ಶ್ರೀಧರ ಗೌಡ ಅಂಗಡಿಹಿತ್ಲು ಅವರಿಗೆ ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘ ಕುಂಬ್ರ ಶಾಖೆ ವತಿಯಿಂದ ಗೌರವಾರ್ಪಣೆ

0

ಕುಂಬ್ರ: ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಕೊಳ್ತಿಗೆ ಇದರ ನಿರ್ದೇಶಕರಾಗಿ ಆಯ್ಕೆಗೊಂಡ ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘ ಕುಂಬ್ರ ಶಾಖೆ ಇದರ ಸಲಹಾ ಸಮಿತಿ ಸದಸ್ಯರಾಗಿರುವ ಶ್ರೀಧರ ಗೌಡ ಅಂಗಡಿಹಿತ್ಲು ಇವರನ್ನು ಶಾಖೆಯ ಸಲಹಾ ಸಮಿತಿಯ ಸಭೆಯಲ್ಲಿ ಶಾಲು, ಹಾರ ಸ್ಮರಣಿಕೆ ಹೂಗುಚ್ಛ ನೀಡಿ ಗೌರವಿಸಲಾಯಿತು.

ಇದೇ ಸಂದರ್ಭದಲ್ಲಿ ಕುಂಬ್ರ ಶಾಖೆಯ ಸಾಲದ ದಾಖಲೆಗಳ ಮೌಲ್ಯಮಾಪಕರಾಗಿ ನೇಮಕಗೊಂಡ ಕುಂಬ್ರ ಎಸ್ ಜಿ ಕನ್ಸ್ಟ್ರಕ್ಷನ್ ನ ಶರತ್ ಗೌಡ ಗುತ್ತು ಇವರಿಗೂ ಶಾಲು ಹಾಕಿ ಹೂಗುಚ್ಛ ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘ ಪುತ್ತೂರು ಇದರ ಅಧ್ಯಕ್ಷರಾದ ಚಿದಾನಂದ ಬೈಲಾಡಿ, ನಿರ್ದೇಶಕರು ಕುಂಬ್ರ ಶಾಖೆಯ ಸಲಹಾ ಸಮಿತಿ ಅಧ್ಯಕ್ಷರಾದ ಲೋಕೇಶ್ ಚಾಕೋಟೆ, ನಿರ್ದೇಶಕ ಹಾಗೂ ಕುಂಬ್ರ ಶಾಖ ಸಲಹಾ ಸಮಿತಿ ಉಪಾಧ್ಯಕ್ಷರಾದ ಸತೀಶ್ ಪಾಂಬಾರು,ಗೌರವ ಸಲಹೆಗಾರರು ಹಾಗೂ ಸಲಹಾ ಸಮಿತಿ ಸದಸ್ಯರಾದ ಶಿವರಾಮ ಗೌಡ ಇದ್ಯಾಪೆ, ಮಾಜಿ ನಿರ್ದೇಶಕರು,ಸಲಹಾ ಸಮಿತಿಯ ಸದಸ್ಯರು ರೇಖಾ ಆರ್ ಗೌಡ, ನಾಗಪ್ಪ ಗೌಡ ಬೊಮ್ಮೆಟ್ಟಿ, ಚಂದ್ರಶೇಖರ ಗೌಡ ಸಾರೆಪ್ಪಡಿ,ರಾಮಣ್ಣ ಗೌಡ ಬಸವಹಿತ್ಲು, ಶ್ರೀಧರ ಗೌಡ ಎರಕ್ಕಲ, ವಿಜಯಭಾರತಿ, ರಾಮಕೃಷ್ಣ ಗೌಡ ಸಾಮೆತ್ತಡ್ಕ,ತಿರುಮಲೇಶ್ವರ ಗೌಡ ದೊಡ್ಡಮನೆ,ವಿಶ್ವನಾಥ ಗೌಡ ಬೊಳ್ಳಡಿ,ಸುಬ್ರಾಯ ಗೌಡ ಪಾಲ್ತಾಡಿ,ಉಮೇಶ್ ಗೌಡ ಕನ್ನಯ ಸಂಘದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಸುಧಾಕರ್ ಕೆ,ಕುಂಬ್ರ ಶಾಖ ಪ್ರಭಾರ ಮೆನೇಜರ್ ಹರೀಶ್ ವೈ, ಸಿಬ್ಬಂದಿಗಳಾದ ಕಾವ್ಯ ಎ ಎಸ್,ದಿನೇಶ್ ಕುಮಾರ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here