ವಿಟ್ಲ: ಪ್ರತಿಷ್ಟಿತ ಕೈಗಾರಿಕಾ ಕಂಪೆನಿಗಳಲ್ಲಿ ಸಾವಿರಾರು ಯುವ ಜನರಿಗೆ ಉದ್ಯೋಗ ಸಿಗುವಂತೆ ಹಾಗೂ ಸ್ವಂತ ಉದ್ದಿಮೆ ಆರಂಭಿಸುವಂತೆ ಅಣಿಗೊಳಿಸುವ ಉದ್ದೇಶದಿಂದ ಆಧುನಿಕ ತಂತ್ರಜ್ಞಾನಗಳ ವಲಯಗಳಲ್ಲಿ ತರಬೇತಿಯನ್ನು ನೀಡಿಯುವ ಜನರಕೌಶಲ್ಯವನ್ನು ಮೇಲ್ದರ್ಜೆಗೇರಿಸುವ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬಹಳಷ್ಟು ಶ್ರಮಿಸುತ್ತಿದ್ದು, ಯುವಕರು ಇದರ ಸದುಪಯೋಗವನ್ನು ಪಡೆಯಬೇಕೆಂದು ವಿಟ್ಲ ಪಟ್ಟಣ ಪಂಚಾಯತ್‌ನ ಸದಸ್ಯರಾದ ಸಂಗೀತ ಪಾಣೆಮಜಲು ಹೇಳಿದರು.
ಅವರು ವಿಟ್ಲ ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ತರಬೇತಿದಾರರ ಪ್ರಥಮ ಘಟಿಕೋತ್ಸವ ಸಮಾರಂಭವನ್ನು ದೀಪ ಬೆಳಗಿ ಉದ್ಘಾಟಸಿ ತರಬೇತಿದಾರಿಗೆ ರಾಷ್ಟ್ರೀಯ ವೃತ್ತಿ ಪ್ರಮಾಣ ಪತ್ರ ನೀಡಿ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಐ.ಎಂ.ಸಿ ಸದಸ್ಯರಾದ ಸಿ.ಎಫ್ ಸಿಕ್ವೇರಾರವರು ಅತ್ಯಧಿಕ ಅಂಕಗಳನ್ನು ಗಳಿಸಿದ ತರಬೇತಿದಾರರಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಿದರು.ಸಂಸ್ಥೆಯ ಕಛೇರಿ ಅಧೀಕ್ಷಕರಾದ ನಿರ್ಮಲಾ ಕುಮಾರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂಸ್ಥೆಯ ತರಬೇತಿ ಅಧಿಕಾರಿಯಾದ ಹರೀಶ್‌ರವರು ಸಮಾರಂಭದಅಧ್ಯಕ್ಷತೆ ವಹಿಸಿದ್ದರು. ಕಿರಿಯ ತರಬೇತಿ ಅಧಿಕಾರಿಗಳಾದ ನಳಿನಿ ಕಾರ್ಯಕ್ರಮ ನಿರೂಪಿಸಿದರು. ರತಿ.ವಿ ಸ್ವಾಗತಿಸಿದರು. ಮಂಜೇಶ್‌ಕುಮಾರ್ ವಂದಿಸಿದರು. ತೀರ್ಥಾಕ್ಷಿ ಹಾಗೂ ದಿವ್ಯಾರವರು ಸಹಕರಿಸಿದರು. ೭೦ ತರಬೇತಿದಾರರಿಗೆ ರಾಷ್ಟ್ರೀಯ ವೃತ್ತಿ ಪ್ರಮಾಣ ಪತ್ರವನ್ನು ವಿತರಿಸಲಾಯಿತು. 90 ತರಬೇತಿದಾರರಿಗೆ ಪ್ರಥಮ ವರ್ಷದ ಪ್ರಮಾಣ ಪತ್ರವನ್ನು ವಿತರಿಸಲಾಯಿತು.