೆಸಲಾಯಿತು.ಶಾಂಭವಿ ತಂಡದ ಮಾಲತಿ ವಂದಿಸಿದರು.ಒಕ್ಕೂಟದ ಸದಸ್ಯರು ಪಾಲ್ಗೊಂಡರು.

 ಇತರ ಪಮುಖ್ಯ ನಿರ್ಣಯಗಳು;
ಪ್ರಸ್ತುತ ಇರುವ ಒಕ್ಕೂಟ ರಚನೆಯಾಗಿ 5 ವರ್ಷ ಆದ ಕಾರಣ ಫೆಬ್ರವರಿ ತಿಂಗಳಲ್ಲಿ ಒಕ್ಕೂಟ ಸಭೆ ಸೇರಿ ನೂತನ ಒಕ್ಕೂಟ ರಚಿಸುವುದು.ಸಂಘದ ಸದಸ್ಯರಿಗೆ ಕ್ರೀಡಾಕೂಟ ನಡೆಸುವುದು. ಅಲ್ಲದೆ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಮತ್ತು ನೂತನ ಒಕ್ಕೂಟದ ಪದಗ್ರಹಣ ಕಾರ್ಯಕ್ರಮ ನಡೆಸಲು ದಿನ ನಿಗದಿ ಗೊಳಿಸುವುದು ಪ್ರಮುಖ ನಿರ್ಣಯಗಳು.

LEAVE A REPLY

Please enter your comment!
Please enter your name here