ಬಂಬಿಲ ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕ ಸಾಮಾನ್ಯ ಸಭೆ

0

  • ರೂ, 1,71,45,927.99. ವ್ಯವಹಾರ, ರೂ, 1.22 ಲಕ್ಷ ರೂ ಲಾಭ- ಜಯಪ್ರಕಾಶ್ ಎನ್.ಆರ್

ಪುತ್ತೂರು: ಬಂಬಿಲ ಹಾಲು ಉತ್ಪಾದಕರ ಸಹಕಾರ ಸಂಘ 2021-22ನೇ ಸಾಲಿನಲ್ಲಿ ರೂ, 1,71,45,927.99 ವ್ಯವಹಾರವನ್ನು ನಡೆಸಿ, ರೂ, 1,22 ಲಕ್ಷ ರೂ, ಲಾಭವನ್ನುಗಳಿಸಿದೆ ಎಂದು ಸಂಘದ ಅಧ್ಯಕ್ಷ ಜಯಪ್ರಕಾಶ್ ಎನ್.ಆರ್‌ರವರು ತಿಳಿಸಿದರು.

ಅವರು ಸೆ. 16 ರಂದು ಸಂಘದ ವಠಾರದಲ್ಲಿ ಜರಗಿದ ಸಂಘದ ವಾರ್ಷಿಕ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ, ಮಾತನಾಡಿ ಸಂಘಕ್ಕೆ ಹಾಲು ಪೂರೈಕೆ ಮಾಡುತ್ತಿರುವ ಎಲ್ಲ ಸದಸ್ಯರುಗಳಿಗೆ ಪ್ರತಿ ಲೀಟರ್ ಹಾಲಿಗೆ 39 ಪೈಸೆಯಂತೆ ಬೋನಸ್ ನೀಡಲಾಗುವುದು ಎಂದು ಹೇಳಿ, ಪ್ರತಿಯೊಬ್ಬರು ಸಂಘದ ಬೆಳವಣಿಗೆಯಲ್ಲಿ ಸಹಕಾರವನ್ನು ನೀಡುವಂತೆ ವಿನಂತಿಸಿದರು.

ಹೆಚ್ಚಿನ ಸೇವೆಯನ್ನು ನೀಡಲಿ- ನಾಗೇಶ್:
ದ,ಕ, ಹಾಲು ಒಕ್ಕೂಟದ ವಿಸ್ತರಣಾಧಿಕಾರಿ ನಾಗೇಶ್‌ರವರು ಮಾತನಾಡಿ ಹಾಲು ಪೂರೈಕೆಮಾಡುವ ಪ್ರತಿಯೊಬ್ಬ ಸದಸ್ಯರುಗಳು ಹಾಲಿನ ಗುಣಮಟ್ಟದ ಬಗ್ಗೆ ಹೆಚ್ಚಿನ ಕಾಳಜಿಯನ್ನು ವಹಿಸಿಕೊಳ್ಳಬೇಕು.ಗುಣಮಟ್ಟದ ಹಾಲು ನೀಡಿದಲ್ಲಿ ಹೆಚ್ಚಿನ ದರವನ್ನು ಪಡೆಯಬಹುದು ಎಂದು ಹೇಳಿದರು. ಬಂಬಿಲ ಹಾಲು ಉತ್ಪಾದಕರ ಸಹಕಾರ ಸಂಘವು ಉತ್ತಮ ರೀತಿಯಲ್ಲಿ ನಡೆಯುತ್ತಿದ್ದು, ಮುಂಬರುವ ದಿನಗಳಲ್ಲಿ ಸಂಘವು ಹೊಸ ಕಟ್ಟಡವನ್ನು ನಿರ್ಮಿಸುವ ಮೂಲಕ ಹೆಚ್ಚಿನ ಸೇವೆಯನ್ನು ನೀಡಲಿ ಎಂದು ಆಶಿಸಿದರು.

ಸಮತೋಲಿತ ಆಹಾರ ಪೂರೈಕೆ ಮಾಡಿ- ಡಾ. ಸತೀಶ್ ರಾವ್ : ದ.ಕ, ಹಾಲು ಒಕ್ಕೂಟದ ಉಪ ವ್ಯವಸ್ಥಾಪಕ ಡಾ. ಸತೀಶ್ ರಾವ್‌ವರು ಮಾತನಾಡಿ ಹಸಿರು ಮೇವಿಗೆ ಹೆಚ್ಚಿನ ಆದತ್ಯೆಯನ್ನು ನೀಡಿದಲ್ಲಿ ಹಾಲಿನ ಗುಣಮಟ್ಟವನ್ನು ಪಡೆಯಬಹುದು. ಈ ನಿಟ್ಟಿನಲ್ಲಿ ರೈತರು ಪಶುಗಳಿಗೆ ಸಮತೋಲಿತ ಆಹಾರವನ್ನು ಪೂರೈಕೆಮಾಡಬೇಕು. ಪಾರಂಪರೀಕ ಜ್ಷಾಷದಿಗಳನ್ನು ಜಾನುವರುಗಳಿಗೆ ನೀಡಬೇಕು ಎಂದು ಹೇಳಿದರು.

ಅತೀ ಹೆಚ್ಚು ಹಾಲು ಪೂರೈಕೆದಾರರಿಗೆ ಬಹುಮಾನ ವಿತರಣೆ: ಸಂಘಕ್ಕೆ 7971.70 ಲೀಟರ್ ಹಾಲು ಪೂರೈಸಿ ಪ್ರಥಮ ಸ್ಥಾನ ಪಡೆದ ಜಯಪ್ರಕಾಶ್ ಎನ್.ಆರ್, 7003.69 ಲೀಟರ್ ಹಾಲು ಪೂರೈಸಿ ದ್ವಿತೀಯ ಸ್ಥಾನ ಪಡೆದ ಗಣೇಶ್ ಬಿ ಹಾಗೂ 6,829.16 ಲೀಟರ್ ಹಾಲು ಪೂರೈಸಿ ತೃತೀಯ ಸ್ಥಾನ ಪಡೆದ ಕೇಶವ ಗೌಡ ಅಮೈರವರುಗಳಿಗೆ ಬಹುಮಾನ ವಿತರಿಸಲಾಯಿತು

ವಿದ್ಯಾರ್ಥಿ ವೇತನ ವಿತರಣೆ: 2021-22 ನೇ ಸಾಲಿನ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ವಿಭಾಗದಲ್ಲಿ ಅತೀ ಹೆಚ್ಚು ಅಂಕವನ್ನು ಗಳಿಸಿದವ ವಿದ್ಯಾರ್ಥಿಗಳಿಗೆ ಸಂಘದ ವತಿಯಿಂದ ವಿದ್ಯಾರ್ಥಿ ವೇತನವನ್ನು ನೀಡಲಾಯಿತು.

ಸಂಘದ ಉಪಾಧ್ಯಕ್ಷ ಹೊನ್ನಪ್ಪ ಗೌಡ ಬಿ.ಜೆ, ನಿರ್ದೇಶಕರುಗಳಾದ ಭಾಸ್ಕರ್ ರೈ ಕುಂಜಾಡಿ, ಇಂದಿರಾ ಬಿ.ಕೆ ಬಂಬಿಲ, ವಿಠಲ ಶೆಟ್ಟಿ ಬಂಬಿಲ, ಗಣೇಶ್ ನಾಯ್ಕ್ ಪರಣೆ, ಕುಸುಮ ಎ,ರವರುಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಬೆಳಂದೂರು ಗ್ರಾ.ಪಂ, ಮಾಜಿ ಅಧ್ಯಕ್ಷ ಜಗನ್ನಾಥ ಪೂಜಾರಿ ಕೊಡೆಂಗೆ, ಉಪಾಧ್ಯಕ್ಷೆ ತೇಜಾಕ್ಷಿ ಬಿ.ಪೂಜಾರಿ ಕೊಡಂಗೆ, ಹೊನ್ನಪ್ಪ ಗೌಡ ಪರಣೆ, ವಸಂತ ಗೌಡ ಪರಣೆ, ಕೃಷ್ಣಪ್ಪ ಗೌಡ ಬಂಬಿಲ ಸಹಿತ ಅನೇಕ ಮಂದಿ ಉಪಸ್ಥಿತರಿದ್ದರು.
ಸಂಘದ ಕಾರ್‍ಯದರ್ಶಿ ಕೋಮಲ ವರದಿ ವಾಚಿಸಿದರು, ನಿರ್ದೇಶಕ ಅನ್ನಪೂರ್ಣ ಪ್ರಸಾದ್ ರೈ ಬೈಲಾಡಿ ಸ್ವಾಗತಿಸಿ, ಕಾರ್‍ಯಕ್ರಮ ನಿರೂಪಿಸಿ, ವಂದಿಸಿದರು. ಹಾಲು ಪರೀಕ್ಷಕಿ ವಿಮಲ ಸಹಕರಿಸಿದರು.

ಸಂಘದ ಸ್ವಂತ ಕಟ್ಟಡದ ಯೋಜನೆಗೆ ಸಹಕರಿಸಿ
ಬಂಬಿಲ ಹಾಲು ಉತ್ಪಾದಕರ ಸಹಕಾರ ಸಂಘವು 15 ವರ್ಷಗಳಿಂದ ಅತ್ಯುತ್ತಮವಾದ ರೀತಿಯಲ್ಲಿ ನಡೆಯುತ್ತಿದ್ದು, ಸಂಘದ ಮಹತ್ವದ ಯೋಜನೆಯಾದ ಸ್ವಂತ ಕಟ್ಟಡ ನಿರ್ಮಾಣಕ್ಕೆ ಸ್ಥಳಾವಕಾಶ ದೊರೆತ ಕೂಡಲೇ ಕಟ್ಟಡವನ್ನು ನಿರ್ಮಿಸುವ ಯೋಜನೆ ಇದೆ. ಸಂಘಕ್ಕೆ ಇನ್ನೂ ಹೆಚ್ಚಿನ ಹಾಲು ಪೂರೈಕೆ ಮಾಡುವ ನಿಟ್ಟಿನಲ್ಲಿ ಪ್ರತಿಯೊಬ್ಬರ ಸಹಕಾರ ಅಗತ್ಯವಿದೆ –ಜಯಪ್ರಕಾಶ್ ಎನ್.ಆರ್. ಅಧ್ಯಕ್ಷರು.

LEAVE A REPLY

Please enter your comment!
Please enter your name here