ನಾವು ಮಾತ್ರವಲ್ಲ ಸಮಾಜವನ್ನು ಏಳ್ಗೆಯತ್ತ ಕೊಂಡೊಯ್ಯುವ ಗುಣ ಜೇಸಿಐಯಲ್ಲಿದೆ : ನಮಸ್ತೆ ಜೇಸಿಐ ಸಪ್ತಾಹ -2022ರ ಸಮಾರೋಪದಲ್ಲಿ ಭ್ರಷ್ಟಾಚಾರ ನಿಗ್ರಹದಳ ಎಸ್ಪಿ ಸೈಮನ್

0

  • ರಾಷ್ಟ್ರೀಯ ಮನ್ನಣೆ ಪಡೆದ ಪುತ್ತೂರು ಜೇಸಿಐ ರಿಮಾರ್ಕ್ ಇಲ್ಲ – ಸ್ವಾತಿ ಜೆ ರೈ ಘೋಷಣೆ
  • ಸದಸ್ಯೆರೆಲ್ಲರ ಸಹಕಾರದಿಂದ ಸಪ್ತಾಹ ಯಶಸ್ವಿ – ಶಶಿರಾಜ್ ರೈ

 

  • ಗೌತಮ್ ರೈಗೆ ಕಮಲ ಪತ್ರ ಪ್ರದಾನ
  • ರಮೇಶ್ ಕೆ.ವಿಗೆ ಟುಬಿ ಪ್ರಶಸ್ತಿ ಪ್ರದಾನ
  • 17 ಮಂದಿ ನೂತನ ಸದಸ್ಯರ ಸೇರ್ಪಡೆ
  • ನೂತನ ಸದಸ್ಯರಿಗೆ ಪ್ರಮಾಣ ಪತ್ರ ವಿತರಣೆ

ಪುತ್ತೂರು: ಸಮಾಜಕ್ಕೆ ಪ್ರತಿಯೊಬ್ಬ ವ್ಯಕ್ತಿಯ ಅಗತ್ಯತೆ ಇದೆ. ಇಂತಹ ಸಂದರ್ಭದಲ್ಲಿ ನಾವು ಮಾತ್ರ ಏಳ್ಗೆಯಾಗುವುದಲ್ಲ ಸಮಾಜವನ್ನು ಏಳ್ಗೆಯತ್ತ ಕೊಂಡೊಯ್ಯುವ ಗುಣ ಜೇಸಿಐಯಲ್ಲಿದೆ ಎಂದು ಭ್ರಷ್ಟಾಚಾರ ನಿಗ್ರಹದಳ ಇಲಾಖೆಯ ಪಶ್ಚಿಮ ವಲಯದ ಎಸ್ಪಿ ಸಿ.ಎ ಸೈಮನ್ ಅವರು ಹೇಳಿದರು.
ಇಲ್ಲಿನ ಜೇಸಿಐ ಮುಳಿಯ ಟ್ರೈನಿಂಗ್ ಹಾಲ್‌ನಲ್ಲಿ ಸೆ.15ರಂದು ನಡೆದ ನಮಸ್ತೆ ಜೇಸಿಐ ಸಪ್ತಾಹದ ಸಪ್ತಾಹದ ಸಮಾರೋಪ ಸಮಾರಂಭದಲ್ಲಿ ಅವರು ಮುಖ್ಯ ಅತಿಥಿಯಾಗಿ ಮಾತನಾಡಿದರು. ಸಮಾಜಮುಖಿ ಸೇವೆ ಮತ್ತು ಅದರ ಮೂಕ ವ್ಯಕ್ತಿತ್ವ ವಿಕಸನ ಜೇಸಿಸ್ ಸಂಸ್ಥೆಯ ಎರಡು ಪ್ರೀತಿಯ ಕಾರ್ಯಕ್ರಮವಾಗಿದೆ. ಇಂತಹ ಕಾರ್ಯಕ್ರಮ ನಿರಂತರ ನಡೆಯಲಿ ಎಂದರು.

ರಾಷ್ಟ್ರೀಯ ಮನ್ನಣೆ ಪಡೆದ ಪುತ್ತೂರು ಜೇಸಿಐ ರಿಮಾರ್ಕ್ ಇಲ್ಲ:

ವಲಯದ ಉಪಾಧ್ಯಕ್ಷೆ ಸ್ವಾತಿ ಜೆ ರೈ ಅವರು ಮಾತನಾಡಿ ಅತಿ ಹೆಚ್ಚು ಸದಸ್ಯರನ್ನು ಮತ್ತು ಹಿರಿಯ ಘಟಕವಾಗಿರುವ ಪುತ್ತೂರು ಘಟಕ ಕಳೆದ ಒಂದು ವಾರದಿಂದ ಉತ್ತಮ ಕಾರ್ಯಕ್ರಮ ನಡೆಸುತ್ತಾ ಬಂದಿದೆ. ಇದರ ಜೊತೆಗೆ ರಾಷ್ಟ್ರೀಯ ಮನ್ನಣೆಯೂ ದೊರೆತಿದೆ. ಇಂತಹ ಸಂದರ್ಭದಲ್ಲಿ ಪುತ್ತೂರು ಘಟಕದಲ್ಲಿ ಯಾವುದೇ ರಿಮಾರ್ಕ್ ಇಲ್ಲ ಎಂದು ಘೋಷಣೆ ಮಾಡಿದರು.

ಸದಸ್ಯೆರೆಲ್ಲರ ಸಹಕಾರದಿಂದ ಸಪ್ತಾಹ ಯಶಸ್ವಿ:

ಜೇಸಿಐ ಅಧ್ಯಕ್ಷ ಶಶಿರಾಜ್ ರೈ ಅವರು ಮಾತನಾಡಿ ಜೆಸಿಐ ವೀಕ್ 2022 ರಲ್ಲಿ ಅದ್ದೂರಿಯಾಗಿ ನಡೆದಿದೆ. ಇದು ಕೇವಲ ಅಧ್ಯಕ್ಷರಿಂದ ನಡೆದದ್ದು ಅಲ್ಲ. ಪ್ರೊಜೆಕ್ಟ್ ಡೈರೆಕ್ಡರ್ ಕಾರ್ತಿಕ್ ರೈ ಮುಂದಾಲುತ್ವದಲ್ಲಿ ಎಲ್ಲಾ ಸದಸ್ಯರ ಬೆಂಬಲದಿಂದ ಉತ್ತಮಮವಾಗಿ ಮೂಡಿ ಬಂದಿದೆ ಎಂದು ಹೇಳಿದರು.

ಕಮಲಪತ್ರ, ಟುಬಿಪ್ ಪ್ರಶಸ್ತಿ ಪ್ರದಾನ:

ಜೇಸಿಐ ಪ್ರತಿ ವರ್ಷ ಕೊಡಮಾಡುವ ಕಮಲ ಪತ್ರ ಪ್ರಶಸ್ತಿಯನ್ನು ಜೇಸಿಐ 15ರ ವಲಯ ಅಧಿಕಾರಿ ಗೌತಮ್ ರೈ ಮತ್ತು ಟುಬಿಪ್ ಪ್ರಶಸ್ತಿಯನ್ನು ರಮೇಶ್ ಕೆ ಅವರಿಗೆ ಪ್ರದಾನ ಮಾಡಲಾಯಿತು. ಅನೂಫ್ ಕೆ.ಜೆ ಮತ್ತು ಪ್ರಜ್ವಲ್ ರೈ ಅವರು ಸನ್ಮಾನಿತರನ್ನು ಪರಿಚಯಿಸಿದರು. ಇದೇ ಸಂದರ್ಭದಲ್ಲಿ ಪ್ರೋಜೆಕ್ಟ್ ಡೈರೆಕ್ಟರ್ ಕಾರ್ತಿಕ್ ಅವರನ್ನು ಸನ್ಮಾನಿಸಲಾಯಿತು.

17 ಮಂದಿ ಸೇರ್ಪಡೆ:‌

2022 ರಲ್ಲಿ ಜೆಸಿಐಗೆ ನೂತನವಾಗಿ ಸೇರ್ಪಡೆಗೊಂಡ 17 ಮಂದಿ ನೂತನ ಸದಸ್ಯರನ್ನು ಕಮ್ಯುನಿಟಿ ಡೈರೆಕ್ಟರ್ ಜಗನ್ನಾಥ ಅವರು ಪರಿಚಯಿಸಿದರು. ಪೂರ್ವ ರಾಷ್ಟ್ರೀಯ ಉಪಾಧ್ಯಕ್ಷ ಮುರಳಿಶ್ಯಾಮ್ ಅವರು ಹೊಸದಾಗಿ ಸೇರ್ಪಡೆಗೊಂಡವರಿಗೆ ಪ್ರಮಾಣವಚನ ಭೋದಿಸಿ, ಜೇಸಿಐ ಪಿನ್ ತೊಡಿಸಿದರು. ಇದೇ ಸಂದರ್ಭದಲ್ಲಿ ನೂತನ ಸದಸ್ಯರಿಗೆ ಪ್ರಮಾಣ ಪತ್ರ ವಿತರಿಸಲಾಯಿತು. ಜೇಜೆಸಿ ನೇಹಾ ಡಿ ಅನಿಲಾಡೆ ಅವರು ಜೇಸಿ ವಾಣಿ ಬೋದಿಸಿದರು. ಸುಪ್ರಿತ್ ಕೆ ಸಿ ಅತಿಥಿಗಳನ್ನು ಪರಿಚಯಿಸಿದರು. ವೇದಿಕೆಯಲ್ಲಿ ಮಹಿಳಾ ಜೇಸಿಐ ಸ್ವಾತಿ ಶಶಿರಾಜ್ ರೈ ಉಪಸ್ಥಿತರಿದ್ದರು. ಜೇಸಿಐ ಕಾರ್ಯದರ್ಶಿ ಮೋಹನ್ ಕೆ ವಂದಿಸಿದರು. ಸಮಾರಂಭದ ಕೊನೆಯಲ್ಲಿ ಜೇಸಿಐ ಸದಸ್ಯರ ಹುಟ್ಟಿದ ದಿನವನ್ನು ಕೇಕ್ ಕಟ್ ಮಾಡುವ ಮೂಲಕ ಆಚರಿಸಲಾಯಿತು.

LEAVE A REPLY

Please enter your comment!
Please enter your name here