ವಕೀಲ ಮಹೇಶ್ ಕಜೆ ಕಚೇರಿಗೆ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಅಶೋಕ್ ಹಾರನಹಳ್ಳಿ ಭೇಟಿ

0

‘ಬ್ರಾಹ್ಮಣರು ರಾಜಕೀಯ ಶಕ್ತಿಯಾಗಿ ಬೆಳೆಯಬೇಕು’

ಪುತ್ತೂರು: ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಅಶೋಕ್ ಹಾರನಹಳ್ಳಿ ಅವರು ಸೆ.17ರಂದು ಖ್ಯಾತ ವಕೀಲ ಮಹೇಶ್ ಕಜೆಯವರ ಕಚೇರಿ ಬೊಳುವಾರಿನಲ್ಲಿರುವ ಕಜೆ ಲಾ ಛೇಂಬರ‍್ಸ್‌ಗೆ ಭೇಟಿ ನೀಡಿದರು.

ಈ ವೇಳೆ ಮಾತನಾಡಿದ ಅಶೋಕ್ ಹಾರನಹಳ್ಳಿ ’ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾವು 1972ರಲ್ಲಿ ಸ್ಥಾಪನೆಗೊಂಡು ಅನೇಕ ಹಿರಿಯರ ನಾಯಕತ್ವದಲ್ಲಿ ಸಂಘಟನೆ ಬೆಳೆಯಿತು. ಸಮಾಜದಲ್ಲಿ ಅನೇಕ ಸಮುದಾಯಗಳಿಗೆ ಸರಕಾರದಿಂದ, ಕಾನೂನಿನಿಂದ ಬೆಂಬಲ ಸಿಗುತ್ತದೆ, ಆದರೆ ಮೇಲ್ವರ್ಗದವರೆಂಬ ಹಣೆಪಟ್ಟಿ ಹಾಕಿಕೊಂಡಿರುವ ಬ್ರಾಹ್ಮಣರಿಗೆ ಸರಕಾರ, ಕಾನೂನಿನ ಬೆಂಬಲ ಸಿಗುವುದು ಕಡಿಮೆ. ಆದ್ದರಿಂದ ಸಮಾಜದ ಬಡ, ಅಶಕ್ತರಿಗೆ ಸಹಾಯ ಶಿಕ್ಷಣ ಕ್ಷೇತ್ರದಲ್ಲೂ ಸಮಾಜದ ಮಕ್ಕಳಿಗೆ ಬೇಕಾದ ವ್ಯವಸ್ಥೆಯನ್ನು ಮಾಡುವ ನಿಟ್ಟಿನಲ್ಲಿ ನಮ್ಮ ಸಂಘಟನೆ ಕಾರ್ಯ ನಿರ್ವಹಿಸುತ್ತಿದೆ. ಸಮಾಜದ ಅನೇಕರು ಪ್ರಮಖ ಹುದ್ದೆಗಳಲ್ಲಿ ತೊಡಗಿಸಿಕೊಂಡಿದ್ದಾರೆ ಇವರನ್ನೆಲ್ಲಾ ಒಂದುಗೂಡಿಸಿ ರಾಜಕೀಯ ಶಕ್ತಿಯಾಗಿ ಬೆಳೆಯಬೇಕು.ಸಾಮಾಜಿಕವಾಗಿಯೂ ಶಕ್ತಿಯಾಗಿ ಬೆಳೆಯಬೇಕಿದೆ. ನಮ್ಮ ಸಮಾಜ ಎದುರಿಸುತ್ತಿರುವ ಸಮಸ್ಯೆಗಳು ಸರಕಾರದ ಮಟ್ಟದಲ್ಲಿ ಪರಿಹಾರವಾಗಬೇಕಿದೆ ಎಂದು ಹೇಳಿದರು. ಪುತ್ತೂರಿನಲ್ಲಿ ಸಂಘಟನಾತ್ಮಕ ದೃಷ್ಟಿ ಇಟ್ಟುಕೊಂಡು ನಮ್ಮ ಸಂಘಟನೆಯ ಉಪಾಧ್ಯಕ್ಷರಾದ ಮಹೇಶ್ ಕಜೆಯವರ ಕಚೇರಿಗೆ ಭೇಟಿ ನೀಡಿದ್ದೇನೆ. ಈ ಭಾಗದ ನಮ್ಮ ಸಮಾಜದವರೆಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಸದಸ್ಯತ್ವ ಪಡೆದುಕೊಳ್ಳಿ’ ಎಂದರು. ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಉಪಾಧ್ಯಕ್ಷರಾಗಿರುವ ವಕೀಲ ಮಹೇಶ್ ಕಜೆ ಮಾತನಾಡಿ ’ಪ್ರಸ್ತುತ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಸುವರ್ಣಯುಗದ ಕಾಲದಲ್ಲಿ ನಾವಿದ್ದೇವೆ. ಒಂದು ನೌಕೆಯನ್ನು ಕೊಂಡೊಯ್ಯಲು ಸಮರ್ಥ ನಾವಿಕನ ಅಗತ್ಯತೆ ಹೇಗೆ ಬೇಕೋ ಹಾಗೆ ಸಂಘಟನೆಯೊಂದು ಬೆಳೆಯಲು ಉತ್ತಮ ನಾಯಕನ ಅಗತ್ಯತೆ ಇದೆ.ಅಶೋಕ್ ಹಾರನಹಳ್ಳಿಯವರ ಮಾರ್ಗದರ್ಶನ, ನಾಯಕತ್ವದಲ್ಲಿ ಇಡೀ ಬ್ರಾಹ್ಮಣ ಸಮಾಜ ಒಂದೇ ಛತ್ರದಡಿ ಇರಬೇಕು, ಸಮಾಜವು ಶಕ್ತಿಶಾಲಿಯಾಗಿ ಪರಿವರ್ತನೆಯಾಗಬೇಕು, ಇಡೀ ವಿಶ್ವ ಶಾಂತಿಯಿಂದಿರಬೇಕಾದರೆ ಬ್ರಹ್ಮಣ ಸಮಾಜವೂ ಶಾಂತಿ ನೆಮ್ಮದಿಯಿಂದ ಇರಬೇಕೆನ್ನುವ ಹಿನ್ನೆಲೆಯಲ್ಲಿ ಸಂಘಟನೆ ಕೆಲಸ ಮಾಡುತ್ತಿದೆ. ಇದು ಒಬ್ಬರಿಂದ ಸಾಧ್ಯವಾಗುವ ವಿಚಾರವಲ್ಲ ಎಲ್ಲರೂ ಒಂದಾಗಿ ಮತ್ತೆ ಬ್ರಾಹ್ಮಣ ಸಮಾಜದ ಗತವೈಭವ ಮುನ್ನಲೆಗೆ ಬರುವಂತಾಗಲಿ’ಎಂದರು. ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಕಾರ್ಯದರ್ಶಿ ರಾಘವೇಂದ್ರ ಭಟ್, ಸ್ವರ್ಣೋದ್ಯಮಿ ಜಿ.ಎಲ್.ಬಲರಾಮ ಆಚಾರ್ಯ,ರಾಘವೇಂದ್ರ ಮಯ್ಯ,ಶಿವಶಂಕರ್ ಭಟ್ ಬೋನಂತಾಯ, ನ್ಯಾಯವಾದಿಗಳಾದ ಎನ್.ಕೆ.ಜಗನ್ನಿವಾಸ್ ರಾವ್, ದಿವಾಕರ ಕೆ. ನಿಡ್ವಣ್ಣಾಯ, ಆದರ್ಶ ಪ್ರೆಸ್‌ನ ಪ್ರಸನ್ನ, ನಾಗೇಶ್ ರಾವ್ ಶಿವಕೃಪಾ, ಡಾ.ಪ್ರಸನ್ನ ಬೋನಂತಾಯ, ಪುಳು ಈಶ್ವರ ಭಟ್, ರಂಗನಾಥ ರಾವ್, ಪ್ರೇಮಲತಾ ರಾವ್, ನಗರಸಭಾ ಸದಸ್ಯ ಪಿ.ಜಿ.ಜಗನ್ನಿವಾಸ್ ರಾವ್,ಸದಾಶಿವ ಹೊಳ್ಳ,ಡಾ.ಚರಣ್ ಕಜೆ, ಡಾ.ಶಶಿಧರ್ ಕಜೆ, ಪೊಳಲಿ ಗಿರಿಪ್ರಕಾಶ್ ತಂತ್ರಿ, ದತ್ತಾತ್ರೇಯ, ಮೋಹನ್ ಹೊಳ್ಳ,ಶ್ಯಾಮ ಸುದರ್ಶನ್, ಉಮೇಶ್ ಶಾಸಿ, ಚೇತನಾ ದತ್ತಾತ್ರೇಯ, ಗೋಪಾಲಕೃಷ್ಣ ಹೇರಳೆ ಸೇರಿದಂತೆ ಹಲವು ಪ್ರಮುಖರು ಈ ಸಂದರ್ಭ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here