ಉಪ್ಪಿನಂಗಡಿ: ಪ್ರತಿಯೊಬ್ಬರಿಗೂ ಕಾನೂನಿನ ಅರಿವು ತೀರಾ ಅಗತ್ಯ ಇದೆ-ಡಾ.ರಾಜರಾಮ್
ಉಪ್ಪಿನಂಗಡಿ: ಜೇಸಿಐ ಉಪ್ಪಿನಂಗಡಿ ಘಟಕ, ಯುವ ಜೇಸಿ ವಿಭಾಗ ಹಾಗೂ ಜೇಸಿಐ ಉಪ್ಪಿನಂಗಡಿ ಚಾರಿಟೇಬಲ್ ಟ್ರಸ್ಟ್ ಉಪ್ಪಿನಂಗಡಿ ಇದರ 44 ನೇ ವರ್ಷದ ಜೇಸಿ ಸಪ್ತಾಹ ಸ್ಪಂದನ ಮತ್ತು ಜೇಸಿಐ ಭಾರತದ ನಮಸ್ತೆ 2022 ಕಾರ್ಯಕ್ರಮ ಅಂಗವಾಗಿ ಉಪ್ಪಿನಂಗಡಿ ಸರ್ಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆ ಮಕ್ಕಳ ಹಕ್ಕು ಕ್ಲಬ್‌ನ ಆಶ್ರಯದಲ್ಲಿ ಕಾನೂನು ಮಾಹಿತಿ ಕಾರ್ಯಕ್ರಮ ನಡೆಯಿತು. ದೀಪ ಬೆಳಗಿಸಿ ಜೇಸಿ ಡಾ.ರಾಜಾರಾಂ ಉದ್ಘಾಟಿಸಿ ಮಾತನಾಡಿ ಪ್ರತಿಯೊಬ್ಬರಿಗೂ ಕಾನೂನಿನ ಅರಿವು ತೀರಾ ಅಗತ್ಯ ಇದೆ.ಅಂತಹ ಕೆಲಸ ನಿರ್ವಹಿಸುತ್ತಿರುವ ಜೇಸಿ ಸಂಸ್ಥೆಯ ಕಾರ್ಯ ಶ್ಲಾಘನೀಯವಾಗಿದೆ ಎಂದರು.
ಘಟಕದ ಉಪಾಧ್ಯಕ್ಷ ಜೇಸಿ ಕುಶಾಲಪ್ಪ ಅಧ್ಯಕ್ಷತೆ ವಹಿಸಿದ್ದರು. ಮಕ್ಕಳ ರಕ್ಷಣಾ ಕಾನೂನು ಮಾಹಿತಿ ಕಾರ್ಯಾಗಾರವನ್ನು ವಲಯ ತರಬೇತಿದಾರರು ಜೇಸಿ ಪ್ರಮೀತ ಚಂದ್ರಹಾಸ ನಡೆಸಿಕೊಟ್ಟರು. ಜೇಸಿ ವಿಜಯಕುಮಾರ್ ಕಲ್ಲಳಿಕೆ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ನಿಕಟಪೂರ್ವ ಅಧ್ಯಕ್ಷ ಕೆ.ವಿ.ಕುಲಾಲ್, ಶಾಲಾ ಮುಖ್ಯ ಗುರು ಹನುಮಂತಯ್ಯ, ಶಿಕ್ಷಕರಾದ ಕೃಷ್ಣವೇಣಿ, ಜೇಸಿ ಪ್ರಶಾಂತ್ ಕುಮಾರ್ ರೈ, ಜೇಸಿ ಮೋನಪ್ಪ ಪಮ್ಮನಮಜಲು, ಜೇಸಿ ಸುರೇಶ್, ಜೇಸಿ ದಿವಾಕರ ಶಾಂತಿನಗರ, ಜೇಸಿ ಮಹೇಶ್, ಜೇಸಿ ಹರೀಶ್ ನಟ್ಟಿಬೈಲು ಸಹಕರಿಸಿದರು.