ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆ ವಲಯಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಪ್ರಥಮ ಸಮಗ್ರ ಪ್ರಶಸ್ತಿ

0

ಕಾಣಿಯೂರು: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಕ್ಷೇತ್ರ ಸಮೂಹ ಸಂಪನ್ಮೂಲ ಕೇಂದ್ರ ಪುತ್ತೂರು ಮತ್ತು ಸರ್ವೋದಯ ಪ್ರೌಢ ಶಾಲೆ ಸುಳ್ಯಪದವು ಇದರ ಜಂಟಿ ಆಶ್ರಯದಲ್ಲಿ ಸುಳ್ಯಪದವು ಸರ್ವೋದಯ ಸಭಾ ಭವನದಲ್ಲಿ ನಡೆದ ಸವಣೂರು ವಲಯ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆ ಪ್ರಥಮ ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡಿದೆ.

ಭರತನಾಟ್ಯದಲ್ಲಿ ರಚನಾ ಪ್ರಥಮ, ಇಂಗ್ಲಿಷ್ ಭಾಷಣದಲ್ಲಿ ಶ್ರಾವ್ಯ ಕೆ ಎಚ್ ಪ್ರಥಮ, ತುಳು ಭಾಷಣದಲ್ಲಿ ಉತ್ತಮ್ ಜಿ ಪ್ರಥಮ, ಭಾವಗೀತೆಯಲ್ಲಿ ಈಶಿತ ಪ್ರಥಮ, ಸಂಸ್ಕೃತ ಧಾರ್ಮಿಕ ಪಠಣದಲ್ಲಿ ರಂಜನ್ ಪ್ರಥಮ, ಛದ್ಮವೇಶದಲ್ಲಿ ಅದ್ವಿಕ್ ರೈ ಪ್ರಥಮ, ಕ್ವಿಜ್ ಉತ್ತಮ ಮತ್ತು ಹರ್ಷಿತ್ ಪ್ರಥಮ, ಜನಪದ ಗೀತೆಯಲ್ಲಿ ಪ್ರತಿತ ದ್ವಿತೀಯ, ಮಿಮಿಕ್ರಿ ರೋಹನ್ ದ್ವಿತೀಯ, ಕವ್ವಾಲಿ ದ್ವಿತೀಯ, ಗಝಲ್ ರಾಶಿ ಕೆ ಸಿ ತೃತೀಯ, ಹಾಸ್ಯ ಅಜಯ್ ತೃತೀಯ, ಕನ್ನಡ ಭಾಷಣದಲ್ಲಿ ಸ್ವಸ್ತಿಕಾ ರೈ ಪ್ರಥಮ, ಜನಪದ ಗೀತೆಯಲ್ಲಿ ಮಮತ ತೃತೀಯ, ರಂಗೋಲಿ ಸಿಂಚನ್ ವೈ ಆರ್ ಪ್ರಥಮ, ಹಿಂದಿ ಭಾಷಣದಲ್ಲಿ ಸನ್ವಿತ್ ಬಿ ತೃತಿಯ, ತುಳು ಭಾಷಣದಲ್ಲಿ ರಶ್ವಿನ್ ರೈ ದ್ವಿತೀಯ, ಚಿತ್ರಕಲೆ ಶ್ರದ್ದಾ ಕೆ ಡಿ ತೃತೀಯ ಸ್ಥಾನ ಪಡೆದು ಕೊಂಡಿದೆ.

LEAVE A REPLY

Please enter your comment!
Please enter your name here