ಪೆರ್ನೆಯಲ್ಲಿ ಬೆಳ್ಳಿಪ್ಪಾಡಿ ರಮಾನಾಥ ರೈಯವರ 71ನೇ ಹುಟ್ಟುಹಬ್ಬ ಆಚರಣೆ, ರಕ್ತದಾನ, ಸಾಧಕರಿಗೆ ಸನ್ಮಾನ

0

ರಮಾನಾಥ ರೈ ನ್ಯಾಯೋಚಿತ ಜನಪ್ರತಿನಿಧಿ-ಮಧು ಬಂಗಾರಪ್ಪ

ಉಪ್ಪಿನಂಗಡಿ: ರಮಾನಾಥ ರೈಯವರು ಶುಭ್ರ ಮನಸ್ಸಿನ, ಸಾಮಾಜಿಕ ಕಳಕಳಿಯುಳ್ಳ ರಾಜಕಾರಣಿಯಾಗಿದ್ದು, ನ್ಯಾಯೋಚಿತ ಜನಪ್ರತಿನಿಽಯಾಗಿರುತ್ತಾರೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಉಪಾಧ್ಯಕ್ಷ ಮಧು ಬಂಗಾರಪ್ಪ ಶ್ಲಾಘನೆ ವ್ಯಕ್ತಪಡಿಸಿದರು.

ಮಾಜಿ ಸಚಿವ ಬಿ. ರಮಾನಾಥ ರೈಯವರ 71ನೇ ಹುಟ್ಟುಹಬ್ಬದ ಪ್ರಯುಕ್ತ ಸೆ. 14ರಂದು ಪೆರ್ನೆಯಲ್ಲಿ ಬೆಳ್ಳಿಪ್ಪಾಡಿ ರಮಾನಾಥ ರೈ ಹುಟ್ಟು ಹಬ್ಬ ಅಭಿನಂದನಾ ಸಮಿತಿ, ಯುವ ಕಾಂಗ್ರೆಸ್ ವಿಟ್ಲ-ಉಪ್ಪಿನಂಗಡಿ ಮತ್ತು ವಲಯ ಕಾಂಗ್ರೆಸ್ ಪೆರ್ನೆ-ಬಿಳಿಯೂರು ಇವುಗಳ ಸಂಯುಕ್ತ ಆಶ್ರಯದಲ್ಲಿ ಪೆರ್ನೆಯ ಎ.ಎಂ. ಅಡಿಟೋರಿಯಂನಲ್ಲಿ ನಡೆದ ರಕ್ತದಾನ ಶಿಬಿರ, ಸಾಧಕರಿಗೆ ಸನ್ಮಾನ ಕಾರ್ಯಕ್ರಮವನ್ನು ಅವರು ಉದ್ಘಾಟಿಸಿ ಮಾತನಾಡಿ ರೈಯವರು ಸಚಿವರಾಗಿದ್ದ ವೇಳೆ ಪಕ್ಷ ರಾಜಕಾರಣ ಮಾಡದೇ ರಾಜ್ಯದ ಎಲ್ಲಾ ಜನತೆಯನ್ನು ಸಮಾನರಾಗಿ ಕಂಡು ನ್ಯಾಯವೊದಗಿಸಿದ ಅಪರೂಪದ ಜನಪ್ರತಿನಿಧಿ ಎಂದು ಬಣ್ಣಿಸಿದರು.

ತಾನು ಜೆಡಿಎಸ್. ಶಾಸಕನಾಗಿದ್ದ ಸಂದರ್ಭ ರಮಾನಾಥ ರೈಯವರು ಸಚಿವರಾಗಿದ್ದುಕೊಂಡು ಅವರ ಸ್ವಪಕ್ಷದವರ ಒತ್ತಡಕ್ಕೂ ಮಣಿಯದೇ ನ್ಯಾಯದ ಕಡೆ ನೋಡಿ ನನ್ನ ಕೆಲಸಗಳನ್ನು ಮಾಡಿ ಕೊಟ್ಟಿದ್ದಾರೆ. ಇಂತಹ ಕೆಲಸಗಳ ಮೂಲಕ ಓರ್ವ ಜನಪ್ರತಿನಿಽಯಾಗಿದ್ದುಕೊಂಡು ತಮ್ಮ ಪಕ್ಷದ ಪರ ನಿಲ್ಲದೆ ನ್ಯಾಯದ ಪರ ನಿಲ್ಲುವ ಶುಭ್ರ ವ್ಯಕ್ತಿತ್ವ ರಮಾನಾಥ ರೈಯವರದ್ದು. ಉತ್ತಮ ಅಭಿವೃದ್ಧಿ ಕೆಲಸಗಾರನಾಗಿರುವ ಇವರ ಸೇವೆ ಒಂದು ಕ್ಷೇತ್ರಕ್ಕೆ ಸೀಮಿತವಾಗಿರದೇ ರಾಜ್ಯವ್ಯಾಪ್ತಿ ಸಿಗುವಂತಾಗಲಿ ಎಂದು ಹಾರೈಸಿದ
ತನ್ನ ತಂದೆ ಬಂಗಾರಪ್ಪನವರು ಮುಖ್ಯಮಂತ್ರಿಯಾಗಿದ್ದ ಸಂದರ್ಭ ರೈತ ಪರ ಆಡಳಿತ ನಡೆಸಿದ್ದು, ರೈತರ ಕೃಷಿ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್ ಯೋಜನೆಯನ್ನು ಜಾರಿಗೆ ತಂದಿದ್ದಾರೆ. ಆದರೆ ಇಂದು ಆಡಳಿತದಲ್ಲಿರುವ ಬಿಜೆಪಿ ಸರ್ಕಾರ ಅದನ್ನು ರೈತರಿಂದ ಕಸಿದುಕೊಳ್ಳಲು ನೋಡುತ್ತಿದೆ, ಆದ್ದರಿಂದ ಬಡವರ, ರೈತರ ಬಗ್ಗೆ ಕಾಳಜಿ ಇರುವ ಕಾಂಗ್ರೆಸ್ ಸರ್ಕಾರವನ್ನು ಮತ್ತೊಮ್ಮೆ ಆಡಳಿತ ತರಬೇಕು ಎಂದು ಮಧು ಬಂಗಾರಪ್ಪ ಕರೆ ನೀಡಿದರು.

ಮಾಜಿ ಶಾಸಕಿ ಶಕುಂತಳಾ ಟಿ. ಶೆಟ್ಟಿ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿ ರಮಾನಾಥ ರೈಯವರ ಹುಟ್ಟು ಹಬ್ಬವನ್ನು ರಕ್ತದಾನ ಶಿಬಿರ ನಡೆಸುವ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ನೀಡಿದಂತಾಗಿದೆ. ಈ ಭಾಗದ ಜನರು ಅವರ ಮೇಲೆ ಇಟ್ಟಿರುವ ಅಭಿಮಾನವನ್ನು ವಿಶಿಷ್ಠ ರೀತಿಯಲ್ಲಿ ತೋರಿಸಿಕೊಂಡಿದ್ದೀರಿ, ಇದು ಹೆಮ್ಮೆಯ ವಿಚಾರ ಎಂದರು.

ಪೆರ್ನೆಯ ವೇದಮೂರ್ತಿ ವಿದ್ವಾನ್ ಕೆ. ಕೃಷ್ಣಮೂರ್ತಿ ಕಾರಂತ, ಕೆಮ್ಮಾರ ಸಂಶುಲ್ ಉಲೇಮ ಮೆಮೋರಿಯಲ್ ಕಾಲೇಜಿನ ಅಧ್ಯಕ್ಷ ಎಸ್.ಬಿ. ಮುಹಮ್ಮದ್ ದಾರಿಮಿ, ಪುತ್ತೂರು ಮಾಯಿದೆ ದೇವುಸ್ ಚರ್ಚ್‌ನ ಪ್ರಧಾನ ಧರ್ಮಗುರು ಲಾರೆನ್ಸ್ ಮಸ್ಕರೇನಸ್ ಶುಭಾಶೀರ್ವಚನ ನೀಡಿದರು.

ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ. ರಾಜಾರಾಂ ಕೆ.ಬಿ. ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ರಾಣಿ ಅಬ್ಬಕ್ಕ ಸಂಶೋಧನಾ ಕೇಂದ್ರದ ಸಂಸ್ಥಾಪಕ ತುಕರಾಮ ಪೂಜಾರಿ ಸೇರಿದಂತೆ ಸಮಾಜದ ವಿವಿಧ ಕ್ಷೇತ್ರದಲ್ಲಿ ಗಣನೀಯವಾಗಿ ಸೇವೆ ಸಲ್ಲಿಸಿದ 34 ಮಂದಿಯನ್ನು ಸನ್ಮಾನಿಸಿ, ಗೌರವಿಸಲಾಯಿತು. ಪುಟಾಣಿ ಮಕ್ಕಳೊಂದಿಗೆ ಸೇರಿಕೊಂಡು ಕೇಕ್ ಕತ್ತರಿಸಿ ಹುಟ್ಟು ಹಬ್ಬ ಆಚರಿಸಿದ ರಮಾನಾಥ ರೈಯವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ದ.ಕ. ಜಿಲ್ಲಾ ಯೂತ್ ಕಾಂಗ್ರೆಸ್ ಅಧ್ಯಕ್ಷ ಲುಕ್ಮಾನ್ ಬಂಟ್ವಾಳ, ಕೆ.ಪಿ.ಸಿ.ಸಿ. ಸದಸ್ಯ ಡಾ. ಬಿ. ರಘು, ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಮಾಜಿ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ನಿತ್ಯಾನಂದ ಮುಂಡೋಡಿ, ಪೆರ್ನೆ ಸಹಕಾರಿ ಸಂಘದ ಅಧ್ಯಕ್ಷ ತೋಯಜಾಕ್ಷ ಶೆಟ್ಟಿ, ಪೆರ್ನೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಸುನಿಲ್ ನೆಲ್ಸನ್ ಪಿಂಟೋ, ಸಾಗರದ ಕಾಂಗ್ರೆಸ್ ಮುಖಂಡ ಭಾಸ್ಕರ ಶೆಟ್ಟಿ ಉಪಸ್ಥಿತರಿದ್ದರು.

ಜಿಲ್ಲಾ ಕಾಂಗ್ರೆಸ್ ಪದಾಽಕಾರಿಗಳಾದ ಪ್ರವೀಣ್ ಚಂದ್ರ ಆಳ್ವ, ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ವಿಜಯಕುಮಾರ್ ಸೊರಕೆ, ಎಂ.ಎಸ್. ಮುಹಮ್ಮದ್, ಸರ್ವೋತ್ತಮ ಗೌಡ, ಸತೀಶ್ ಕುಮಾರ್ ಕೆಡೆಂಜಿ, ದಿವ್ಯಪ್ರಭಾ ಚಿಲ್ತಡ್ಕ, ಉಷಾ ಅಂಚನ್, ರಾಜೀವಿ ರೈ, ಕೆ.ಪಿ. ಥೋಮಸ್, ಇಬ್ರಾಹಿಂ ಕೆ., ಶಿವನಾಥ ರೈ ಮೇಗಿನಗುತ್ತು, ಮ್ಯಾಕ್ಸಿಂ ರೆಬೆಲ್ಲೋ, ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಹಿಮಾನ್ ಯುನಿಕ್, ನೆಕ್ಕಿಲಾಡಿ ವಲಯ ಕಾಂಗ್ರೆಸ್ ಅಧ್ಯಕ್ಷೆ ಅನಿ ಮಿನೇಜಸ್, ಪೆರ್ನೆ ವಲಯ ಕಾಂಗ್ರೆಸ್ ಅಧ್ಯಕ್ಷ ಅಬ್ದುಲ್ ಶಾಫಿ, ಪೆರ್ನೆ ಗ್ರಾಮ ಪಂಚಾಯಿತಿ ಸದಸ್ಯ ತನಿಯಪ್ಪ ಪೂಜಾರಿ ಬೆಳಿಯೂರು, ಪೆರ್ನೆ ಯುವ ಕಾಂಗ್ರೆಸ್ ಅಧ್ಯಕ್ಷ ಮುಹಮ್ಮದ್ -ರೂಕ್, ಖಲಂದರ್ ಶಾಫಿ ನೆಕ್ಕಿಲಾಡಿ, ಸತ್ಯವತಿ ಪೂಂಜಾ, ಜಯಶೀಲ ಶೆಟ್ಟಿ, ಸುಲೈಮಾನ್, ಮಿತ್ರದಾಸ್ ರೈ, ಇಸ್ಮಾಯಿಲ್ ಶಾಫಿ, ಕೃಷ್ಣರಾವ್ ಅರ್ತಿಲ, ಯೋಗೀಶ್ ಸಾಮಾನಿ ಸಂಪಿಗೆದಡಿ, ಪಂಜಿಗುಡ್ಡೆ ಈಶ್ವರ ಭಟ್, ದೇವಿಪ್ರಸಾದ್ ರೈ ಮತ್ತಿತರರು ಉಪಸ್ಥಿತರಿದ್ದರು.

ಅಭಿನಂದನ ಸಮಿತಿ ಅಧ್ಯಕ್ಷ ಮುರಳೀಧರ ರೈ ಮಠಂತಬೆಟ್ಟು ಸ್ವಾಗತಿಸಿ, ಕಾರ್ಯದರ್ಶಿ ಉಮಾನಾಥ ಶೆಟ್ಟಿ ಪೆರ್ನೆ ಪ್ರಾಸ್ತಾವಿಕವಾಗಿ ಮಾತನಾಡಿದರು. ನಿರಂಜನ್ ರೈ ಮಠಂತಬೆಟ್ಟು ವಂದಿಸಿ, ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here