ಪುತ್ತೂರು:ಪಶುಸಂಗೋಪನಾ ಇಲಾಖೆ ಪುತ್ತೂರು ಇದರ ವತಿಯಿಂದ ಪಶು ಆಸ್ಪತ್ರೆ ಇದರ ವಠಾರದಲ್ಲಿ ಸೆ 21ರಿಂದ 30ರವರೆಗೆ ನಾಯಿಗಳಿಗೆ ಉಚಿತವಾಗಿ ಹುಚ್ಚುನಾಯಿ (ರೇಬಿಸ್) ರೋಗ ನಿರೋಧಕ ಲಸಿಕಾ ಕಾರ್ಯಕ್ರಮ ಜರುಗಲಿದೆ.ಪುತ್ತೂರು ನಗರಸಭೆ ಅಧ್ಯಕ್ಷ ಜೀವಂಧರ್ ಜೈನ್ ಇವರು ಉದ್ಘಾಟಿಸಲಿದ್ದಾರೆ.ಈ ಶಿಬಿರದಲ್ಲಿ ಶ್ವಾನ ಮಾಲಕರು ತಮ್ಮ ಸಾಕು ನಾಯಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ತಂದು ಈ ಲಸಿಕೆಯ ಪ್ರಯೋಜನ ಪಡೆದುಕೊಳ್ಳಬೇಕಾಗಿ ಪಶುಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.