ಕಾಂಚನ ವೆಂಕಟಸುಬ್ರಹ್ಮಣ್ಯಂ ಸ್ಮಾರಕ ಪ್ರೌಢಶಾಲೆಯಲ್ಲಿ ಹಿಂದಿ ದಿವಸದ ಸಂಭ್ರಮಾಚರಣೆ

0

ನೆಲ್ಯಾಡಿ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಗಳ ಆಡಳಿತಕ್ಕೊಳಪಟ್ಟ ಕಾಂಚನ ವೆಂಕಟಸುಬ್ರಹ್ಮಣ್ಯಂ ಸ್ಮಾರಕ ಪ್ರೌಢಶಾಲೆಯಲ್ಲಿ ಸಾಹಿತ್ಯ ಸಂಘದ ವತಿಯಿಂದ ಹಿಂದಿ ದಿನಾಚರಣೆಯನ್ನು ವಿಜ್ರಂಭಣೆಯಿಂದ ಆಚರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಲಾ ಮುಖ್ಯೋಪಾಧ್ಯಾಯ ಸೂರ್ಯಪ್ರಕಾಶ ಉಡುಪ ಮಾತನಾಡಿ, ಹಿಂದಿ ಭಾಷೆ ಒಂದು ಗೊತ್ತಿದ್ದರೆ ದೇಶದ ಯಾವುದೇ ಮೂಲೆಗೂ ಹೋಗಿ ಸಂಭಾಷಣೆಯನ್ನು ನಡೆಸಿಕೊಂಡು ನೆಮ್ಮದಿಯಿಂದ ಬರಬಹುದು ಎಂದು ಹೇಳಿದ ಅವರು, ಹಿಂದಿ ಭಾಷೆಯ ಪ್ರಾಮುಖ್ಯತೆಯನ್ನು ತಿಳಿಸಿದರು. ಮುಖ್ಯ ಅತಿಥಿಯಾಗಿದ್ದ ಸಂಗೀತ ಶಿಕ್ಷಕಿ ಪ್ರತಿಭಾ ಎ., ಹಿಂದಿ ಭಾಷಾ ಶಿಕ್ಷಕಿ ವಿಜಯಲಕ್ಷ್ಮೀ, ಸಾಹಿತ್ಯ ಸಂಘದ ಮಾರ್ಗದರ್ಶಿ ಶಿಕ್ಷಕಿ ಸುಜಾತರವರು ಹಿಂದಿ ದಿವಸದ ಆಚರಣೆಯ ಮಹತ್ವದ ಕುರಿತು ತಿಳಿಸಿದರು.

ಮಕ್ಕಳಿಗೆ ಹಿಂದಿ ದಿನಾಚರಣೆಯ ಪ್ರಯುಕ್ತ ಪ್ರಬಂಧ ಹಾಗೂ ಅಂದವಾದ ಬರಹ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿತ್ತು. ಈ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನವನ್ನು ನೀಡಲಾಯಿತು. ವಿದ್ಯಾರ್ಥಿಗಳಾದ ನೇಹಾ, ನಿಕ್ಷಿತ, ಲೀಕ್ಷಿತಾ, ಶ್ರವಣ್‌ರವರು ಮೇರಾ ಪಾಠಶಾಲಾ ಮೇರಾ ದೇಶ್ ಮೇರಾ ರಾಜ್ಯ ವಿಷಯದ ಕುರಿತು ಭಾಷಣ ಮಾಡಿದರು. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಹಿಂದಿ ವಿಷಯಕ್ಕೆ ಸಂಬಂಧಿಸಿದಂತೆ ಮಕ್ಕಳು ನೃತ್ಯ ಹಾಡು ಹಾಗೂ ಕಥೆಗಳನ್ನು ಹೇಳಿದರು. ಪೂರ್ವಿಕಾ ಬಳಗದವರು ಪ್ರಾರ್ಥಿಸಿ ರಕ್ಷಿತಾ ಸ್ವಾಗತಿಸಿ, ಹಿತೇಶ್ ವಂದಿಸಿದರು. ಪ್ರೀತಿಕಾ ಕಾರ್ಯಕ್ರಮ ನಿರೂಪಿಸಿದರು. ಹಿಂದಿ ಭಾಷಾ ಶಿಕ್ಷಕಿ ವಿಜಯಲಕ್ಷ್ಮಿಯವರು ಕಾರ್ಯಕ್ರಮವನ್ನು ಹಿಂದಿಯಲ್ಲೇ ನಿರ್ವಹಿಸಿದರು. ಸಾಹಿತ್ಯ ಸಂಘದ ಮಾರ್ಗದರ್ಶಿ ಶಿಕ್ಷಕರಾದ ಮಂಜುಳಾ, ಅಧ್ಯಕ್ಷ ಪವನ್ ಮತ್ತು ಕಾರ್ಯದರ್ಶಿ ಸ್ವಾತಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here