ಪುತ್ತೂರು: ಪುತ್ತೂರು ತಾಲೂಕು ಧ್ವನಿ ಬೆಳಕು ಮತ್ತು ಶಾಮಿಯಾನ ಮಾಲ್ಹಕರ ಸಂಘದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಸೆ.18ರಂದು ಪಡೀಲು ಎಂ.ಡಿ.ಎಸ್.ಸಭಾಂಗಣದಲ್ಲಿ ನಡೆಯಿತು.
ಪುತ್ತೂರು ಶಾಸಕ ಸಂಜೀವ ಮಠಂದೂರು ಅವರು ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ಹಿಂದಿನ ಕಾಲದಲ್ಲಿ ಯಾವುದೇ ಕಾರ್ಯಕ್ರಮವಿದ್ದರೂ ಒಂದು ತಿಂಗಳು ಮುಂಚೆಯೇ ಚಪ್ಪರ ಹಾಕುವ ಸಿದ್ದತೆ ನಡೆಸಲಾಗುತ್ತಿತ್ತು,ಆದರೆ ಶಾಮಿಯಾನ ವ್ಯವಸ್ಥೆ ಬಂದ ಬಳಿಕ ಒಂದೇ ದಿನದಲ್ಲಿ ಸಿದ್ದತೆಯಾಗುತ್ತದೆ.ಈಗ ಎಷ್ಟೇ ದೊಡ್ಡ ಕಾರ್ಯಕ್ರಮವಾದರೂ ಬಹುಬೇಗ ವೇದಿಕೆ ತಯಾರಾಗುತ್ತದೆ ಇದಕ್ಕೆ ಕಾರಣ ಶಾಮಿಯಾನ ಹಾಗೂ ಧ್ವನಿ ಬೆಳಕು,ಅಲಂಕಾರ ನಡೆಸುವ ಉದ್ದಿಮೆಗಳು ಎಂದರು.
ಈ ವ್ಯವಸ್ಥೆಯಲ್ಲಿ ಮಾಲಕನೂ ಕಾರ್ಮಿಕನಾಗಿ ದುಡಿಯುತ್ತಾನೆ. ಕಾರ್ಮಿಕನೊಂದಿಗೆ ನಿತ್ಯವೂ ಮಾಲಕ ಜತೆಯಾಗಿರುತ್ತಾನೆ. ಸಂಘಟನೆಯ ಮೂಲಕ ಧ್ವನಿ ಬೆಳಕು ಮತ್ತು ಶಾಮಿಯಾನ, ಡೆಕೋರೇಶನ್ ಮಾಲಕರು ಒಂದಾಗಿರುವುದು ಹೆಮ್ಮೆಯ ವಿಚಾರ. ಸಂಘಟನೆಯಿದ್ದರೆ ಯಾವುದೇ ಸಮಸ್ಯೆಯಾದರೂ ಒಗ್ಗಟ್ಟಿನಿಂದ ಪರಿಹರಿಸಲು ಸಾಧ್ಯ ಎಂದರು.
ದ.ಕ.ಜಿಲ್ಲಾ ಶಾಮಿಯಾನ ಮ್ಹಾಲಕರ ಸಂಘದ ಅಧ್ಯಕ್ಷರಾದ ಬಾಬು ಕೆ.ವಿಟ್ಲ ಅಧ್ಯಕ್ಷತೆ ವಹಿಸಿದ್ದರು. ದ.ಕ.ಜಿಲ್ಲಾ ಧ್ವನಿ ವರ್ಧಕ ಮತ್ತು ದೀಪಾಲಂಕಾರ ಸಂಘದ ಅಧ್ಯಕ್ಷ ರಾಜಶೇಖರ ಶೆಟ್ಟಿ ಅವರು ನೂತನ ಪದಾಧಿಕಾರಿಗಳಿಗೆ ಪ್ರಮಾಣ ವಚನ ಬೋಧಿಸಿದರು.
ಮುಖ್ಯ ಅತಿಥಿಗಳಾಗಿ ಪುತ್ತೂರು ಎಪಿಎಂಸಿಯ ಮಾಜಿ ಅಧ್ಯಕ್ಷ ದಿನೇಶ್ ಮೆದು,ಮಂಗಳೂರು ಪೂಣ್ಯ ಟೆಂಟ್ ಮತ್ತು ಕ್ಲೋ ಇದರ ಮಾಲಕ ರಾಜೇಶ್ ಕುಮಾರ್, ದ.ಕ.ಜಿಲ್ಲಾ ಶಾಮಿಯಾನ ಮ್ಹಾಲಕರ ಸಂಘದ ಕಾರ್ಯದರ್ಶಿ ಶಿವಪ್ರಸಾದ್ ಹೆಗ್ಡೆ ಮಿಜಾರು, ಸುಳ್ಯ ತಾಲೂಕು ಧ್ವನಿ ಬೆಳಕು ಮತ್ತು ಶಾಮಿಯಾನ ಮಾಲ್ಹಕರ ಸಂಘದ ಅಧ್ಯಕ್ಷ ಗಿರಿಧರ ಸ್ಕಂದ,ಬೆಳ್ತಂಗಡಿ ಧ್ವನಿ ವರ್ಧಕ ಮತ್ತು ದೀಪಾಲಂಕಾರ ಮಾಲ್ಹಕರ ಸಂಘ ಅಧ್ಯಕ್ಷ ಚಂದ್ರಶೇಖರ ಎಂ.,ಬಂಟ್ವಾಳ ತಾಲೂಕು ಧ್ವನಿಬೆಳಕು ಸಂಯೋಜಕರ ಒಕ್ಕೂಟದ ಅಧ್ಯಕ್ಷ ಧನರಾಜ್ ಶೆಟ್ಟಿ ಫರಂಗಿಪೇಟೆ,ಮಂಗಳೂರು ಶಾಮಿಯಾನ ಮ್ಹಾಲಕರ ಸಂಘದ ಅಧ್ಯಕ್ಷ ಕ್ಲೇವರ್ ಡಿಸೋಜ,ಬಂಟ್ವಾಳ ಶಾಮಿಯಾನ ಮ್ಹಾಲಕರ ಸಂಘದ ಅಧ್ಯಕ್ಷ ಪಿಯುಸ್ ಮ್ಯಾಕ್ಸಿಮ್ ಸಿಕ್ವೇರಾ,ಮೂಡಬಿದಿರೆ ಶಾಮಿಯಾನ ಮ್ಹಾಲಕರ ಸಂಘದ ಅಧ್ಯಕ್ಷ ಗಣೇಶ್ ಕಾಮತ್,ಬೆಳ್ತಂಗಡಿ ತಾಲೂಕು ಶಾಮಿಯಾನ ಮ್ಹಾಲಕರ ಸಂಘದ ಅಧ್ಯಕ್ಷ ಪ್ರಭಾಕರ ಶೆಟ್ಟಿ,ಪುತ್ತೂರು ತಾಲೂಕು ಸಂಘದ ಗೌರವಾಧ್ಯಕ್ಷ ಹೆನ್ರಿ ಡಿಸೋಜ ಉಪಸ್ಥಿತರಿದ್ದರು.
ಅಭಿನಂದನೆ: ಕಾರ್ಯಕ್ರಮದಲ್ಲಿ ಶಾಮಿಯಾನ ಕೆಲಸದ ಸಂದರ್ಭದಲ್ಲಿ ನಡೆದ ಆಕಸ್ಮಿಕ ಘಟನೆಯಿಂದ ಎರಡೂ ಕೈ ಕಳೆದುಕೊಂಡರೂ ಆತ್ಮಸ್ಥೈರ್ಯ ಹಾಗೂ ಛಲದಿಂದ ದುಡಿದು ಜಿಲ್ಲೆಯಲ್ಲಿ ಅತೀ ದೊಡ್ಡ ಶಾಮಿಯಾನ ವ್ಯವಸ್ಥೆ ಮಾಡಿರುವ ಜಿ.ಕೆ.ಗಾರ್ಡನ್ ಸಿಟಿ ಮೂಡಬಿದ್ರೆಯ ಮಾಲಕ ಗಣೇಶ್ ಕಾಮತ್ ಆವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು.ಶಾಸಕ ಸಂಜೀವ ಮಠಂದೂರು ಅವರು ಗಣೇಶ್ ಕಾಮತ್ ಅವರ ಸಾಧನೆಯನ್ನು ಶ್ಲಾಘಿಸಿದರು.
ಹಿರಿಯ ಸದಸ್ಯರಿಗೆ ಗೌರವಾರ್ಪಣೆ:
ಕಾರ್ಯಕ್ರಮದಲ್ಲಿ ಸಂಘದ ಹಿರಿಯ ಸದಸ್ಯರಾದ ಮೋಹನ್ ಶೆಟ್ಟಿ,ಹನೀಫ್ ಐಡಿಯಲ್,ವಿಲಿಯಂ,ಶಿವಪ್ಪ ,ಹೆನ್ರಿ ಡಿಸೋಜ ಹಾಗೂ ತಮ್ಮ ಸಂಸ್ಥೆಯ ಕಾರ್ಮಿಕರಿಗೆ ವಿಮಾ ಸೌಲಭ್ಯ ಮಾಡಿಸಿದ ಸಿಪ್ರಿಯನ್ ಮೊರಾಸ್,ದಿನೇಶ್ ಕೆ.ಎಸ್.ತಿಂಗಳಾಡಿ ಅವರಿಗೆ ಗೌರವಾರ್ಪಣೆ ಮಾಡಲಾಯಿತು.
ಸಂಘದ ಸದಸ್ಯರ ಸಾಧಕ ಮಕ್ಕಳಿಗೆ ಪುರಸ್ಕಾರ:
ಕಾರ್ಯಕ್ರಮದಲ್ಲಿ ಸಂಘದ ಸದಸ್ಯರ ಸಾಧಕ ವಿದ್ಯಾರ್ಥಿಗಳಾದ ತನ್ವಿತಾ ಶೆಟ್ಟಿ,ಅನ್ವೇಷ್ ಕೆ.ಎಂ,ಭವಹರಿ ರೈ,ಲತೇಶ್ ರೈ, ಶೈಫ್ ಅವರನ್ನು ಅಭಿನಂದಿಸಲಾಯಿತು.
ಚಂದ್ರಶೇಖರ ಶಾಂತಿಗೋಡು,ಅಶ್ರಫ್,ಲಿಯಾನ್ ಡಿಸೋಜ,ಲ್ಯಾನ್ಸಿ ಜೆರಾಲ್ಡ್ ಡಿಸೋಜ,ನಿತಿನ್ ಕಡಬ,ಸುದೀಪ್,ಕೃಷ್ಣ ಈಶ್ವರಮಂಗಲ,ಕೃಷ್ಣ ಪ್ರಸಾದ್ ಹೊಳ್ಳ,ಯೋಗೀಶ್ ಕಾವು ಅತಿಥಿಗಳನ್ನು ಗೌರವಿಸಿದರು.
ಕಾರ್ಯಕ್ರಮದಲ್ಲಿ ತಾ.ಪಂ.ಮಾಜಿ ಸದಸ್ಯ ಸಾಜ ರಾಧಾಕೃಷ್ಣ ಆಳ್ವ,ಸುಳ್ಯ ಅಕ್ರಮ ಸಕ್ರಮ ಸಮಿತಿ ಸದಸ್ಯ ರಾಕೇಶ್ ರೈ ಕೆಡೆಂಜಿ,ಸವಣೂರು ಪ್ರೌಢಶಾಲಾ ದೈಹಿಕ ಶಿಕ್ಷಣ ಶಿಕ್ಷಕ ಮಾಮಚ್ಚನ್ ಎಂ ಮೊದಲಾದವರಿದ್ದರು.
ಧ್ವನಿ ಬೆಳಕು ಮತ್ತು ಶಾಮಿಯಾನ ಮತ್ತು ಡೆಕೊರೇಶನ್ ಮಾಲಕರ ಸಂಘದ ನಿರ್ಗಮಿತ ಅಧ್ಯಕ್ಷ ಸುರೇಶ್ ರೈ ಸೂಡಿಮುಳ್ಳು,ಕಾರ್ಯದರ್ಶಿ ಮನೋಹರ್ ಶೆಟ್ಟಿ,ಕೋಶಾಧಿಕಾರಿ ಸಿಪ್ರಿಯನ್ ಮೊರಾಸ್,ನೂತನ ಅಧ್ಯಕ್ಷ ಶ್ಯಾಮ್ ಮಂಜುನಾಥ ಪ್ರಸಾದ್,ಕಾರ್ಯದರ್ಶಿ ಪ್ರಕಾಶ್ ಡಿಸೋಜ,ಕೋಶಾಧಿಕಾರಿ ಪ್ರದೀಪ್ ಕೆ,ಉಪಾಧ್ಯಕ್ಷ ದಾವೂದ್,ಸಹ ಕಾರ್ಯದರ್ಶಿ ಯೋಗೀಶ್ ಕಾವು,ಸಂಘಟನಾ ಕಾರ್ಯದರ್ಶಿ ಮನೋಹರ್ ಶೆಟ್ಟಿ ಗೌರವ ಸಲಹೆಗಾರರಾದ ಹೆನ್ರಿ ಡಿಸೋಜ,ಸಿಪ್ರಿಯನ್ ಮೊರಾಸ್ ಉಪಸತಿತರಿದ್ದರು.
ಗುರುಪ್ರಿಯಾ ಕಾಮತ್ ಪ್ರಾರ್ಥಿಸಿದರು.ಸಂಘದ ಗೌರವಾಧ್ಯಕ್ಷ ಸುರೇಶ್ ರೈ ಸೂಡಿಮುಳ್ಳು ಸ್ವಾಗತಿಸಿ,ಕಾರ್ಯದರ್ಶಿ ಪ್ರಕಾಶ್ ಡಿಸೋಜ ವಂದಿಸಿದರು.ಸುರೇಶ್ ಓಡಬಾಯಿ ಕಾಣಿಯೂರು ಅಭಿನಂದಿತರ ಪಟ್ಟಿ ವಾಚಿಸಿದರು. ಶಿಕ್ಷಕ ಬಾಲಕೃಷ್ಣ ರೈ ಪೊರ್ದಾಲ್ ಕಾರ್ಯಕ್ರಮ ನಿರೂಪಿಸಿದರು.