ಸೆ.18: ಮತದಾರರ ಗುರುತು ಚೀಟಿಗೆ ಆಧಾರ ಯಾ ಇತರ ದಾಖಲೆಗಳ ಜೋಡಣೆಗೆ ವಿಶೇಷ ಅಭಿಯಾನ

0

ಪುತ್ತೂರು: ಮತದಾರರ ಪಟ್ಟಿಯಲ್ಲಿರುವ ಮತದಾರರನ್ನು ದೃಢೀಕರಿಸಲು ಸ್ವಯಂ ಪ್ರೇರಿತ ಆಧಾರದ ಮೇಲೆ ಮತದಾರರ ಗುರುತು ಚೀಟಿಗೆ ಆಧಾರ್ ಸಂಖ್ಯೆಯನ್ನು ಅಥವಾ ಸೂಚಿಸಿರುವ ಇತರ 11 ದಾಖಲೆಗಳನ್ನು ಜೋಡಣೆ ಮಾಡಲು ಸೆ.18ರಂದು ಎಲ್ಲಾ ಮತಗಟ್ಟೆಗಳಲ್ಲಿ ವಿಶೇಷ ಆಂದೋಲನ ನಡೆಯಲಿದೆ.

ಬೂತ್ ಮಟ್ಟದ ಅಧಿಕಾರಿಗಳು ಆಯಾ ಬೂತ್‌ಗಳಲ್ಲಿ ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯ ತನಕ ಮತಗಟ್ಟೆಗಳಲ್ಲಿ ಉಪಸ್ಥಿತರಿರಲಿದ್ದಾರೆ. ಆಧಾರ್ ಜೋಡಣೆಗೆ ಬಾಕಿ ಇರುವ ಮತದಾರರು ಹತ್ತಿರದ ಬೂತ್ ಮಟ್ಟದ ಅಽಕಾರಿ, ಅಥವಾ ಗ್ರಾಮ ಲೆಕ್ಕಿಗರ ಬಳಿ ಹಾಜರಾಗಿ ಆಧಾರ್ ಜೋಡಣೆ ಮಾಡಿಸಿಕೊಳ್ಳಬಹುದು.

ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ತಮ್ಮಲ್ಲಿರುವ ದಾಖಲೆಗಳಲ್ಲಿ ಆಧಾರ್ ಅಥವಾ ಇತರ 11 ದಾಖಲೆಗಳಲ್ಲಿ ಒಂದು ದಾಖಲೆ ಜೋಡಿಸಬೇಕಾಗಿದ್ದು, ಉದ್ಯೋಗ ಖಾತರಿಯ ಉದ್ಯೋಗ ಚೀಟಿ, ಭಾವಚಿತ್ರವಿರುವ ಬ್ಯಾಂಕ್/ಪೋಸ್ಟ್ ಆಫೀಸ್ ಪಾಸ್‌ಬುಕ್, ಕಾರ್ಮಿಕ ಇಲಾಖೆಯ ಆರೋಗ್ಯ ವಿಮಾ ಸ್ಮಾರ್ಟ್ ಕಾರ್ಡ್, ಡ್ರೈವಿಂಗ್ ಲೈಸನ್ಸ್, ಪ್ಯಾನ್ ಕಾರ್ಡ್, ಎನ್‌ಪಿಆರ್ ಅಡಿಯಲ್ಲಿ ಆರ್‌ಜಿಐ ಸ್ಮಾರ್ಟ್ ಕಾರ್ಡ್, ಪಾಸ್‌ಪೋರ್ಟ್, ಭಾವಚಿತ್ರವಿರುವ ಪಿಂಚಣಿ ದಾಖಲೆ, ಕೇಂದ್ರ/ರಾಜ್ಯ/ಪಿಎಸ್‌ಯು/ಸಾರ್ವಜನಿಕರಿಂದ ಉದ್ಯೋಗಿಗಳಿಗೆ ನೀಡುವ ಭಾವಚಿತ್ರವಿರುವ ಗುರುತಿನ ಚೀಟಿ, ಸಂಸದರು/ಶಾಸಕರು/ಎಂಎಲ್‌ಸಿಗಳಿಗೆ ನೀಡುವ ಅಧಿಕೃತ ಗುರುತಿನ ಚೀಟಿ, ಇಲಾಖೆ ಭಾರತ ಸರಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣದಿಂದ ನೀಡುವ ವಿಶಿಷ್ಠ ಗುರುತಿನ ಚೀಟಿ(ಯುಡಿಐಡಿ) ಇತ್ಯಾದಿ ದಾಖಲೆಗಳನ್ನು ಸಲ್ಲಿಸಿ 6ಬಿ ನಮೂನೆಯಲ್ಲಿ ಆಧಾರ್ ಜೋಡಣೆ ಮಾಡಬಹುದು ಎಂದು ಅಪರ ಜಿಲ್ಲಾಽಕಾರಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here