





ಆಲಂಕಾರು: ಸೀಮಾ ದೇವಸ್ಥಾನ ವಾದ ಶ್ರೀ ಕ್ಷೇತ್ರ ಶರವೂರು ದುರ್ಗಾಪರಮೇಶ್ವರೀ ದೇವಸ್ಥಾನಕ್ಕೆ ಶಶಿಧರ ಕಾರಂತ ಬಾಕಿಜಾಲು ಶರವೂರುರವರು ಶ್ರೀ ಕ್ಷೇತ್ರದಲ್ಲಿ ನಡೆಯುವ ಅನ್ನಸಂತರ್ಪಣೆ ಹಾಗು ಇನ್ನಿತರ ಕಾರ್ಯಕ್ರಮಗಳ ಉಪಯೋಗಕ್ಕಾಗಿ ಅಂದಾಜು 25000 ರೂ. ವೆಚ್ಚದ ಹೋಳಿಗೆ ಹಂಚು ಹಾಗು ಸ್ಟವ್ ದೇಣಿಗೆಯಾಗಿ ನೀಡಿರುತ್ತಾರೆ.








ಕಳೆದ ಬಾರಿ ಇವರು ಅಂದಾಜು ವೆಚ್ಚ 40,000 ರೂ. ಮೌಲ್ಯದ ಗ್ರೈಂಡರ್ ನ್ನು ಕೂಡ ನೀಡಿರುತ್ತಾರೆ. ಈ ಸಂಧರ್ಭದಲ್ಲಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ದಾಮೋದರ ಗೌಡ ಕಕ್ವೆ ಹಾಗು ಸಿಬ್ಬಂದಿಗಳಾದ ಮಂಜುನಾಥ ದೇವಾಡಿಗ ಹಾಗು ವಿನೋದ್ ಕುಮಾರ್ ರವರು ಉಪಸ್ಥಿತರಿದ್ದರು.









