- 653183.19 ಲಕ್ಷ ನಿವ್ವಳ ಲಾಭ 25ಶೇ. ಲಾಭಂಶ ವಿತರಣೆ
ಕಡಬ: ಕುಟ್ರುಪಾಡಿ ಹಾಲು ಉತ್ಪಾದಕರ ಸಹಕಾರಿ ಸಂಘದ ವಾರ್ಷಿಕ ಸಭೆಯು ಸಂಘದ ಅಧ್ಯಕ್ಷ ಕಿರಣ್ ಗೋಗಟೆಯವರ ಅಧ್ಯಕ್ಷತೆಯಲ್ಲಿ ಸ.ಉ.ಹಿ.ಪ್ರಾ.ಶಾಲೆಯಲ್ಲಿ ಸಭೆ ಸೆ.15ರಂದು ನಡೆಯಿತು.
ಸಂಘವು ವರದಿ ಸಾಲಿನಲ್ಲಿ 653183.19 ಲಕ್ಷ ನಿವ್ವಳ ಲಾಭ ಗಳಿಸಿದ್ದು ಸದಸ್ಯರಿಗೆ ಶೇ.25 ಡಿವಿಡೆಂಟ್ ಘೋಷಣೆ ಮಾಡಲಾಯಿತು. ಪ್ರತಿ ಲೀಟರ್ ಹಾಲಿಗೆ 77 ಪೈಸೆ ಬೋನಸ್ ನೀಡಲಾಗುವುದು ಎಂದು ಸಂಘದ ಅಧ್ಯಕ್ಷರು ಮಹಾಸಭೆಯಲ್ಲಿ ಘೋಷಣೆ ಮಾಡಿದರು.
ದ.ಕ. ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಪಶು ವೈದ್ಯಾಧಿಕಾರಿ ಡಾ. ಸಚಿನ್ ಹಾಗೂ ವಿಸ್ತಾರಣಾಧಿಕಾರಿ ಯುಮುನಾ ಇವರುಗಳು ಸದಸ್ಯರ ಪ್ರಶ್ನೆಗಳಿಗೆ ಉತ್ತರಿಸಿದರು. ವೇದಿಕೆಯಲ್ಲಿ ಉಪಾಧ್ಯಕ್ಷ ವಿಶ್ವನಾಥ ರೈ, ಕರುಣಾಕರ ಗೋಗಟೆ, ಟಿ.ಎಂ.ಕ್ಷೇವಿಯರ್, ಡೀಕಯ್ಯ ಉಳಿಪ್ಪು, ಮೋನಪ್ಪ ನಾಡೋಳಿ, ವೆಂಕಟೇಶ್ ಆರಿಗ, ಧರ್ಮಾವತಿ, ಲಲಿತಾ, ಬಾಬಿ ಪೂಜಾರಿ, ಜಯಪ್ರಕಾಶ್ ದೋಳ, ನಾಗಪ್ಪ ರಾಣ್ಯ ಮೊದಲಾದವರು ಉಪಸ್ಥಿತರಿದ್ದರು. ಕಾರ್ಯದರ್ಶಿ ಕೊರಗಪ್ಪ ಗೌಡ ಸ್ವಾಗತಿಸಿ ವರದಿ ಮಂಡಿಸಿದರು. ನಿರ್ದೇಶಕ ಟಿ.ಎಂ. ಕ್ಸೇವಿಯರ್ ವಂದಿಸಿದರು. ದೇವಕಿ ಕೂಡೂರು ಪ್ರಾರ್ಥಿಸಿದರು. ಹಾಲು ಪರೀಕ್ಷಕಿ ಲೀಲಾವತಿ, ಕಾರ್ಯಕರ್ತ ಮಹೇಶ್, ಶಿವಾನಂದ, ಗಂಗಮ್ಮ ಸಹಕರಿಸಿದರು.
ಸನ್ಮಾನ:
ಸಾಮಾಜಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಗೃಹರಕ್ಷಕದಳದ ಅಸೆಸ್ಟೆಂಟ್ ಸೆಕ್ಷನ್ ಲೀಡರ್ ತೀರ್ಥೇಶ್ ಅಮೈ ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಸಂಘಕ್ಕೆ ಅತೀ ಹೆಚ್ಚು ಹಾಲು ಹಾಕಿದ 10 ಜನ ಸದಸ್ಯರಿಗೆ ಬಹುಮಾನ ನೀಡಲಾಯಿತು. ಹಾಲು ಉತ್ಪಾದಕ ರ್‍ಯತರ ಮಕ್ಕಳಿಗೆ, ಮತ್ತು ಎಸ್.ಎಸ್.ಎಲ್.ಸಿ. ಪ್ರಥಮ ಸ್ಥಾನ ಪಡೆದ ಸಾಕ್ಷಾ ಎ. ಧನ್ಯಶ್ರೀ ಕೆ. ಮಂಜುಳಾ ಪಿ. ಪಿಯುಸಿ ಹೆಚ್ಚು ಅಂಕ ಗಳಿಸಿದ ಆರ್ಯನ್, ಮಿಥುನ್ ಇವರನ್ನು ಗೌರವಿಸಲಾಯಿತು.