ಪುತ್ತೂರು ತಾ| ರಬ್ಬರ್ ಬೆಳೆಗಾರರ ಮಾರಾಟ ಮತ್ತು ಸಂಸ್ಕರಣ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ

0

  • ರಬ್ಬರ್ ಬೆಳೆಗಾರರ ನೆರವಿಗಾಗಿ ಕೇಂದ್ರ ಸಚಿವರ ಭೇಟಿಗೆ ನಿರ್ಧಾರ
  • 35-81 ಕೋಟಿ ರೂ.ವ್ಯವಹಾರ -56.49 ಲಕ್ಷ ರೂ.ನಿವ್ವಳ ಲಾಭ
  • ಶಾಖಾ ಕಚೇರಿಗಳಿಗೆ ಸಾಫ್ಟ್‌ವೇರ್, ಸಿಸಿ ಕೆಮರಾ ಅಳವಡಿಕೆ
  • ರಬ್ಬರ್ ಹಾಲು ಖರೀದಿ, ಸಬ್ಸಿಡಿಯಲ್ಲಿ ಮೈಲುತುತ್ತು ವಿತರಣೆಗೆ ಕ್ರಮ
  • ಅತೀ ಹೆಚ್ಚು ರಬ್ಬರ್ ಮಾರಾಟಗಾರರಿಗೆ ಸನ್ಮಾನ
  • ಹಿರಿಯ ರಬ್ಬರ್ ಬೆಳೆಗಾರರಿಗೆ ಗೌರವಾರ್ಪಣೆ
  • 11 ಮಂದಿಗೆ ಗಾಲಿಖುರ್ಚಿ ವಿತರಣೆ
  • ಸಹಕಾರಿ ಕ್ಷೇತ್ರದ ಸಾಧಕರಿಗೆ ಸನ್ಮಾನ

ನೆಲ್ಯಾಡಿ: ಪುತ್ತೂರು ತಾಲೂಕು ರಬ್ಬರ್ ಬೆಳೆಗಾರರ ಮಾರಾಟ ಮತ್ತು ಸಂಸ್ಕರಣ ಸಹಕಾರಿ ಸಂಘ, ನೆಲ್ಯಾಡಿ ಇದರ ೨೦೨೧-೨೨ನೇ ಸಾಲಿನ ವಾರ್ಷಿಕ ಮಹಾಸಭೆ ಸೆ.೧೧ರಂದು ಬೆಳಿಗ್ಗೆ ನೆಲ್ಯಾಡಿಯಲ್ಲಿರುವ ಸಂಘದ ಕೇಂದ್ರ ಕಚೇರಿಯ ಆವರಣದಲ್ಲಿ ನಡೆಯಿತು.
ಸಂಘದ ಅಧ್ಯಕ್ಷ ಬೆಳ್ಳಿಪ್ಪಾಡಿ ಪ್ರಸಾದ್ ಕೌಶಲ್ ಶೆಟ್ಟಿಯವರು ಸಭೆಯ ಅಧ್ಯಕ್ಷತೆ ವಹಿಸಿದ್ದರು. ಆರಂಭದಲ್ಲಿ ಸ್ವಾಗತಿಸಿ ಮಾತನಾಡಿದ ಅಧ್ಯಕ್ಷ ಬಿ.ಪ್ರಸಾದ್ ಕೌಶಲ್ ಶೆಟ್ಟಿಯವರು, ಕಳೆದ ೩೨ ವರ್ಷಗಳಿಂದ ಸಂಘವು ಹಿರಿಯ ಸಹಕಾರಿಗಳ ಮಾರ್ಗದರ್ಶನ ಮತ್ತು ಎಲ್ಲಾ ಸದಸ್ಯರ ಸಹಕಾರದಿಂದ ಉತ್ತಮ ಸಂಸ್ಥೆಯಾಗಿ ಬೆಳೆಯುತ್ತಿದೆ. ೨೦೨೧-೨೨ನೇ ಸಾಲಿನಲ್ಲಿ ಸಂಘವು ೩೫,೮೧,೫೮,೭೨೦ ರೂ.,ಒಟ್ಟು ವ್ಯವಹಾರ ನಡೆಸಿದ್ದು ೫೬,೪೯,೬೦೧ ರೂ. ನಿವ್ವಳ ಲಾಭಗಳಿಸಿದೆ. ಒಟ್ಟು ವ್ಯವಹಾರ ಹಾಗೂ ಲಾಭದಲ್ಲಿ ಕಳೆದ ಬಾರಿಗಿಂತ ಈ ಭಾರಿ ಹೆಚ್ಚಳವಾಗಿದೆ. ೨೦೨೧-೨೨ನೇ ಸಾಲಿನಲ್ಲಿ ೧,೫೯,೧೧,೧೫೯ ರೂ.ತೆರಿಗೆ ಸರಕಾರಕ್ಕೆ ಪಾವತಿಸಲಾಗಿದೆ. ಠೇವಣಿ ಸಂಗ್ರಹದಲ್ಲೂ ಪ್ರಗತಿಯಾಗಿದೆ. ರಬ್ಬರ್ ಧಾರಣೆ ಇಳಿಕೆಯಾಗಿರುವ ಸಂಕಷ್ಟ ಸಮಯದಲ್ಲೂ ಸಂಘದ ಸದಸ್ಯರು ನೀಡಿರುವ ಸಹಕಾರದಿಂದ ಸಂಘ ವ್ಯಾಪಾರದಲ್ಲಿ ಹೆಚ್ಚಿನ ಲಾಭಗಳಿಸಿದೆ ಎಂದರು.

ಪಾರದರ್ಶಕ ವ್ಯವಹಾರಕ್ಕೆ ಒತ್ತು;
ಪಾರದರ್ಶಕ ವ್ಯವಹಾರಕ್ಕೆ ಸಂಬಂಧಿಸಿ ಆಡಳಿತ ಮಂಡಳಿಯು ಕೆಲವೊಂದು ಕಠಿಣ ಕ್ರಮ ಕೈಗೊಂಡಿದೆ. ಇದಕ್ಕಾಗಿಯೇ ಎಲ್ಲಾ ಶಾಖಾ ಕಚೇರಿಗಳಲ್ಲೂ ಸಾಫ್ಟ್‌ವೇರ್, ಸಿಸಿ ಕೆಮರಾ ಅಳವಡಿಸಲಾಗಿದ್ದು ಕೇಂದ್ರ ಕಚೇರಿಗೆ ಸಂಪರ್ಕ ಕಲ್ಪಿಸಲಾಗಿದೆ. ನಿರ್ದೇಶಕರೂ ಪ್ರತಿ ಶಾಖಾ ಕಚೇರಿಗೂ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ ಎಂದು ಬಿ.ಪ್ರಸಾದ್ ಕೌಶಲ್ ಶೆಟ್ಟಿ ಹೇಳಿದರು.

ರಬ್ಬರ್ ಹಾಲು ಖರೀದಿಗೆ ನಿರ್ಧಾರ:
ಮುಂದಿನ ದಿನಗಳಲ್ಲಿ ರಬ್ಬರ್ ಬೆಳೆಗಾರರಿಂದ ನೇರವಾಗಿ ರಬ್ಬರ್ ಹಾಲು ಖರೀದಿಸಲು ನಿರ್ಧರಿಸಲಾಗಿದೆ. ಅಲ್ಲದೆ ಸದಸ್ಯರಿಗೆ ಸಬ್ಸಿಡಿಯಲ್ಲಿ ಮೈಲುತುತ್ತು ವಿತರಣೆಯೂ ಮಾಡಲಾಗುವುದು. ಮುಂದಿನ ವರ್ಷದಿಂದ ಸೈನಿಕರಿಗೆ ಠೇವಣಿಯಲ್ಲಿ ಶೇ.೦.೫ರಷ್ಟು ಹೆಚ್ಚು ಬಡ್ಡಿ, ತಾತ್ಕಾಲಿಕ ನೆಲೆಯಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿಗಳಿಗೆ ವಿಮಾ ಸೌಲಭ್ಯ ನೀಡಲು ನಿರ್ಧರಿಸಲಾಗಿದೆ. ರಬ್ಬರ್ ಮಾರಾಟಗಾರರ ಅನುಕೂಲಕ್ಕಾಗಿ ನೆಲ್ಯಾಡಿಯಲ್ಲಿ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡು ಉಪಖರೀದಿ ಕೇಂದ್ರ ಆರಂಭಿಸಲಾಗಿದೆ. ನಿರ್ದೇಶಕರು, ಸದಸ್ಯರು, ಸಿಬ್ಬಂದಿಗಳ ಸಹಕಾರದಿಂದ ಸಂಘ ಅಭಿವೃದ್ಧಿಗೊಂಡಿದೆ. ಪ್ರತಿ ಕೆ.ಜಿ.ರಬ್ಬರ್‌ಗೆ ಬೋನಸ್ ನೀಡುವುದು ಸೇರಿದಂತೆ ರಬ್ಬರ್ ಬೆಳೆಗಾರರಿಗೆ ಸಂಘದಿಂದ ಪ್ರಯೋಜನ ಸಿಗಬೇಕೆಂಬ ನಿಟ್ಟಿನಲ್ಲಿ ಪ್ರಯತ್ನ ನಡೆಸುತ್ತಿದ್ದೇವೆ. ಸಂಘವನ್ನು ಇನ್ನಷ್ಟೂ ಸದೃಢವಾಗಿ ಬೆಳೆಸಲು ಸದಸ್ಯರು, ಸಲಹೆ, ಸಹಕಾರ ನೀಡಬೇಕೆಂದು ಪ್ರಸಾದ್ ಕೌಶಲ್ ಶೆಟ್ಟಿ ಹೇಳಿದರು.

ಕೇಂದ್ರ ಸಚಿವರ ಭೇಟಿಗೆ ನಿರ್ಧಾರ:
ಸದಸ್ಯ ಇಚ್ಲಂಪಾಡಿಯ ವರ್ಗೀಸ್ ಅಬ್ರಹಾಂರವರು ಮಾತನಾಡಿ, ರಬ್ಬರ್ ಧಾರಣೆ ಕುಸಿತಗೊಂಡಿದೆ. ಖರ್ಚು ವೆಚ್ಚಗಳಿಗೆ ಸರಿಯಾಗಿ ಧಾರಣೆ ಸಿಗುತ್ತಿಲ್ಲ. ಇದರಿಂದ ರಬ್ಬರ್ ಬೆಳೆಗಾರರು ಸಂಕಷ್ಟದಲ್ಲಿದ್ದಾರೆ. ಆದ್ದರಿಂದ ರಬ್ಬರ್ ಸೊಸೈಟಿಯವರೆಲ್ಲರೂ ಒಟ್ಟು ಸೇರಿಕೊಂಡು ಕೇಂದ್ರ ಸಚಿವರನ್ನು ಭೇಟಿ ನೀಡಿ ರಬ್ಬರ್ ಬೆಳೆಗಾರರ ಹಿತ ಕಾಪಾಡಬೇಕೆಂದು ಆಗ್ರಹಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷ ಬಿ.ಪ್ರಸಾದ್ ಕೌಶಲ್ ಶೆಟ್ಟಿಯವರು, ಈ ನಿಟ್ಟಿನಲ್ಲಿ ಈಗಾಗಲೇ ಪ್ರಯತ್ನ ಮಾಡಲಾಗುತ್ತಿದೆ. ರಾಜ್ಯ ರಬ್ಬರ್ ಬೆಳೆಗಾರರ ಸಂಘದ ಮೂಲಕ ಕೇಂದ್ರ ಸಚಿವರನ್ನು ಭೇಟಿ ನೀಡಿ ಧಾರಣೆ ಕುಸಿತದಿಂದ ಸಂಕಷ್ಟದಲ್ಲಿರುವ ರಬ್ಬರ್ ಬೆಳೆಗಾರರ ಹಿತ ಕಾಪಾಡಲಾಗುವುದು ಎಂದು ತಿಳಿಸಿದರು. ರಬ್ಬರ್‌ಗೆ ಕನಿಷ್ಠ ಬೆಂಬಲ ಬೆಲೆ ನೀಡುವ ನಿಟ್ಟಿನಲ್ಲಿ ಪ್ರಯತ್ನಿಸಬೇಕೆಂದು ಸದಸ್ಯ ಶೇಷಪತಿ ಜಿ.ರೈಯವರು ಸಲಹೆ ನೀಡಿದರು.

ಟಯರ್ ಕಂಪನಿಗಳ ಭೇಟಿ ಮಾಡಿ:
ರಬ್ಬರ್ ಧಾರಣೆ ಕುಸಿತಗೊಂಡಿದೆ. ಆದರೆ ಅತೀ ಹೆಚ್ಚಿನ ಪ್ರಮಾಣದಲ್ಲಿ ಟಯರ್ ಕಂಪನಿಗಳು ರಬ್ಬರ್ ಬಳಕೆ ಮಾಡುತ್ತವೆ. ರಬ್ಬರ್ ಧಾರಣೆ ಕುಸಿದರೂ ಟಯರ್‌ಗಳ ಬೆಲೆ ಕಡಿಮೆಯಾಗಿಲ್ಲ. ಆದ್ದರಿಂದ ಒಂದೇ ಟಯರ್ ಕಂಪನಿಯನ್ನು ನೆಚ್ಚಿಕೊಳ್ಳದೇ ಸಂಘದ ಅಧ್ಯಕ್ಷರು, ನಿರ್ದೇಶಕರು ಸೇರಿದಂತೆ ಹಿರಿಯ ರಬ್ಬರ್ ಬೆಳೆಗಾರರರು ದೇಶದ ವಿವಿಧೆಡೆ ಇರುವ ಟಯರ್ ಕಂಪನಿಗಳಿಗೆ ಭೇಟಿ ನೀಡಿ ಅವರೊಂದಿಗೆ ಮಾತುಕತೆ ನಡೆಸಿ ರಬ್ಬರ್ ಧಾರಣೆ ಕುಸಿತಕ್ಕೆ ಪರಿಹಾರ ಕಂಡುಕೊಳ್ಳಬೇಕೆಂದು ಸದಸ್ಯರು ಹೇಳಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಅಧ್ಯಕ್ಷರು, ಕಳೆದ ೮ ವರ್ಷದಿಂದ ಎಂಆರ್‌ಎಫ್ ಟಯರ್ ಕಂಪನಿಯವರು ನಮಗೆ ಬಹಳಷ್ಟು ಸಹಕಾರ ನೀಡಿದ್ದಾರೆ. ಆದರೂ ಹೆಚ್ಚು ಬೆಲೆ ಕೊಡುವ ಕಂಪನಿಗಳಿಗೆ ರಬ್ಬರ್ ಮಾರಾಟ ಮಾಡಲು ಸಿದ್ಧರಿದ್ದೇವೆ ಎಂದು ಹೇಳಿದರು. ಗೋಪಾಲಕೃಷ್ಣ ನಾಯಕ್ ಪೊರೋಳಿ, ಗಿರಿಧರ ರೈ ಕಡಬ, ಶ್ರೀಧರ ಗೌಡ, ಮ್ಯಾಥ್ಯು ಎ.ಸಿ.,ಕೆ.ಪಿ.ತೋಮಸ್ ಸೇರಿದಂತೆ ಹಲವು ಸದಸ್ಯರು ಸಲಹೆ ಸೂಚನೆ ನೀಡಿದರು.

ಅತೀ ಹೆಚ್ಚು ರಬ್ಬರ್ ಮಾರಾಟಗಾರರಿಗೆ ಸನ್ಮಾನ:
೨೦೨೧-೨೨ನೇ ಸಾಲಿನಲ್ಲಿ ಸಂಘಕ್ಕೆ ಅತೀ ಹೆಚ್ಚು ರಬ್ಬರ್ ಮಾರಾಟ ಮಾಡಿದ ಸದಸ್ಯರಿಗೆ ಗೌರವಾರ್ಪಣೆ ಮಾಡಲಾಯಿತು. ನೆಲ್ಯಾಡಿಯ ಕೇಂದ್ರ ಕಚೇರಿ ಪರವಾಗಿ ಪ್ರವೀಣ್‌ಕುಮಾರ್ ಜಿ.ಗಾಣದಮೂಲೆ, ವಾಯಪ್ರಭಾ ಹೆಗ್ಡೆ ಶಾಂತಿಮಾರು, ಮ್ಯಾಥ್ಯು ಎ.ಸಿ.ಕಾಪಿನಬಾಗಿಲು, ಕಡಬ ಶಾಖೆ ಪರವಾಗಿ ಕೃಷ್ಣಪ್ರಸಾದ್ ಭಟ್ ಕೋಡಿಂಬಾಳ, ರೋಯ್ ಅಬ್ರಹಾಂ ಕುಂತೂರುಪದವು, ಅಲೆಗ್ಸಾಂಡರ್ ಕುಂತೂರುಪದವು, ಪುತ್ತೂರು ಶಾಖೆ ಪರವಾಗಿ ಗಿರೀಶ್‌ಕೃಷ್ಣ ಪಾಣಾಜೆ, ವೇಣುಗೋಪಾಲ್ ಪಟ್ಟೆ ಬಡಗನ್ನೂರು, ಉಮೇಶ್ಚಂದ್ರ ಗೌಡ ಬಿ.ಆರ್.ಬೆಟ್ಟಂಪಾಡಿ, ಈಶ್ವರಮಂಗಲ ಶಾಖೆ ಪರವಾಗಿ ನವೀನ್‌ಕುಮಾರ್ ಕೆ.ನೆಟ್ಟಣಿಗೆ, ಮನೋಜ್ ರೈ ಬಡಗನ್ನೂರು, ಕೊರಗಪ್ಪ ನಾಯ್ಕ್ ಕರ್ನೂರು, ಕೆಯ್ಯೂರು ರಬ್ಬರ್ ಖರೀದಿಕೇಂದ್ರದ ಪರವಾಗಿ ಲಕ್ಷ್ಮೀನಾರಾಯಣ ಶೆಟ್ಟಿ, ಸಂತೋಷ್‌ಕುಮಾರ್ ರೈ, ಮೋಹನ್ ರೈ, ಇಚ್ಲಂಪಾಡಿ ರಬ್ಬರ್ ಖರೀದಿ ಕೇಂದ್ರದ ಪರವಾಗಿ ಪಾಪಚ್ಚನ್ ಒ., ತೋಮಸ್ ಸಿ.ಜೆ., ತಿಮ್ಮಪ್ಪ ಗೌಡ ಎ.ಅವರಿಗೆ ಪ್ರಥಮ,ದ್ವಿತೀಯ ಹಾಗೂ ತೃತೀಯ ಬಹುಮಾನ ನೀಡಿ ಗೌರವಿಸಲಾಯಿತು. ಸಂಘಕ್ಕೆ ಅತೀ ಹೆಚ್ಚು ರಬ್ಬರ್ ಮಾರಾಟ ಮಾಡಿದ ಖಾಸಗಿ ಮಾರಾಟಗಾರರಾದ ಕಡಬ ಕರಾವಳಿ ಟ್ರೇಡಿಂಗ್ಸ್‌ನ ತಾಜುದ್ದೀನ್ ಹಾಗೂ ಸುಳ್ಯ ಸುಪಾರಿ ಸೆಂಟರ್‌ನ ಮಾಲಕ ಅಬ್ಬಾಸ್‌ರವರನ್ನು ಗೌರವಿಸಲಾಯಿತು.

ಹಿರಿಯ ರಬ್ಬರ್ ಬೆಳೆಗಾರರಿಗೆ ಗೌರವಾರ್ಪಣೆ:
ಸಂಘದಲ್ಲಿ ವ್ಯವಹಾರ ಮಾಡಿದ ಹಿರಿಯ ರಬ್ಬರ್ ಬೆಳೆಗಾರರನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು. ನೆಲ್ಯಾಡಿ ಕೇಂದ್ರ ಕಚೇರಿ ಪರವಾಗಿ ಶಿವರಾಮ ನಾಯ್ಕ್ ಸಣ್ಣಂಪಾಡಿ, ಕಡಬ ಶಾಖೆ ಪರವಾಗಿ ಕರುಣಾಕರ ಗೋಗಟೆ ನಾಡೋಳಿ, ಪುತ್ತೂರು ಶಾಖೆ ಪರವಾಗಿ ಜಗತ್‌ಪಾಲ ಆರಿಗ ಕೈಪಂಗಳ, ಈಶ್ವರಮಂಗಲ ಶಾಖೆ ಪರವಾಗಿ ನಾಗಪ್ಪಯ್ಯ ವಿ., ನೆಟ್ಟಣಿಗೆ ಮುಡ್ನೂರು, ಕೆಯ್ಯೂರು ರಬ್ಬರ್ ಖರೀದಿ ಕೇಂದ್ರದ ಪರವಾಗಿ ಶ್ರೀಧರ ಎ.ಅಂಗಡಿಹಿತ್ಲು, ಇಚ್ಲಂಪಾಡಿ ರಬ್ಬರ್ ಖರೀದಿ ಕೇಂದ್ರದ ಪರವಾಗಿ ರಾಘವನ್ ಕೆ.ಕೆ.ಕುಂಞಿಮಾರು ಅವರನ್ನು ಗೌರವಿಸಲಾಯಿತು.

ಶಾಖೆಗಳಿಗೆ ಗೌರವಾರ್ಪಣೆ:
೨೦೨೧-೨೨ನೇ ಸಾಲಿನಲ್ಲಿ ಅತೀ ಹೆಚ್ಚು ವ್ಯವಹಾರ ಮಾಡಿದ ಶಾಖೆಗಳನ್ನು ಮತ್ತು ರಬ್ಬರ್ ಖರೀದಿ ಕೇಂದ್ರಗಳನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು. ಸಂಘದ ಉಪಾಧ್ಯಕ್ಷ ರೋಯ್ ಅಬ್ರಹಾಂ, ನಿರ್ದೇಶಕರಾದ ಸಿ.ಜೋರ್ಜ್‌ಕುಟ್ಟಿ, ಎನ್.ವಿ.ವ್ಯಾಸ, ರಮೇಶ್ ಕಲ್ಪುರೆ, ಸುಭಾಷ್ ನಾಯಕ್ ಎಸ್., ಸತ್ಯಾನಂದ ಬಿ., ಶ್ರೀರಾಮ ಪಕ್ಕಳ, ಗಿರೀಶ್ ಸಾಲಿಯಾನ್ ಬಿ., ಜಯರಾಮ ಬಿ., ಅರುಣಾಕ್ಷಿ, ಗ್ರೇಸಿನೈನಾನ್, ಬೈರ ಮುಗೇರ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯನಿರ್ವಾಹಣಾಧಿಕಾರಿ ಶಶಿಪ್ರಭಾ ಕೆ.,ವರದಿ ಮಂಡಿಸಿದರು. ಉಪಾಧ್ಯಕ್ಷ ರೋಯ್ ಅಬ್ರಹಾಂ ವಂದಿಸಿದರು.

೧೧ ಮಂದಿಗೆ ಗಾಲಿಖುರ್ಚಿ ವಿತರಣೆ:
ನಡೆದಾಡಲು ಅಶಕ್ತರಾಗಿರುವ ೧೧ ಮಂದಿಗೆ ಈ ಸಂದರ್ಭದಲ್ಲಿ ಗಾಲಿಖುರ್ಚಿ ವಿತರಣೆ ಮಾಡಲಾಯಿತು. ಧರ್ಣಪ್ಪ ಗೌಡ ಇಚ್ಲಂಪಾಡಿ, ಕುದ್ಮಾರ ಮುಗೇರ ಇಚ್ಲಂಪಾಡಿ, ಮರಿಯಮ್ಮ ಅಬ್ರಹಾಂ ಶಿಬಾಜೆ, ಸ್ವಸ್ತಿಕ್ ಪೂಜಾರಿ ನಡ್ಚಿಲ್ ಉಪ್ಪಿನಂಗಡಿ, ನೆಬಿಸ, ಅಣ್ಣು ಕೆಯ್ಯೂರು, ಹಂಝ ಬೈರಿಕಟ್ಟೆ, ಲಕ್ಷ್ಮೀ ಕೆಯ್ಯೂರು, ಅಬ್ದುಲ್ಲಾ ಅರಿಯಡ್ಕ, ಐತ ಮುಗೇರ ಪಡುವನ್ನೂರು ಹಾಗೂ ಉಮ್ಮರಬ್ಬರವರಿಗೆ ಗಾಲಿಖುರ್ಚಿ ವಿತರಿಸಲಾಯಿತು.

ಸಹಕಾರಿ ಕ್ಷೇತ್ರದ ಸಾಧಕರಿಗೆ ಸನ್ಮಾನ:
ಸಂಘದ ಸದಸ್ಯರಾಗಿದ್ದು ಸಹಕಾರಿ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಪಿಎಲ್‌ಡಿ ಬ್ಯಾಂಕ್‌ನ ನಿರ್ದೇಶಕ, ಬನ್ನೂರು ರೈತರ ಸೇವಾ ಸಹಕಾರಿ ಸಂಘದ ಉಪಾಧ್ಯಕ್ಷ, ಜಿಲ್ಲಾ ಸಹಕಾರಿ ಯೂನಿಯನ್ ನಿರ್ದೇಶಕ, ಸ್ಕ್ಯಾಡ್ಸ್‌ನ ನಿರ್ದೇಶಕ, ಕರ್ನಾಟಕ ರಾಜ್ಯ ಕಾಸ್ಕಾರ್ಡ್ ಬ್ಯಾಂಕ್‌ನ ರಾಜ್ಯಮಟ್ಟದ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿರುವ ನೀರ್ಪಾಜೆ ರಾಜಶೇಖರ ಜೈನ್‌ರವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

LEAVE A REPLY

Please enter your comment!
Please enter your name here