ಪಾಣಾಜೆ ಗ್ರಾ.ಪಂ. ಜಮಾಬಂದಿ ಸಭೆ

0

ಪಾಣಾಜೆ: ಪಾಣಾಜೆ ಗ್ರಾಮ ಪಂಚಾಯತ್‌ನ ಜಮಾಬಂದಿ ಸಭೆಯು ಸೆ. 16 ರಂದು ಪಂಚಾಯತ್ ಸಭಾಂಗಣದಲ್ಲಿ ಪಂಚಾಯತ್ ಅಧ್ಯಕ್ಷೆ ಭಾರತೀ ಭಟ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು.

ತಾಲೂಕು ಪಂಚಾಯತ್ ಸಹಾಯಕ ನಿರ್ದೇಶಕಿ ಶೈಲಜಾ ಪ್ರಕಾಶ್ ಜಮಾಬಂದಿ ಅಧಿಕಾರಿಯಾಗಿದ್ದರು. ಉಪಾಧ್ಯಕ್ಷ ಅಬೂಬಕ್ಕರ್ ಇಬ್ರಾಹಿಂ, ಸದಸ್ಯರಾದ ಸುಭಾಸ್ ರೈ, ನಾರಾಯಣ ನಾಯಕ್, ಮೋಹನ ನಾಯ್ಕ್, ಸುಲೋಚನಾ, ಜಯಶ್ರೀ, ಮೈಮೂನತ್ತುಲ್ ಮೆಹ್ರಾ, ವಿಮಲ ಹಾಜರಿದ್ದರು‌. ಪಿಡಿಒ ಚಂದ್ರಮತಿ ಹಾಗೂ ಕಾರ್ಯದರ್ಶಿ ಆಶಾ ಲೆಕ್ಕಪತ್ರ ಮಂಡಿಸಿದರು.

ಗ್ರಾಮಸ್ಥರಾದ ಶಾಹುಲ್ ಹಮೀದ್, ಬಾಬು ರೈ, ಸೀತಾ ಭಟ್ ವಿವಿಧ ವಿಷಯಗಳಲ್ಲಿ ಸದಸ್ಯರೊಡನೆ ಚರ್ಚಿಸಿದರು‌.

LEAVE A REPLY

Please enter your comment!
Please enter your name here