ಅಧ್ಯಕ್ಷ: ತಿಲಕ್ ರೈ ಕುತ್ಯಾಡಿ, ಪ್ರ.ಕಾರ್ಯದರ್ಶಿ: ಶ್ರೀಧರ್ ರೈ ಕೋಡಂಬು, ಕೋಶಾಧಿಕಾರಿ ರಕ್ಷಿತಾ ಎಚ್. ನಾಯ್ಕ್
ಪುತ್ತೂರು : ಕರ್ನಾಟಕ ಪತ್ರಕರ್ತರ ಸಂಘ ಪುತ್ತೂರು ತಾಲೂಕು ಘಟಕದ ವಾರ್ಷಿಕ ಮಹಾಸಭೆ ಮತ್ತು 2022-23ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ನೆಲ್ಲಿಕಟ್ಟೆ ಮಾತೃಛಾಯಾ ಸಭಾಂಗಣದಲ್ಲಿ ನಡೆಯಿತು.
ಪುತ್ತೂರು ತಾಲೂಕು ಘಟಕದ ಪ್ರಧಾನ ಕಾರ್ಯದರ್ಶಿ ಲಕ್ಷ್ಮಿಕಾಂತ್ ರೈ ಅನಿಕೂಟೇಲು ವಾರ್ಷಿಕ ವರದಿ ವಾಚಿಸಿ ಕಳೆದ ಸಾಲಿನಲ್ಲಿ ಸಂಘದ ವತಿಯಿಂದ ನಡೆದ ಕಾರ್ಯಕ್ರಮ ಹಾಗೂ ಮಾಹಿತಿ ನೀಡಿದರು. ಬಳಿಕ ವಾರ್ಷಿಕ ಲೆಕ್ಕಪತ್ರ ಮಂಡಿಸಿದರು. ಸಂಘದ ದ.ಕ.ಜಿಲ್ಲಾಧ್ಯಕ್ಷ ಸುದೇಶ್ ಕುಮಾರ್ ಮಾತನಾಡಿ ಕರ್ನಾಟಕ ಪತ್ರಕರ್ತರ ಸಂಘದಿಂದ ಸದಸ್ಯರಿಗೆ ನೀಡಲಾಗುವ ಗುಂಪು ವಿಮೆ, ಅಪಘಾತ ವಿಮೆ ಹಾಗೂ ಇತರ ಮಾಹಿತಿ ತಿಳಿಸಿದರು. ಸಂಘ ಈವರೆಗೆ ಮಾಡಿದ ಕಾರ್ಯಸಾದನೆಗೆ ಮೆಚ್ಚುಗೆ ವ್ಯಕ್ತಪಡಿಸಿ ಅಭಿನಂದನೆ ಸಲ್ಲಿಸಿದರು. ಸಂಘದ ಅಧ್ಯಕ್ಷ ಯೂಸು- ರೆಂಜಲಾಡಿ ಅಧ್ಯಕ್ಷತೆ ವಹಿಸಿ ಮಾತನಾಡಿ ಸಂಘದ ಕಾರ್ಯಚಟುವಟಿಕೆಗಳಿಗೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.
ಗೌರವಾರ್ಪಣೆ : ಪುತ್ತೂರು ತಾಲೂಕು ಘಟಕಕ್ಕೆ ನಿರಂತರ ಪ್ರೋತ್ಸಾಹ ನೀಡುತ್ತಿರುವ ಸಂಘದ ದ.ಕ.ಜಿಲ್ಲಾಧ್ಯಕ್ಷ ಸುದೇಶ್ ಕುಮಾರ್‌ರವರನ್ನು ಶಾಲು ಹೊದಿಸಿ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು. 22 ಬಾರಿ ರಕ್ತದಾನ ಮಾಡಿದ ಮಾಜಿ ಅಧ್ಯಕ್ಷ ಸದಾಶಿವ ಶೆಟ್ಟಿ ಮಾರಂಗರವರನ್ನು ಸಂಘದ ವತಿಯಿಂದ ಶಾಲು ಹೊದಿಸಿ, ಸ್ಮರಣಿಕೆ, ಹೂಗುಚ್ಚ ನೀಡಿ ಗೌರವಿಸಲಾಯಿತು. ಸಂಘದ ಎಲ್ಲಾ ಕಾರ್ಯಚಟುವಟಿಕೆಗಳಲ್ಲಿ ನಿರಂತರ ಭಾಗವಹಿಸಿದ ಸದಸ್ಯ ಮೋಹನ್ ಶೆಟ್ಟಿ ಉರುವಾಲುರವರನ್ನು ಅಭಿನಂದಿಸಲಾಯಿತು.
ನೂತನ ಅಧ್ಯಕ್ಷ ತಿಲಕ್ ರೈ ಕುತ್ಯಾಡಿ ಮಾತನಾಡಿ ಸಂಘದ ವತಿಯಿಂದ ಸಮಾಜಮುಖಿ ಕೆಲಸಗಳನ್ನು ಮಾಡೋಣ. ಜೊತೆಗೆ ಸಂಘದ ಸದಸ್ಯತನ ಹೆಚ್ಚು ಮಾಡಿ ಸಂಘದ ಅಭಿವೃದ್ಧಿಗೆ ಶ್ರಮಿಶೋಣ. ನನಗೆ ನೀಡಿದ ಹೊಸ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸುತ್ತೇನೆ ಎಂದು ಹೇಳಿ ಎಲ್ಲರ ಸಹಕಾರ ಕೋರಿದರು.
ಸಂಘದ ಸದಸ್ಯರುಗಳಾದ ಫಾರೂಕ್ ಶೇಖ್ ಮುಕ್ವೆ, ರಮೇಶ್ ಕೆಮ್ಮಾಯಿ, ಹಿಲರಿ ಡಿ.ಸೋಜ, ಪಿ.ಸದಾಶಿವ ಭಟ್ ಉಪಸ್ಥಿತರಿದ್ದರು. ಸಂಘದ ಉಪಾಧ್ಯಕ್ಷೆ ಶೈಲಜಾ ಸುದೇಶ್ ಸ್ವಾಗತಿಸಿದರು. ರಕ್ಷಿತಾ ಎಚ್. ನಾಯ್ಕ್ ಮತ್ತು ಚಿತ್ರಾಂಗಿಣಿ ಪ್ರಾರ್ಥಿಸಿದರು. ಕೋಶಾಽಕಾರಿ ನರೇಶ್ ಜೈನ್ ವಂದಿಸಿದರು.
ಪದಾಧಿಕಾರಿಗಳ ಆಯ್ಕೆ
ಮಹಾಸಭೆಯಲ್ಲಿ 2022-23ನೇ ಸಾಲಿನ ನೂತನ ಪದಾಽಕಾರಿಗಳನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ತಿಲಕ್ ರೈ ಕುತ್ಯಾಡಿ, ಪ್ರಧಾನ ಕಾರ್ಯದರ್ಶಿಯಾಗಿ ಶ್ರೀಧರ್ ರೈ ಕೋಡಂಬು, ಕೋಶಾಽಕಾರಿಯಾಗಿ ರಕ್ಷಿತಾ ಎಚ್. ನಾಯ್ಕ್, ಉಪಾಧ್ಯಕ್ಷರಾಗಿ ಶರತ್ ಕುಮಾರ್ ಪಾರ, ಜತೆಕಾರ್ಯದರ್ಶಿಯಾಗಿ ಪ್ರಜ್ವಲ್ ಪುತ್ತೂರುರವರನ್ನು ಆಯ್ಕೆ ಮಾಡಲಾಯಿತು. ನೂತನ ಪದಾಧಿಕಾರಿಗಳಿಗೆ ಸಂಘದ ನಿಕಟಪೂರ್ವ ಅಧ್ಯಕ್ಷರು ಅಧಿಕಾರ ಹಸ್ತಾಂತರಿಸಿದರು.