ಪುತ್ತೂರು: ಹೋಮ್ ಪ್ರೊಡಕ್ಟ್ ಗಳನ್ನು ಮಾರಾಟ ಮಾಡುತ್ತಾ ಲೈನ್ ಸೇಲ್ ಗೆ ಬಂದಿರುವ ಅನ್ಯಕೋಮಿನ ಯುವಕ ಮತ್ತು ಯುವತಿಯ ವರ್ತನೆ ಸರಿಯಿಲ್ಲ ಎಂದು ಹಿಂದೂ ಸಂಘಟನೆಯವರು ನೀಡಿದ ಮಾಹಿತಿಯಂತೆ ಪುತ್ತೂರು ಪೊಲೀಸರು ವಿಚಾರಣೆಗೊಳಪಡಿಸಿದ ಘಟನೆ ಸೆ.16ರಂದು ನಡೆದಿದೆ.
ಎಸ್. ಕೆ.ಗ್ರೂಪ್ ಹೆಸರಿನ ಸಂಸ್ಥೆಯಲ್ಲಿ ಹೋಮ್ ಪ್ರೊಡಕ್ಟ್ ಮಾರಾಟ ಮಾಡುವ ತಂಡದಲ್ಲಿರುವ ಕುಂದಾಪುರ ಮೂಲದ ಮತ್ತು ಪುತ್ತೂರಿನ ಸ್ಥಳೀಯರು ಪುತ್ತೂರು ಪಡೀಲ್ ನ ಪಿ.ಜಿಯಲ್ಲಿ ವಾಸ್ತವ್ಯ ಹೊಂದಿದ್ದು ಈ ತಂಡದ ಪೈಕಿ ಹಿಂದು ಯುವತಿ ಮತ್ತು ಮುಸ್ಲಿಂ ಯುವಕ ತೆಂಕಿಲ ರಸ್ತೆಯಲ್ಲಿ ಹೋಮ್ ಪ್ರೊಡಕ್ಟ್ ಮಾರಾಟ ಮಾಡಲು ಹೋಗುತ್ತಿದ್ದ ಸಂದರ್ಭ ಅವರ ವರ್ತನೆ ಸರಿಯಿಲ್ಲ ಎಂದು ಆರೋಪ ವ್ಯಕ್ತವಾಗಿತ್ತು. ಈ ವಿಚಾರ ತಿಳಿದ ಹಿಂದು ಸಂಘಟನೆಯವರು ಪೊಲೀಸರಿಗೆ ಮಾಹಿತಿ ನೀಡಿದರು. ಪೊಲೀಸರು ಯುವಕ ಮತ್ತು ಯುವತಿಯನ್ನು ವಿಚಾರಣೆ ನಡೆಸುತ್ತಿದ್ದಾರೆ.