ಪುತ್ತೂರು: ಪದವಿ ಪೂರ್ವ ಶಿಕ್ಷಣ ಇಲಾಖೆ ದ.ಕ, ಉಪನಿರ್ದೇಶಕರ ಕಚೇರಿ ಮಂಗಳೂರು ಹಾಗೂ ಸುಳ್ಯ-ಆರಂತೋಡು ನೆಹರು ಮೆಮೋರಿಯಲ್ ಪದವಿ ಪೂರ್ವ ಕಾಲೇಜಿನ ಸಹಯೋಗದಲ್ಲಿ ಸೆ.15 ರಂದು ನಡೆದ ಪದವಿ ಪೂರ್ವ ಕಾಲೇಜು ಬಾಲಕ-ಬಾಲಕಿಯರ ಜಿಲ್ಲಾ ಮಟ್ಟದ ತ್ರೋಬಾಲ್ ಪಂದ್ಯಾಟದಲ್ಲಿ ಮಾಯಿದೆ ದೇವುಸ್ ಚರ್ಚ್ ಸಮೂಹ ಶಿಕ್ಷಣ ಸಂಸ್ಥೆಗಳ ದರ್ಬೆ ಫಿಲೋನಗರದ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ಹುಡುಗಿಯರ ತಂಡವು ರನ್ನರ್ಸ್ ಪ್ರಶಸ್ತಿಯನ್ನು ಗಳಿಸಿಕೊಂಡಿರುತ್ತದೆ.
ಹುಡುಗಿಯರ ವಿಭಾಗದಲ್ಲಿ ದ್ವಿತೀಯ ವಿಜ್ಞಾನ ವಿಭಾಗದ ಎಂ.ಎಸ್ ಚೈತನ್ಯ, ಡಿಂಪಲ್ ಬಂಗೇರ, ಚೈತ್ರಿಕಾ ಎಂ, ನಫೀಶತ್ ಅಝೀನಾ, ಸ್ಪರ್ಷಾ ಡಿ.ಕೆ, ದ್ವಿತೀಯ ಕಲಾ ವಿಭಾಗದ ನವ್ಯಶ್ರೀ ಜಿ, ಪ್ರಥಮ ವಿಜ್ಞಾನ ವಿಭಾಗದ ತನೀಶಾ ಪಿ.ರೈ, ನಾಗಶ್ರೀ ಜೆ.ನಾಯ್ಕ್, ಪ್ರಥಮ ವಾಣಿಜ್ಯ ವಿಭಾಗದ ಪ್ರಥ್ವಿ ಕೆ, ದ್ವಿತೀಯ ವಾಣಿಜ್ಯ ವಿಭಾಗದ ವರ್ಷಾರವರು ಭಾಗವಹಿಸಿದ್ದರು. ಇವರುಗಳಿಗೆ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ಎಲ್ಯಾಸ್ ಪಿಂಟೋ ಹಾಗೂ ರಾಜೇಶ್ ಮೂಲ್ಯರವರು ತರಬೇತಿ ನೀಡಿರುತ್ತಾರೆ. ಕ್ರೀಡಾಪಟುಗಳ ಸಾಧನೆಗೆ ಕಾಲೇಜಿನ ಸಂಚಾಲಕ ವಂ|ಲಾರೆನ್ಸ್ ಮಸ್ಕರೇನ್ಹಸ್, ಪ್ರಾಂಶುಪಾಲ ವಂ|ಅಶೋಕ್ ರಾಯನ್ ಕ್ರಾಸ್ತಾ, ಕ್ಯಾಂಪಸ್ ನಿರ್ದೇಶಕ ವಂ|ಸ್ಟ್ಯಾನಿ ಪಿಂಟೋರವರು ಮೆಚ್ಚುಗೆ ಸೂಚಿಸಿದ್ದಾರೆ.
ಫೈನಲ್ ಪಂದ್ಯಾಟದ ಹೋರಾಟದಲ್ಲಿ ಕಾಲೇಜಿನ ಎಂ.ಎಸ್ ಚೈತನ್ಯರವರು ಉತ್ತಮ ಸ್ಮ್ಯಾಶರ್ ಆಗಿ ಆಯ್ಕೆಗೊಂಡಿದ್ದು ಮಾತ್ರವಲ್ಲದೆ ಎಂ.ಎಸ್ ಚೈತನ್ಯ ಸಹಿತ ತಂಡದ ಡಿಂಪಲ್ ಬಂಗೇರ, ಪ್ರಥ್ವಿ ಕೆ.ರವರು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ರಾಜ್ಯ ಮಟ್ಟದ ಪಂದ್ಯಾಟವು ಬೆಂಗಳೂರು ಗ್ರಾಮಾಂತರದಲ್ಲಿ ನಡೆಯಲಿದೆ.