ಕಡಬ ತಾಲೂಕು ಸಂಜೀವಿನಿ ಒಕ್ಕೂಟದಿಂದ ಓಣಂ ಆಚರಣೆ ಪ್ರಯುಕ್ತ ಪೂಕಳಂ ಸ್ಪರ್ಧೆ

0

ಕಡಬ: ಕೇರಳದವರು ಶ್ರದ್ಧೆಯಿಂದ ಆಚರಿಸುವ ಓಣಂ ಆಚರಣೆಗೆ ಜಾತಿ ಮತಗಳನ್ನು ಒಗ್ಗೂಡಿಸುವ ಶಕ್ತಿಯಿದೆ. ಪೂಕಳಂ ಕಲೆ ಮಾತ್ರವಲ್ಲ ಅದರಲ್ಲಿ ದೇವರ ಭಕ್ತಿಯಿದೆ, ಕಲೆ ಮತ್ತು ಪ್ರಾಥನೆಗಳು ಒಂದಾದಾಗ ಮನುಷ್ಯನ ನೆಮ್ಮದಿಗೆ ಕಾರಣವಾಗುತ್ತದೆ. ಇಂತಹ ಆಚರಣೆಗಳು ಸಾರ್ವಜನಿಕವಾಗಿ ನಡೆದಾಗ ಹಬ್ಬಗಳ ಮನವರಿಕೆ ಆಗುತ್ತದೆ ಎಂದು ಜಿಲ್ಲಾ ಪರಿಷತ್ ಮಾಜಿ ಸದಸ್ಯ ಮೀರಾ ಸಾಹೇಬ್ ಹೇಳಿದರು.

??????

ಅವರು ಸೆ.17ರ ಕಡಬ ಶ್ರೀ ದುರ್ಗಾಂಬಿಕಾ ಅಮ್ಮನವರ ದೇವಸ್ಥಾನದ ಸಭಾಂಗಣದಲ್ಲಿ ನಡೆದ ಕುಮಾರಧಾರ ಸಂಜೀವಿನಿ ಕಡಬ ತಾಲೂಕು ವತಿಯಿಂದ ಓಣಂ ಆಚರಣೆ ಪ್ರಯುಕ್ತ ತಾಲೂಕು ಮಟ್ಟದ ಪೂಕಳಂ ಸ್ಪರ್ಧೆಯ ಬಹುಮಾನ ವಿತರಿಸಿ ಮಾತನಾಡಿದರು.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಪಿ ಪಿ ವರ್ಗಿಸ್ ಮಾತನಾಡಿ, ಓಣಂ ಆಚರಣೆಯಲ್ಲಿ ಎಲ್ಲಾ ಜಾತಿ ಧರ್ಮದವರು ಭಾಗಿಯಾಗುತ್ತಾರೆ. ಹಾಗಾಗಿ ಎಲ್ಲಾ ಆಚರಣೆಗಳಿಂದ ಓಣಂ ಬಿನ್ನವಾಗಿದೆ. ಸಮಾಜದಲ್ಲಿ ಸಾಮರಸ್ಯಕ್ಕೆ ಇಂತಹ ಆಚಣೆಗಳನ್ನು ಸಾಮೂಹಿಕವಾಗಿ ಆಚರಿಸುವುದು ಅಗತ್ಯವಾಗಿದೆ ಎಂದರು.

ಶ್ರೀ ದುರ್ಗಾಂಬಿಕಾ ಭಜನ ಮಂಡಳಿ ಅಧ್ಯಕ್ಷ ಸೋಮಪ್ಪ ನಾಕ್, ಸಾಮಾಜಿಕ ಕಾರ್ಯಕರ್ತ ತೋಮಸ್ ನೂಜಿಬಾಳ್ತಿಲ ಸಂದರ್ಭೋಚಿವಾಗಿ ಮಾತನಾಡಿದರು. ಕುಮಾರಧಾರ ಸಂಜೀವಿನಿ ಕಡಬ ತಾಲೂಕು ಒಕ್ಕೂಟ ಅಧ್ಯಕ್ಷೆ ಸುಜಾತ ಗಣೇಶ್ ಅಧ್ಯಕ್ಷತೆ ವಹಿಸಿದ್ದರು. ಒಕ್ಕೂಟದ ಕಡಬ ತಾಲೂಕು ಉಪಾಧ್ಯಕ್ಷೆ ರೇವತಿ ಕೆ, ಉಪಕಾರ್ಯದರ್ಶಿ ಅಣ್ಣಮ್ಮ, ಕೃಪಾ ಸುದರ್ಶನ ಸುಬ್ರಹ್ಮಣ್ಯ, ಲತಾ ಸರ್ವೇಶ್ವರ್ ಮೊದಲಾದವರು ಉಪಸ್ಥಿತರಿದ್ದರು. ಸ್ಪರ್ದೆಯಲ್ಲಿ ಬಿಳಿನೆಲೆ ನಂದ ಗೋಕುಲ ಸಂಜೀವಿನಿ ಒಕ್ಕೂಟ ಪ್ರಥಮ , ಓಂ ಶ್ರೀ ಸಂಜೀವಿನಿ ಸುಬ್ರಹ್ಮಣ್ಯ ದ್ವಿತೀಯ, ಸ್ನೇಹ ಸಂಜೀವಿನಿ ಎಡಮಂಗಳ ತೃತೀಯ ಸ್ಥಾನವನ್ನು ಪಡೆದುಕೊಂಡಿತ್ತು. ಒಕ್ಕೂಟದ ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕ ಜಗತ್ ಕಜೆ ಪ್ರಸ್ತಾವಿಸಿದರು. ಜ್ಞಾನ ಸೆಲ್ವಿ ಸ್ವಾಗತಿಸಿದರು. ಸುಜಾತ ಕುಂದಾರ್ ವಂದಿಸಿದರು. ರೆಬೆಕಾ ಕುಟ್ರುಪ್ಪಾಡಿ ನಿರೂಪಿಸಿದರು.

LEAVE A REPLY

Please enter your comment!
Please enter your name here