ಪಡ್ಡಾಯೂರು ಹಾಲು ಉತ್ಪಾದಕರ ಸಹಕಾರಿ ಸಂಘದ ಸಾಮಾನ್ಯ ಸಭೆ:  ರೂ.4.52 ಲಕ್ಷ ಲಾಭ,  ಶೇ.25 ಡಿವಿಡೆಂಡ್, ರೂ.1.22 ಬೋನಸ್

0

ಪುತ್ತೂರು:ಪಡ್ಡಾಯೂರು ಹಾಲು ಉತ್ಪಾದಕರ ಸಹಕಾರಿ ಸಂಘವು ೨೦೨೧-೨೨ನೇ ಸಾಲಿನಲ್ಲಿ ರೂ.೨,೩೬,೮೭,೯೪೧ಗಳ ವ್ಯವಹಾರ ನಡೆಸಿ ರೂ.4,52,431.72 ನಿವ್ವಳ ಲಾಭ ಗಳಿಸಿದೆ. ಲಾಭಾಂಶದಲ್ಲಿ ಶೇ.೨೫ ಡಿವಿಡೆಂಡ್ ಹಾಗೂ ಪ್ರತಿ ಲೀಟರ್ ಹಾಲಿಗೆ ರೂ.೧.೨೨ ಬೋನಸ್ ನೀಡಲಾಗುವುದು ಎಂದು ಸಂಘದ ಅಧ್ಯಕ್ಷ ಆನಂದ ಗೌಡ ಮೂವಪ್ಪ ವಾರ್ಷಿಕ ಸಾಮಾನ ಸಭೆಯಲ್ಲಿ ಘೋಷಣೆ ಮಾಡಿದರು.


ಸಭೆಯು ಸೆ.೧೯ರಂದು ಪಡ್ಡಾಯೂರು ಶ್ರೀಅನ್ನಪೂಣೇಶ್ವರಿ ಭಜನಾ ಮಂದಿರದಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಂಘದಲ್ಲಿ ೧೪೨ ಮಂದಿ ಸದಸ್ಯರಿದ್ದು ರೂ.೩೨,೨೫೦ ಪಾಲು ಬಂಡವಾಳ ಹೊಂದಿರುತ್ತದೆ. ವರದಿ ಸಾಲಿನಲ್ಲಿ ಸಂಘವು ೧,೭೬,೯೦೧ ಲೀ. ಹಾಲನ್ನು ರೈತರಿಂದ ಖರೀದಿಸಿದೆ. ೩೨,೦೯೦.೫ಲೀ ಹಾಲನ್ನು ಸ್ಥಳೀಯವಾಗಿ ಮಾರಾಟ ಮಾಡಲಾಗಿದೆ. ಸ್ಥಳೀಯ ಹಾಲು ಮಾರಾಟದಿಂದ ರೂ.೧೪,೧೧,೯೮೨ ಹಾಗೂ ಒಕ್ಕೂಟಕ್ಕೆ ನೀಡಿದ ಹಾಲಿನಿಂದ ೫೦,೩೫,೫೯೬ ಆದಾಯ ಬಂದಿರುತ್ತದೆ. ಪಶು ಆಹಾರ ಮಾರಾಟದಿಂದ ರೂ.೧೧,೫೧೦ ಹಾಗೂ ಲವಣ ಮಿಶ್ರಣ ಮಾರಾಟದಿಂದ ರೂ.೫೧೭೫ ಆದಾಯ ಬಂದಿರುತ್ತದೆ ಎಂದು ಹೇಳಿದರು.

ಸನ್ಮಾನ:
ಸಂಘದ ಹಿರಿಯ ಸದಸ್ಯೆ ಚಂದ್ರಾವತಿ ರಕ್ತೇಶ್ವರಿ ವಠಾರ ಇವನ್ನು ಸನ್ಮಾನಿಸಲಾಯಿತು. ವರದಿ ಸಾಲಿನಲ್ಲಿ ಸಂಘಕ್ಕೆ ಅತೀ ಹೆಚ್ಚು ಹಾಲು ಪೂರೈಸಿ ಪ್ರಥಮ ಸ್ಥಾನ ಪಡೆದ ಲೂಯಿಸ್ ಲಸ್ರಾದೋ, ದ್ವಿತೀಯ ಸ್ಥಾನ ಪಡೆದ ಚಂದ್ರಾಕ್ಷಿ ರೈ ಹಾಗೂ ತೃತೀಯ ಸ್ಥಾನ ಪಡೆದ ಜಯಂತಿ ಕುಂಜಾರು ಹಾಗೂ ನಿವೃತ್ತ ಯೋಧ ವಿಜಯ ಕುಮಾರ್‌ರವರನ್ನು ಸನ್ಮಾನಿಸಲಾಯಿತು.


ಪ್ರತಿಭಾ ಪುರಸ್ಕಾರ:
ಸಂಘದ ಸದಸ್ಯರ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನೀಡುವ ಪ್ರತಿಭಾ ಪುರಸ್ಕಾರವನ್ನು ಎಸ್‌ಎಸ್‌ಎಲ್‌ಸಿಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ಪ್ರಣಾಮ್ ಎಂ.ವೈ ಹಾಗೂ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಯಶಸ್ವಿನ್‌ರವರಿಗೆ ನೀಡಿ ಗೌರವಿಸಲಾಯಿತು.
ಮುಖ್ಯ ಅತಿಥಿಯಾಗಿದ್ದ ನಗರ ಸಭಾ ಅಧ್ಯಕ್ಷ ಜೀವಂಧರ್ ಜೈನ್ ಮಾತನಾಡಿ, ಸಂಘದ ಅಭಿವೃದ್ಧಿ ಹಾಗೂ ಕಾರ್ಯವೈಖರಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.



ದ.ಕ ಹಾಲು ಒಕ್ಕೂಟದ ವೈದ್ಯಾಧಿಕಾರಿ ಡಾ.ಅನುದೀಪ್ ಮಾತನಾಡಿ, ರಾಸುಗಳ ಪಾಲನೆ, ಪೋಷಣೆಯ ಬಗ್ಗೆ ಮುಂಜಾಗ್ರತ ಕ್ರಮಗಳ ಮಾಹಿತಿ ನೀಡಿದರು. ವಿಸ್ತರಣಾಧಿಕಾರಿ ಮಾಲತಿ ಮಾತನಾಡಿ, ಒಕ್ಕೂಟದಿಂದ ದೊರೆಯುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು.
ಉಪಾಧ್ಯಕ್ಷ ವೆಂಕಪ್ಪ ಗೌಡ ಪಡ್ಡಾಯೂರು, ನಿರ್ದೇಶಕರಾದ ಲೂಯಿಸ್ ಲಸ್ರಾದೋ, ನಾರಾಯಣ ಪೂಜಾರಿ, ವಿನೋದ್ ಕುಂಜಾರು, ಕುಶಾಲಪ್ಪ ನೆಲಪ್ಪಾಲು, ಸತೀಶ್ ಪಿ.ಆರ್., ಪೆಲ್ಸಿ ಲಸ್ರಾದೋ, ಯಮುನ ಹಾಗೂ ತನಿಯಾರು ಗುರುಂಪುನಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸೃಷ್ಠಿ ಪ್ರಾರ್ಥಿಸಿದರು. ಅಧ್ಯಕ್ಷ ಆನಂದ ಗೌಡ ಸ್ವಾಗತಿಸಿದರು. ಕಾರ್ಯದರ್ಶಿ ಕುಸುಮಾವತಿ ವರದಿ ಹಾಗೂ ಆಯ-ವ್ಯಯಗಳನ್ನು ಮಂಡಿಸಿದರು. ನಿರ್ದೇಶಕರಾದ ವೀಣಾ ಮತಾವು ನೋಟೀಸ್ ಓದಿದರು. ಶಶಿಧರ ರಾವ್ ಬಿರಾವು ವಂದಿಸಿದರು. ಗಣೇಶ್ ಪಡ್ಡಾಯೂರು ಕಾರ್ಯಕ್ರಮ ನಿರೂಪಿಸಿದರು.

 

LEAVE A REPLY

Please enter your comment!
Please enter your name here