ಕೆದಂಬಾಡಿ: ಒಕ್ಕಲಿಗ ಗೌಡ ಸೇವಾ ಸಂಘ ಕೆದಂಬಾಡಿ ಗ್ರಾಮ ಸಮಿತಿ, ಯುವ ಘಟಕ, ಮಹಿಳಾ ಘಟಕ ಇವುಗಳ ಸಹಕಾರದೊಂದಿಗೆ ಒಕ್ಕಲಿಗ ಸ್ವ ಸಹಾಯ ಸಂಘದ ಒಕ್ಕೂಟ ಕೆದಂಬಾಡಿ ಇದರ ನೇತೃತ್ವದಲ್ಲಿ ಶ್ರಾವಣ ಸಂಭ್ರಮ- 2022 ಎಂಬ ವಿನೂತನ ಕಾರ್ಯಕ್ರಮ ಶ್ರೀ ದೇವತಾ ಭಜನಾ ಮಂದಿರ ಶ್ರೀ ಕ್ಷೇತ್ರ ದೇವಗಿರಿ ತಿಂಗಳಾಡಿಯಲ್ಲಿ ಸೆ 11 ರಂದು ನಡೆಯಿತು.ಕಾರ್ಯಕ್ರಮದಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಶಾಲಾ ಮಕ್ಕಳಿಗೆ ಪುಸ್ತಕ ವಿತರಣೆ, ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನ , ಮಕ್ಕಳಿಗೆ,ಮಹಿಳೆಯರಿಗೆ,ಪುರುಷರಿಗೆ ವಿವಿಧ ಅಟೋಟ ಸ್ಫರ್ಧೆಗಳು ನಡೆಯಿತು.
ಕಾರ್ಯಕ್ರಮವನ್ನು ಒಕ್ಕಲಿಗ ಸ್ವ ಸಹಾಯ ಸಂಘಗಳ ಒಕ್ಕೂಟ ಕೆದಂಬಾಡಿ ಇದರ ಮಾಜಿ ಅಧ್ಯಕ್ಷರಾದ ದೇವಪ್ಪ ಗೌಡ ದೀಪ ಬೆಳಗಿಸಿ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ತಾಲೂಕು ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷರಾದ ವಿಶ್ವನಾಥ ಗೌಡ ಕೆಯ್ಯುರೂ ಸಮಾಜಮುಖಿ ಚಿಂತನೆಯೊಂದಿಗೆ ಕಾರ್ಯಕ್ರಮ ನಡೆಸಿ ಸಮುದಾಯವನ್ನು ಒಗ್ಗೂಡಿಸಬೇಕು, ಗ್ರಾಮದಲ್ಲಿ ಸಮುದಾಯದ ಸಂಖ್ಯೆ ಕಡಿಮೆ ಇದ್ದರೂ ಸಮುದಾಯದ ಎಲ್ಲರನ್ನೂ ಸೇರಿಸಿ ವಿನೂತನ ರೀತಿಯಲ್ಲಿ ಕಾರ್ಯಕ್ರಮ ಹಮ್ಮಿಕೊಂಡ ಸಂಘಟಕರಿಗೆ ಅಭಿನಂದನೆ ತಿಳಿಸಿದರು.ಒಕ್ಕಲಿಗ ಸ್ವ ಸಹಾಯ ಟ್ರಸ್ಟ್ ನ ಅಧ್ಯಕ್ಷರಾದ ಡಿ ವಿ ಮನೋಹರ್ ಮಾತನಾಡಿ ಸಮುದಾಯದ ಕಟ್ಟ ಕಡೆಯ ವ್ಯಕ್ತಿಯೂ ಆರ್ಥಿಕವಾಗಿ ,ಸಾಮಾಜಿಕವಾಗಿ ಸದೃಢವಾಬೇಕು ಎಂಬ ಉದ್ದೇಶದಿಂದ ಸ್ವ ಸಹಾಯ ಸಂಘಗಳನ್ನು ಪ್ರಾರಂಭಿಸಿದ್ದು ಸಮುದಾಯದ ಎಲ್ಲರೂ ಸ್ವ ಸಹಾಯ ಸಂಘಗಗಲ್ಲಿ ತೊಡಗಿಸಿಕೊಳ್ಳಬೇಕು,ಹಿಂದಿನ ಅವಧಿಯಲ್ಲಿ ವಲಯದಲ್ಲೆ ಅತ್ಯುತ್ತಮ ಒಕ್ಕೂಟ ಪ್ರಶಸ್ತಿಗೆ ಭಾಜನರಾಗಿದ್ದ ಕೆದಂಬಾಡಿ ಒ ಕ್ಕೂಟದಿಂದ ಇನ್ನಷ್ಟು ಸಮಾಜಮುಖಿ ಕಾರ್ಯಕ್ರಮ ಮೂಡಿ ಬರಲಿ ಎಂದು ಶುಭ ಹಾರೈಸಿದರು, ತಾಲೂಕು ಯುವ ಒಕ್ಕಲಿಗ ಗೌಡ ಸೇವಾ ಸಂಘದ ಪ್ರಧಾನ ಕಾರ್ಯದರ್ಶಿ ಸುಬ್ರಾಯ ಗೌಡ ಪಾಲ್ತಾಡಿ ಮಾತನಾಡಿ ಯುವ ಜನರು ನಾಯಕತ್ವ ಗುಣಗಳನ್ನೂ ಮೈಗೂಡಿಸಿಕೊಂಡು ಸಮಾಜದಲ್ಲಿ ಉನ್ನತ ವ್ಯಕ್ತಿಗಳಾಗಿ ಮುಡಿಬರಬೇಕು ಎಂದರು. ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಪೂರ್ಣತ್ಮರಾಮ ಈಶ್ವರಮಂಗಳ ಶ್ರಾವಣ ಮಾಸದ ಕುರಿತು ಮಾತನಾಡಿದರು, ಅಧ್ಯಕ್ಷತೆ ವಹಿಸಿ ಮಾತನಾಡಿದ ಒಕ್ಕಲಿಗ ಗೌಡ ಸೇವಾ ಸಂಘ ಕೆದಂಬಾಡಿ ಗ್ರಾಮ ಸಮಿತಿ ಅಧ್ಯಕ್ಷರಾದ ಶಿವರಾಮ ಗೌಡ ಇದ್ಯಾಪೆ ಮಾತನಾಡಿ ಗ್ರಾಮದ ಪ್ರತಿ ಮನೆಯವರನ್ನು ಸೇರಿಸುವುದರ ಜೊತೆಗೆ ವಿದ್ಯಾರ್ಥಿಗನ್ನು ಪ್ರೋತ್ಸಾಹಿಸಬೇಕು,ಸಾಧಕರನ್ನು ಗೌರವಿಸಬೇಕು ಎಂಬ ಉದ್ದೇಶದಿಂದ ವಿನೂತನ ಕಾರ್ಯಕ್ರಮವಾಗಿ ಶ್ರಾವಣ ಸಂಭ್ರಮ ಎಂಬ ಕಾರ್ಯಕ್ರಮ ಹಮ್ಮಿಕೊಂಡಿದ್ದು ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದ ಎಲ್ಲರಿಗೂ ಅಭಿನಂದನೆ ತಿಳಿಸಿದರು.
ತಾಲೂಕು ಮಹಿಳಾ ಘಟಕದ ಅಧ್ಯಕ್ಷ ಮೀನಾಕ್ಷಿ ಡಿ ಗೌಡ ಮತ್ತು ಒಕ್ಕಲಿಗ ಸ್ವ ಸಹಾಯ ಸಂಘಗಳ ಒಕ್ಕೂಟ ಕುಂಬ್ರ ವಲಯ ಇದರ ಅಧ್ಯಕ್ಷರಾದ ಲೋಕೇಶ್ ಚಾಕೋಟೆ ಕಾರ್ಯಕ್ರಮದ ಕುರಿತು ಮೆಚ್ಚುಗೆಯ ಮಾತನಾಡಿದರು.
ಕಾರ್ಯಕ್ರಮದ ವೇದಿಕೆಯಲ್ಲಿ ಒಕ್ಕಲಿಗ ಸ್ವಸಹಾಯ ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ದಿವ್ಯ ಪ್ರಸಾದ್ ಎಎಂ ,ಒಕ್ಕಲಿಗ ಗೌಡ ಸೇವಾ ಸಂಘ ಕುಂಬ್ರ ವಲಯ ಉಸ್ತುವಾರಿ ಸತೀಶ್ ಪಾಂಬಾರು ,ತಾಲೂಕು ಒಕ್ಕಲಿಗ ಮಹಿಳಾ ಘಟಕದ ಕಾರ್ಯದರ್ಶಿ ನವೀನ ಬಿ ಡಿ, ಒಕ್ಕಲಿಗ ಸ್ವಸಹಾಯ ಗುಂಪುಗಳ ಒಕ್ಕೂಟ ಕೆದಂಬಾಡಿ ಇದರ ಅಧ್ಯಕ್ಷರಾದ ಶಿವಣ್ಣ ಗೌಡ ಪಯಂದೂರು,ಮಹಿಳಾ ಘಟಕದ ಅಧ್ಯಕ್ಷೆ ರೇಖಾ ಆರ್ ಗೌಡ ಉಪಸ್ಥಿತರಿದ್ದರು.
ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ
2021-2022 ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಪಿಯುಸಿ ಹಾಗೂ ಎಸ್ ಎಸ್ ಎಲ್ ಸಿ ಯಲ್ಲಿ ಅತ್ಯುತ್ತಮ ಸಾಧನೆಗೈದ ಎರಕ್ಕಳ ಬೆಳಿಯಪ್ಪ ಗೌಡ ಹಾಗೂ ವೇದವತಿ ದಂಪತಿಗಳ ಪುತ್ರ ಮೊಕ್ಷಿತ್ ಎನ್ ಬಿ,ಕೆರೆಮೂಲೆ ರಾಘವ ಗೌಡ ರೇಖಾ ಆರ್ ಗೌಡ ದಂಪತಿಗಳ ಪುತ್ರ ಪ್ರಜ್ವಲ್ ಕೆ ಆರ್,ಪಟ್ಲಮೂಲೆ ಶಿನಪ್ಪ ಗೌಡ ಪುಷ್ಪವತಿ ದಂಪತಿಗಳ ಪುತ್ರಿ ಅನನ್ಯ ಎನ್ ಗೌಡ,ತಿಂಗಳಾಡಿ ಕಜೆ ಕೃಷ್ಣಪ್ಪ ಗೌಡ ಕೋಮಾಲಂಗಿ ದಂಪತಿಗಳ ಪುತ್ರಿ ಪ್ರಸಾಧಿನಿ ಕೆ,ಕಟ್ಟತ್ತಾರು ಬಾಲಕೃಷ್ಣ ಗೌಡ ಜಯಮಾಲಾ ದಂಪತಿಗಳ ಪುತ್ರಿ ಅನನ್ಯ ಎನ್ ಬಿ,ಇದ್ಯಾಪೆ ದಿ ಧರ್ಮಪಾಲ ಗೌಡ ವರಿಜಾ ದಂಪತಿಗಳ ಪುತ್ರ ನೂತನ ಐ ಡಿ,ಇದ್ಯಾಪೆ ಶಿನಪ್ಪ ಗೌಡ ಚಂದ್ರಾವತಿ ದಂಪತಿಗಳ ಪುತ್ರಿ ಯೋಗಿತ ಐ, ರವೀಂದ್ರನಾಥ ಗೌಡ ಚಾಲೆಪಡ್ಪು ಗೊಳ್ಥಿಲ ಹಾಗೂ ರೇಣುಕಾ ದಂಪತಿಗಳ ಪುತ್ರ ಸುಮಂತ್ ಸಿ ಆರ್ ಗೌಡ,ನೆಲ್ಲಿಗುರಿ ಚಂದ್ರಶೇಖರ ಗೌಡ ರತ್ನ ದಂಪತಿಗಳ ಪುತ್ರ ಮಿಥುನ್ ಏನ್, ಪರಮೇಶ್ವರ ಗೌಡ ಶೈಲಜಾ ದಂಪತಿಗಳ ಪುತ್ರ ಧನುಷ್,ಇದ್ಯಾಪೆ ಕೈಲಾಶ್ ಗೌಡ ಸೌಮ್ಯ ಕೆ ಗೌಡ ದಂಪತಿಗಳ ಪುತ್ರಿ ಅನುಶ್ರೀ,ಯೋಗ ಹಾಗೂ ಭರತನಾಟ್ಯ ದಲ್ಲಿ ರಾಜ್ಯ ಮಟ್ಟದಲ್ಲಿ ಮಿಂಚಿದ ಪ್ರತಿಭೆ ಎರಕ್ಕಳ ಮೋಹನ್ ಗೌಡ ಹಾಗೂ ರೇಖಾ ದಂಪತಿಗಳ ಪುತ್ರಿ ನಿಖಿತಾ ಎರಕ್ಕಳ ಇವರುಗಳನ್ನು ಶಾಲು ಹಾಕಿ ಸ್ಮರಣಿಕೆ ಹಾಗೂ ಹೂ ನೀಡಿ ಅಭಿನಂದಿಸಲಾಯಿತು.
ಸಾಧನೆಗೈದ ಸಾಧಕರಿಗೆ ಸನ್ಮಾನ
ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಹಾಗೂ ಸೇವೆ ಸಲ್ಲಿಸಿ ನಿವೃತ್ತರಾದವರಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಜಯಶೀಲ ದೇವಪ್ಪ ಗೌಡ ,ಬಿ ಎಸ್ ಎನ್ ಎಲ್ ಟೆಲಿಕ್ಯಾಮ್ ನಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಹೇಮಳ ಗಂಗಾಧರ ಗೌಡ ಇದ್ಯಾಪೆ,ತಂಟೆಪ್ಪಾಡಿ ನಾಮದೇವ ಗೌಡ ತಿಂಗಳಾಡಿ, ಭಾರತೀಯ ಸೇನೆಯಲ್ಲಿ ಸುಬೇದಾರ್ ಆಗಿಸೇವೆ ಸಲ್ಲಿಸಿ ನಿವೃತ್ತರಾದ ಬೆಳ್ಳಿಯಪ್ಪ ಗೌಡ ಎರಬೈಲು,ಚಲ್ಲಂಗಾರು ಚಿದಾನಂದ ಗೌಡ ತಿಂಗಳಾಡಿ, ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ನಿವೃತ್ತ ಪಿಎಸ್ಐ ಪಿಂಡಿಮನೆ ವೆಂಕಟ್ರಮಣ ಗೌಡ ಅಮೈ, ಕೃಷಿ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಕೆಮ್ಮಾರ ಪಾದೆಕಲ್ಲು ತಿಮ್ಮಪ್ಪ ಗೌಡ ಕೋರಿಕ್ಕಾರು, ಗ್ರಾಮ ಪಂಚಾಯತ್ ಸದಸ್ಯರಾಗಿ ಆಯ್ಕೆಗೊಂಡಿರುವ ಕೃಷ್ಣಕುಮಾರ್ ಇದ್ಯಪೆ, ಅಂಗನವಾಡಿ ಸಹಾಯಕಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಬಾಲಕ್ಕಮುತ್ತಪ್ಪಗೌಡ ನೆಲ್ಲಿಗುರಿ ಇವರುಗಳನ್ನು ಶಾಲು ಹೊಂದಿಸಿ ಹಾರ ಹಾಕಿ ಫಲ ಪುಷ್ಪ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು
ಊರು ಗೌಡರುಗಳಿಗೆ ಗೌರವಾರ್ಪಣೆ
ಗ್ರಾಮದಲ್ಲಿ ಗೌಡತ್ತಿಗೆ ನಡೆಸುತ್ತಿರುವ ಕೆದಂಬಾಡಿ ಇದ್ಯಾಪೆ ಶಿವರಾಮ ಗೌಡ,ಕೆಯ್ಯುರೂ ಗ್ರಾಮದ ಎರಕ್ಕಳ ಶುಭಪ್ರಕಾಶ್ ಇವರುಗಳ್ನು ಶಾಲು,ಹಾರ ಹಾಕಿ ಫಲಪುಷ್ಪ ಸ್ಮರಣಿಕೆ ನೀಡಿ ಗೌರವಿಸಲಾಯಿತು.
ವಿವಿಧ ಅಟೋಟ ಸ್ಪರ್ಧೆ,ಬಹುಮಾನ ವಿತರಣೆ
ಕಾರ್ಯಕ್ರಮದಲ್ಲಿ ಮಕ್ಕಳಿಗೆ ಪುರುಷರಿಗೆ ಮಹಿಳೆಯರಿಗೆ ವಿವಿಧ ಅಟೋಟ ಸ್ಪರ್ಧೆಗಳು ನಡೆದು ಸಭಾ ಕಾರ್ಯಕ್ರಮದಲ್ಲಿ ಬಹುಮಾನ ವಿತರಣೆ ಮಾಡಲಾಯಿತು.
ಉಚಿತ ಪುಸ್ತಕ ವಿತರಣೆ
ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳಿಗೆ ಉಚಿತ ಪುಸ್ತಕ ವಿತರಣೆ ಮಾಡಲಾಯಿತು. ಮೋಹನ್ ಗೌಡ ಎರಕ್ಕಳ,ದಿನೇಶ್ ಕುಮಾರ್ ತೇಗ್ಗು,ಶುಭಪ್ರಕಾಶ್ ಎರಬೈಲು, ಕಿಶೋರ್ ತಿಂಗಳಾಡಿ, ಲೋಹಿತ್ ಗುತ್ತು, ಪುಪ್ಪ ಸರೆಪುಣಿ, ರಕ್ಷಿತ್ ಏರಕ್ಕಳ ಅತಿಥಿಗಳನ್ನು ಹೂಗುಚ್ಛ ನೀಡಿ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಅನನ್ಯ ಪ್ರಾರ್ಥಿಸಿದರು, ಶಿವಣ್ಣ ಗೌಡ ಪಯಂದೂರು ಸ್ವಾಗತಿಸಿದರು, ರೇಖಾ ಆರ್ ಗೌಡ ವಂದಿಸಿದರು, ಶರತ್ ಗೌಡ ಗುತ್ತು ,ರಾಘವ ಗೌಡ ಕೆರೆಮೂಲೆ ಕಾರ್ಯಕ್ರಮ ನಿರ್ವಹಿಸಿದರು