ರೋಟರಿ ಸೆ೦ಟ್ರಲ್ ನಿಂದ ಫಿಲೋಮಿನಾ ಪ್ರೌಢಶಾಲೆಗೆ ಹಾಜರಿ ಬೆರಳಚ್ಚು ಸಾಧನದ ಕೊಡುಗೆ

0

ಪುತ್ತೂರು: ರೋಟರಿ ಕ್ಲಬ್ ಪುತ್ತೂರು ಸೆ೦ಟ್ರಲ್ ವತಿಯಿಂದ ಕ್ಲಬ್ ಅಂತರ್ರಾಷ್ಟ್ರೀಯ ಸರ್ವಿಸ್ ನಿರ್ದೇಶಕ ಹಾಗೂ ನ್ಯಾಯವಾದಿ ಕವನ್ ನಾಯ್ಕ್ ರವರ ಪ್ರಾಯೋಜಕತ್ವದಲ್ಲಿ ಮಾಯಿದೆ ದೇವುಸ್ ಚರ್ಚ್ ಸಮೂಹ ಶಿಕ್ಷಣ ಸಂಸ್ಥೆಗಳ ದರ್ಬೆ ಫಿಲೋನಗರದ ಸಂತ ಫಿಲೋಮಿನಾ ಪ್ರೌಢಶಾಲೆಗೆ ಹಾಜರಿ ಬೆರಳಚ್ಚು ಸಾಧನ (ಬಯೋ ಮೆಟ್ರಿಕ್ ಆಕ್ಸೆಸ್)ವನ್ನು ಶಾಲಾ ಮುಖ್ಯೋಪಾಧ್ಯಾಯಿನಿ  ಕಾರ್ಮಿನ್ ಪಾಯಿಸ್ ರವರಿಗೆ ಕ್ಲಬ್ ಅದ್ಯಕ್ಷರಾದ ಮೊಹಮ್ಮದ್ ರಫೀಕ್ ದರ್ಬೆರವರು ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ರೋಟರಿ ಕ್ಲಬ್ ಸೆ೦ಟ್ರಲ್ ನ ಪದ್ಮನಾಭ ಶೆಟ್ಟಿ, ಪ್ರದೀಪ್ ಪೂಜಾರಿ, ಜಯಪ್ರಕಾಶ್ ಅಮೈ, ಅಶ್ರಫ್ ಮುಕ್ವೆ, ಶಾಂತಕುಮಾರ್ ಮತ್ತು ಪುರುಷೋತ್ತಮ್ ಶೆಟ್ಟಿಯವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here