ಸ್ಕೂಟರ್ ಕಳವು ಮಾಡಲು ಬಂದವರು ಹೆಲ್ಮೆಟ್ ಕೊಂಡು ಹೋದರು ಕುಂಬ್ರದ ದರ್ಬಾರ್ ಹೊಟೇಲ್ ಮಾಲಕರ ಸ್ಕೂಟರ್ ಕಳವು ಯತ್ನ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಕುಂಬ್ರ ನ್ಯೂ ರಾಯಲ್ ದರ್ಬಾರ್ ಹೊಟೇಲ್ ಬಳಿ ನಿಲ್ಲಿಸಲಾಗಿದ್ದ ಆಕ್ಟಿವಾ ಸ್ಕೂಟರನ್ನು ಕಳವು ಮಾಡಲು ಯತ್ನಿಸಿದ ಘಟನೆ ಸೆ. 18 ರಂದು ರಾತ್ರಿ ನಡೆದಿದ್ದು ಕಳವಿಗೆ ಯತ್ನ ನಡೆಸಿದ ದೃಶ್ಯಗಳು ಸಿಸಿ ಕೆಮರಾದಲ್ಲಿ ಸೆರೆಯಾಗಿದೆ.


ರಾಯಲ್ ದರ್ಬಾರ್ ಹೊಟೇಲ್ ಮಾಲಿಕ ಹಮೀದ್ ರವರು ತನ್ನ ಸ್ಕೂಟರನ್ನು ಹೊಟೇಲ್ ಮುಂಭಾಗದಲ್ಲಿ ನಿಲ್ಲಿಸಿ ಮಂಗಳೂರಿಗೆ ತೆರಳಿದ್ದರು. ಮಂಗಳೂರಿನಿಂದ ಬರುವಾಗ ತಡವಾಗಿರುವ ಕಾರಣ ಸ್ಕೂಟರ್ ಕೊಂಡು ಹೋಗಿರಲಿಲ್ಲ. ಅದೇ ದಿನ ರಾತ್ರಿ ಅಲ್ಲಿಗೆ ಸ್ಕೂಟರಿನಲ್ಲಿ ಬಂದ ಇಬ್ಬರು ಯುವಕರು ಸ್ಕೂಟರನ್ನು ಕಳವು ಮಾಡಲು ಯತ್ನ ನಡೆಸಿದ್ದಾರೆ. ಹೊಟೇಲ್ ಮಾಲಿಕರು ಸ್ಕೂಟರ್‌ನ ಹ್ಯಾಂಡ್ ಲಾಕ್ ಮಾಡಿರುವ ಕಾರಣ ಕೊಂಡೊಯ್ಯಲು ಸಾಧ್ಯವಾಗಿಲ್ಲ. ಆದರೂ ಸ್ಕೂಟರಿನಲ್ಲಿದ್ದ ಹೆಲ್ಮೆಟನ್ನು ಕಳವು ಮಾಡಿದ್ದು ಹಳೆಯ ಹೆಲ್ಮೆಟ್ ಅಲ್ಲಿ ಇಟ್ಟು ತೆರಳಿದ್ದಾರೆ. ಹ್ಯಾಂಡ್ ಲಾಕ್ ಹಾಕಿರುವ ಕಾರಣ ಕಳ್ಳತನ ಮಾಡಲು ಸಾಧ್ಯವಾಗಿಲ್ಲ. ಘಟನೆಯ ಬಗ್ಗೆ ಗ್ರಾಮಾಂತರ ಪೊಲೀಸರಿಗೆ ದೂರು ನೀಡಲಾಗಿದೆ. ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಸಾರ್ವಜನಿಕ ಸ್ಥಳದಲ್ಲಿ ಯಾವುದೇ ವಾಹನ ನಿಲ್ಲಿಸುವಾಗ ಲಾಕ್ ಮಾಡಿ ತೆರಳಿದರೆ ಕಳ್ಳರ ಪಾಲಾಗುವುದನ್ನು ತಪ್ಪಿಸಬಹುದು ಎಂಬುದಕ್ಕೆ ಮೊನ್ನೆ ನಡೆದ ಘಟನೆಯೇ ಸಾಕ್ಷಿ ಎಂಬಂತಿದೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.