ಪೆರಾಬೆ: ಕುಂತೂರು ಸರಕಾರಿ ಉ.ಹಿ.ಪ್ರಾ.ಶಾಲೆಯಲ್ಲಿ ನಡೆದ ಆಲಂಕಾರು ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಕುಂತೂರುಪದವು ಸರಕಾರಿ ಹಿ.ಪ್ರಾ.ಶಾಲೆಗೆ ಹಿರಿಯ ವಿಭಾಗದಲ್ಲಿ ಪ್ರಥಮ ಸಮಗ್ರ ಪ್ರಶಸ್ತಿ ಹಾಗೂ ಕಿರಿಯ ವಿಭಾಗದಲ್ಲಿ ದ್ವಿತೀಯ ಸಮಗ್ರ ಪ್ರಶಸ್ತಿ ಲಭಿಸಿದೆ.
ಹಿರಿಯ ವಿಭಾಗದ ಇಂಗ್ಲಿಷ್ ಕಂಠಪಾಠದಲ್ಲಿ ಸ್ವಪ್ನ ಕೆ.ಸಿ., ಅಭಿನಯ ಗೀತೆಯಲ್ಲಿ ಸಮೀಕ್ಷಾ ಕೆ.ಎಸ್.ಪ್ರಥಮ ಹಾಗೂ ಕಿರಿಯ ವಿಭಾಗದ ಆಶುಭಾಷಣ ಸ್ಪರ್ಧೆಯಲ್ಲಿ ಸ್ನೇಹಾ ಕೆ.ಸಿ.ಪ್ರಥಮ ಸ್ಥಾನ ಪಡೆದುಕೊಂಡು ತಾಲೂಕು ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.
ಹಿರಿಯ ವಿಭಾಗದ ಹಿಂದಿ ಕಂಠಪಾಠದಲ್ಲಿ ಧನ್ಯಾ, ಲಘುಸಂಗೀತದಲ್ಲಿ ನಿಶ್ಮಿತಾ, ಕಥೆ ಹೇಳವುದರಲ್ಲಿ ಸಮೀಕ್ಷಾ ಕೆ.ಎಸ್., ಛದ್ಮವೇಷ ಸ್ಪರ್ಧೆಯಲ್ಲಿ ಸಾತ್ವಿಕಾ ಕೆ.ಎಸ್. ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ. ಕಿರಿಯ ವಿಭಾಗದ ಛದ್ಮವೇಷದಲ್ಲಿ ನೇಹಾ ಕೆ.ಎನ್., ಚಿತ್ರಕಲೆಯಲ್ಲಿ ರೋಹಿತ್, ಧಾರ್ಮಿಕ ಪಠಣ(ಸಂಸ್ಕೃತ) ಶರಧಿ ಭಟ್, ಅಭಿನಯಗೀತೆ ಚಾರ್ವಿ ಕೆ., ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ. ಖತೀಜತುಲ್ ಅಫ್‌ರ ಧಾರ್ಮಿಕ ಪಠಣ(ಅರೇಬಿಕ್), ಕಥೆಹೇಳುವುದರಲ್ಲಿ ಚಾರ್ವಿ ಕೆ., ಹಾಸ್ಯದಲ್ಲಿ ನಿತಿನ್‌ಕುಮಾರ್, ಭಕ್ತಿಗೀತೆಯಲ್ಲಿ ನಿಶ್ಮಿತಾ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ ಎಂದು ಶಾಲಾ ಮುಖ್ಯಶಿಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.