ವಿಟ್ಲ: ವಿಟ್ಲಪಡ್ನೂರು ಗ್ರಾಮ ಪಂಚಾಯತ್ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಶಿಶು ಅಭಿವೃದ್ಧಿ ಯೋಜನೆ ವಿಟ್ಲ ಹಾಗೂ ಗ್ರಾಮ ಒನ್, ದೇರಳಕಟ್ಟೆ ಯೆನಪೋಯ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ನ್ಯಾಚುರೊಪತಿ ವಿಭಾಗದ ಜಂಟಿ ಆಶ್ರಯ ದಲ್ಲಿ ಪಂಚಾಯತ್ ಸಭಾಭವನದಲ್ಲಿ ಜಾಗ್ರತಿ ಅರಿವು ಕಾರ್ಯಕ್ರಮ ಹಾಗೂ ಅಭಾ ಕಾರ್ಡ್ ನೋಂದಣಿ ಶಿಬಿರ ನಡೆಯಿತು. ವಿಟ್ಲಪಡ್ನೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ರೇಶ್ಮಾ ಶಂಕರಿ ಬಲಿಪಗುಳಿ ರವರು ಅಧ್ಯಕ್ಷತೆವಹಿಸಿ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಏನಪೋಯ ಮೆಡಿಕಲ್ ಆಸ್ಪತ್ರೆ ವಿಭಾಗದ ನ್ಯಾಚುರಪತಿ ವೈದ್ಯಾದಿಕಾರಿ ಪೌಷ್ಟಿಕಾಂಶ ಆಹಾರ ಸೇವನೆ ಮಾಡುವುದರ ಮೂಲಕ ನಮ್ಮಆರೋಗ್ಯವನ್ನು ಹೇಗೆ ಕಾಪಾಡಿಕೊಳ್ಳುವುದು ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದರು. ಅದೇ ರೀತಿ ಗ್ರಾಮ ಒನ್ ಬಗ್ಗೆ ಮತ್ತು ಅಭಾ ಕಾರ್ಡ್ ನೋಂದಣಿಯ ಕುರಿತಾಗಿ ರೇಣುಕಾ ರವರು ಮಾಹಿತಿ ನೀಡಿದರು. ಕಾರ್ಯಮದಲ್ಲಿ ಪಂಚಾಯತ್ ಉಪಾಧ್ಯಕ್ಷರಾದ ನಾಗೇಶ್ ಶೆಟ್ಟಿ ಹಾಗೂ ಸದಸ್ಯರಾದ ರವೀಶ್ ಶೆಟ್ಟಿ, ರೇಖಾ, ಜಯಲಕ್ಷ್ಮಿ, ಅಮಿತ, ಅವ್ವಮ್ಮ, ಸಂದೇಶ ಶೆಟ್ಟಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ರೀಶೈಲ, ಸಮುದಾಯ ಆರೋಗ್ಯ ಅಧಿಕಾರಿಯಾದ ನಿಂಗಪ್ಪ, ನಿತಿನ್ ಮೊದಲಾದವರು ಉಪಸ್ಥಿತರಿದ್ದರು. ಅಂಗನವಾಡಿ ಮೇಲ್ವಿಚಾರಕಿ ರೇಣುಕಾ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.