ಬೊಳ್ಪಾದೆಯಲ್ಲಿ ಭಿನ್ನ ಕೋಮಿನ ಯುವತಿಯರೊಂದಿಗಿದ್ದ ಅನ್ಯ ಕೋಮಿನ ಯುವಕ : ಯುವಕನ ಸಹಿತ ಯುವತಿಯರು ಪೊಲೀಸ್ ವಶಕ್ಕೆ

0

ವಿಟ್ಲ: ಭಿನ್ನ ಕೋಮಿನ ಯುವತಿಯರೊಂದಿಗಿದ್ದ ಅನ್ಯ ಕೋಮಿನ ಯುವಕನೋರ್ವನನ್ನು ಸಾರ್ವಜನಿಕರು ಹಿಡಿದು ಪೊಲೀಸರಿಗೊಪ್ಪಿಸಿದ ಘಟನೆ ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ಕುಡ್ತಮುಗೇರು ಸಮೀಪದ ಪಡಾರು ಬೊಳ್ಳಾದೆ ಎಂಬಲ್ಲಿ ನಡೆದ ಬಗ್ಗೆ ವರದಿಯಾಗಿದೆ.

ಬೆಳ್ಪಾದೆ ಸಮೀಪ ಹಿಂದೂ ಮತ್ತು ಕ್ರಿಶ್ಚಿಯನ್ ಯುವತಿಯರೊಂದಿಗೆ ಮುಸ್ಲಿಂ ಯುವಕನೋರ್ವ ಇರುವ ಬಗ್ಗೆ ಮಾಹಿತಿ ಅರಿತ ಸಾರ್ವಜನಿಕರು ಸ್ಥಳಕ್ಕೆ ತೆರಳಿ ಅವರನ್ನು ವಿಚಾರಣೆ ನಡೆಸಿದ್ದಾರೆ. ಯುವತಿಯರನ್ನು ಯುವಕ ಕೆಲಸ ಕೊಡಿಸುವ ಆಮಿಷವೊಡ್ಡಿ ಇಲ್ಲಿಗೆ ಕರೆತಂದಿದ್ದಾಗಿ ತಿಳಿದುಬಂದಿದೆ. ಅವರೆಲ್ಲರೂ ಕೇರಳ ಮೂಲದವರು ಎನ್ನಲಾಗುತ್ತಿದೆ. ಸಾರ್ವಜನಿಕರ ಮಾಹಿತಿಮೇರೆಗೆ ಸ್ಥಳಕ್ಕಾಗಮಿಸಿದ ಪೊಲೀಸರು ಅವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೆ ತಿಳಿದುಬರಬೇಕಿದೆ.

LEAVE A REPLY

Please enter your comment!
Please enter your name here