ಫೊಟೋಗ್ರಾಫರ್ಸ್ ಎಸೋಸಿಯೇಶನ್‌ಗೆ ಅತ್ಯುತ್ತಮ ವಲಯ ತೃತೀಯ ಪ್ರಶಸ್ತಿ

0

 

ಪುತ್ತೂರು: ಉತ್ತಮ ಸಮಾಜ ಸೇವೆ, ಕಾರ್ಯನಿರ್ವಹಣೆಗೆ ಸೌತ್ ಕೆನರಾ ಫೊಟೋಗ್ರಾಫರ‍್ಸ್ ಎಸೋಸಿಯೇಶನ್ ಪುತ್ತೂರು ವಲಯವು ತೃತೀಯ ಅತ್ಯುತ್ತಮ ವಲಯ ಪ್ರಶಸ್ತಿ ಪಡೆದುಕೊಂಡಿದೆ.
ಮಂಗಳೂರು ಪುರಭವನದಲ್ಲಿ ನಡೆದ ಸೌತ್ ಕೆನರಾ ಫೊಟೋಗ್ರಾಫರ್ಸ್ ಎಸೋಸಿಯೇಶನ್ ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಉಡುಪಿ ಜಿಲ್ಲೆ ಇದರ 32ನೇ ವಾರ್ಷಿಕ ಮಹಾಸಭೆ ಪ್ರಶಸ್ತಿ ಪ್ರದಾನ ನಡೆಯಿತು. ಒಟ್ಟು 14 ವಲಯಗಳಿಗೆ ವಾರ್ಷಿಕ ವರದಿಗೆ ಮಾಡಿರುವ ಕಾರ್ಯಕ್ರಮಕ್ಕೆ ಅತ್ಯುತ್ತಮ ವಲಯ ಪ್ರಶಸ್ತಿ ನೀಡಲಾಗಿದ್ದು ಇದರಲ್ಲಿ ಪುತ್ತೂರು ವಲಯಕ್ಕೆ ಅತ್ಯುತ್ತಮ ತೃತೀಯ ಸ್ಥಾನ ಪಡೆದುಕೊಂಡಿದೆ.
ಪುತ್ತೂರು ವಲಯವು ಈ ವರ್ಷ ವಿಶೇಷವಾಗಿ ರಕ್ತದಾನ ಶಿಬಿರ, ಬಿರುಮಲೆ ಪ್ರಜ್ಞಾ ವಿಶೇಷ ಮಕ್ಕಳ ಕೇಂದ್ರಕ್ಕೆ ನೆರವು, ಛಾಯಾಗ್ರಾಹಕರಿಗೆ ಜಿಲ್ಲಾ ಮಟ್ಟದ ಕಿರುಚಿತ್ರ ಸ್ಪರ್ಧೆ, ಕೆಸರುಗದ್ದೆ ಕ್ರೀಡಾಕೂಟ, ಛಾಯಾಗ್ರಾಹಕರಿಗಾಗಿ ತರಬೇತಿ ಶಿಬಿರ, ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ, ಸದಸ್ಯರಿಗೆ ತುರ್ತು ಚಿಕಿತ್ಸೆಗೆ ಧನಸಹಾಯ, ಹರ್‌ಘರ್ ತಿರಂಗಾ ಅಭಿಯಾಣದಲ್ಲಿ ಧ್ವಜ ವಿತರಣೆ, ರಕ್ಷಾ ಬಂಧನ ಸೇರಿದಂತೆ ಹಲವು ಯಶಸ್ವೀ ಕಾರ್ಯಕ್ರಮಗಳಿಗಾಗಿ ಪ್ರಶಸ್ತಿ ಲಭಿಸಿರುತ್ತದೆ.

ಪುತ್ತೂರು ವಲಯದ ಅಧ್ಯಕ್ಷ ನಾಗೇಶ್ ಟಿ.ಎಸ್ ಕೆಮ್ಮಾಯಿ ಸ್ವೀಕರಿಸಿದರು. ಕಾರ್ಯದರ್ಶಿ ಪ್ರಮೋದ್ ಸಾಲ್ಯಾನ್ ಗೌರವಾಧ್ಯಕ್ಷ ಹರೀಶ್ ಪುಣಚ, ಕೋಶಾಧಿಕಾರಿ ಗಿರಿಧರ ಭಟ್, ಸುದರ್ಶನ್ ರಾವ್, ಸುಧಾಕರ ಶೆಟ್ಟಿ ಮಿತ್ತೂರು, ಹಾಗೂ ಪುತ್ತೂರು ವಲಯದ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು. ಜಿಲ್ಲಾಧ್ಯಕ್ಷರಾದ ಆನಂದ ಎನ್. ಬಂಟ್ವಾಳ ಹಾಗೂ ಜಿಲ್ಲಾ ಕಾರ್ಯದರ್ಶಿ ನಿತಿನ್ ಪ್ರಶಸ್ತಿ ಪ್ರದಾನ ಮಾಡಿದರು.

ಜಿಲ್ಲಾ ಕೋಶಾಧಿಕಾರಿ ನವೀನ್ ರೈ ಪಂಜಳ, ಉಪಾಧ್ಯಕ್ಷರಾದ ಲೋಕೇಶ್ ಬಿ.ಎನ್. ಸುಳ್ಯ, ಪದ್ಮಪ್ರಸಾದ್ ಜೈನ್ ಕಾರ್ಕಳ, ಜತೆ ಕಾರ್ಯದರ್ಶಿ ಅಜಯ್ ಕುಮಾರ್ ಮಂಗಳೂರು, ವಾಮನ್ ಬಂಗೇರ ಉಡುಪಿ, ಸಂಘಟನಾ ಕಾರ್ಯದರ್ಶಿ ಜಯಕರ ಸಾಲ್ಯಾನ್ ಸುರತ್ಕಲ್ ಹೆರಿಕ್ ಡಿ’ಸೋಜ ಬ್ರಹ್ಮಾವರ, ಪುತ್ತೂರು ವಲಯದ ನಿಕಟಪೂರ್ವ ಅಧ್ಯಕ್ಷ ಹರೀಶ್‌ ಎಲಿಯ, ಕಾರ್ಯದರ್ಶಿ ಜಯಂತ ಗೌಡ ಕರ್ಕುಂಜ, ಜಿಲ್ಲಾ ಸಲಹಾ ಸಮಿತಿ ಸಂಚಾಲಕ ನವೀನ್ ಚಂದ್ರ ಕುದ್ರೋಳಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here