ಉಪ್ಪಿನಂಗಡಿ: ಜಿಲ್ಲಾ ಮಟ್ಟದ ಐ.ಟಿ. ಕ್ವಿಜ್ ಸ್ಪರ್ಧೆಯಲ್ಲಿ ಉಪ್ಪಿನಂಗಡಿಯ ಸೈಂಟ್ ಮೇರಿಸ್ ಆಂಗ್ಲಮಾಧ್ಯಮ ಶಾಲೆಯ ವಿದ್ಯಾರ್ಥಿ ಲೆನ್ವಿನ್ ಡಿಸೋಜಾ ವಿಜೇತರಾಗಿದ್ದು, ಮೈಸೂರು ವಿಭಾಗೀಯ ಮಟ್ಟದ ಕ್ವಿಜ್ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.
ಲೆನ್ವಿನ್ 9ನೇ ತರಗತಿ ವಿದ್ಯಾರ್ಥಿಯಾಗಿದ್ದು, ಮಂಗಳೂರಿನ ಕಪಿತಾನಿಯೋ ಪ್ರೌಢಶಾಲೆಯಲ್ಲಿ ನಡೆದ ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿ ಈತ ವಿಜೇತನಾಗಿದ್ದಾನೆ. ಐ.ಟಿ. ಕ್ವಿಜ್ ಸ್ಪರ್ಧೆಯಲ್ಲಿ ಪ್ರಥಮ ಬಾರಿಗೆ ಸೈಂಟ್ ಮೇರಿಸ್ ಆಂಗ್ಲ ಮಾಧ್ಯಮ ಶಾಲೆ ಈ ಸಾಧನೆ ಮಾಡಿದೆ ಎಂದು ಶಾಲಾ ಸಂಚಾಲಕ ವಂ.ಫಾ. ಅಬೆಲ್ ಲೋಬೋ, ಮುಖ್ಯ ಶಿಕ್ಷಕಿ ಶ್ರೀಮತಿ ಮೀರಾ ಮರ್ಲಿನ್ ರೊಡ್ರಿಗಸ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.