





ಪುತ್ತೂರು: ಬಿರುಮಲೆ ಬೆಟ್ಟ ಅಭಿವೃದ್ಧಿ ಯೋಜನೆ ಇದರ 2024-25ರ ಸಾಲಿನ ವಾರ್ಷಿಕ ಮಹಾಸಭೆಯು ಅ.26 ರಂದು ಅಧ್ಯಕ್ಷರಾದ ಎ.ಜಗಜ್ಜೀವನ್ ದಾಸ್ ರವರ ಅಧ್ಯಕ್ಷತೆಯಲ್ಲಿ ಜರುಗಿತು.


ಅಧ್ಯಕ್ಷರಾದ ಎ.ಜಗಜ್ಜೀವನ್ ದಾಸ್ ರವರು ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಬಿರುಮಲೆ ಬೆಟ್ಟ ಅಭಿವೃದ್ಧಿಯತ್ತ ಸಾಗುತ್ತಿದ್ದು ನಮ್ಮ ಸಂಘದ ಸದಸ್ಯರು, ಸಾರ್ವಜನಿಕರು ಅಭಿವೃದ್ಧಿಗೆ ಸಹಕರಿಸುತ್ತಿದ್ದಾರೆ ಜೊತೆಗೆ ಪುತ್ತೂರಿನ ಶಾಸಕರಾದ ಅಶೋಕ್ ಕುಮಾರ್ ರೈರವರೂ ಕೂಡ ಬಿರುಮಲೆ ಅಭಿವೃದ್ಧಿಗೆ ಕೈಜೋಡಿಸುತ್ತಿರುವುದು ಅಭಿಮಾನದ ವಿಷಯವಾಗಿದೆ. ಸಂಘದ ಸದಸ್ಯರ ಸಹಕಾರ ಇದೇ ರೀತಿ ಮುಂದುವರೆಯಲಿ ಎಂದರು.





ನಿರ್ಣಯಗಳು
ಈ ಸಂದರ್ಭದಲ್ಲಿ ಸಭೆಯಲ್ಲಿ ಕೆಲವೊಂದು ತೆಗೆದುಕೊಂಡ ನಿರ್ಣಯಗಳಾದ ಬಿರುಮಲೆ ಅಭಿವೃದ್ಧಿಗೆ ಸರಕಾರದಿಂದ ಕೋಟಿ ಅನುದಾನ ನೀಡಿದ ಜೊತೆಗೆ ಬಿರುಮಲೆಯ ಅಭಿವೃದ್ಧಿಗೆ ಪಣ ತೊಟ್ಟಿರುವ ಶಾಸಕ ಅಶೋಕ್ ಕುಮಾರ್ ರೈರವರನ್ನ ಅಭಿನಂದಿಸುವ ಬಗ್ಗೆ, ಪ್ರಸ್ತುತ ಬಿರುಮಲೆ ಅಭಿವೃದ್ಧಿ ಯೋಜನೆ ಎಂಬ ಹೆಸರಿನ ಬದಲಿಗೆ ಬೀರಮಲೆ ಅಭಿವೃದ್ಧಿ ಯೋಜನೆ ಎಂದು ತಿದ್ದುಪಡಿ ಮಾಡುವ ಬಗ್ಗೆ, ಈ ಹಿಂದೆ ಇದ್ದು ಪ್ರಸ್ತುತ ಸಾಲು ಮರದ ತಿಮ್ಮಕ್ಕ ಪಾರ್ಕ್ ಬಳಿ ಇರುವ ರಸ್ತೆಯನ್ನು ಮತ್ತೆ ಊರ್ಜಿತಗೊಳಿಸಲು ಕ್ರಮ ತೆಗೆದುಕೊಳ್ಳುವ ಬಗ್ಗೆ, ನೂತನವಾಗಿ ರೂ.10 ಸಾವಿರ ಪಾವತಿಸುವವರನ್ನು ಪೋಷಕ ಸದಸ್ಯತ್ವವನ್ನು ನೀಡುವುದು ಮತ್ತು ಸದಸ್ಯತ್ವವನ್ನು ಹೆಚ್ಚಿಸುವ ಬಗ್ಗೆ ಗಮನ ಹರಿಸುವುದು, ಬೀರಮಲೆ ಬೆಟ್ಟದಲ್ಲಿ ಕೋಚಣ್ಣ ರೈಗಳ ಪುತ್ಥಳಿ ಸ್ಥಾಪಿಸಿ ಸೂಕ್ತ ಸ್ಮಾರಕ ನಿರ್ಮಾಣ ಮಾಡುವುದರ ಬಗ್ಗೆ ನಿರ್ಣಯಗಳನ್ನು ಅಂಗೀಕರಿಸಲಾಯಿತು.
ನೂತನ ಪದಾಧಿಕಾರಿಗಳ ಆಯ್ಕೆ
ಈ ಸಂದರ್ಭದಲ್ಲಿ ಬಿರುಮಲೆ ಬೆಟ್ಟ ಅಭಿವೃದ್ಧಿ ಯೋಜನೆಯ ಮುಂದಿನ ಸಾಲಿಗೆ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನೆರವೇರಿತು. ಗೌರವಾಧ್ಯಕ್ಷರಾಗಿ ಶಾಸಕ ಅಶೋಕ್ ಕುಮಾರ್ ರೈ ಹಾಗೂ ಪ್ರೊ.ಎ.ವಿ ನಾರಾಯಣ, ಅಧ್ಯಕ್ಷರಾಗಿ ಎ.ಜಗಜ್ಜೀವನ್ ದಾಸ್ ರೈ, ಉಪಾಧ್ಯಕ್ಷರುಗಳಾಗಿ ಪ್ರೊ.ಝೇವಿಯರ್ ಡಿ’ಸೋಜ ಹಾಗೂ ಡಾ.ಸತ್ಯವತಿ ಆಳ್ವ, ಕಾರ್ಯದರ್ಶಿಯಾಗಿ ನಿತಿನ್ ಪಕ್ಕಳ, ಜೊತೆ ಕಾರ್ಯದರ್ಶಿಯಾಗಿ ಕೇಶವ ನಾಯಕ್, ಕೋಶಾಧಿಕಾರಿಯಾಗಿ ಪ್ರೊ.ದತ್ತಾತ್ರೇಯ ರಾವ್, ಕಾರ್ಯಕಾರಿ ಸಮಿತಿಯ ಸದಸ್ಯರುಗಳಾಗಿ ಶಾಂತಕುಮಾರ್, ಜೈರಾಜ್ ಭಂಡಾರಿ, ಸಾಜ ರಾಧಾಕೃಷ್ಣ ಆಳ್ವ, ಸಂತೋಷ್ ಕುಮಾರ್ ಶೆಟ್ಟಿ, ಶಿವರಾಮ ಆಳ್ವ, ಮನೋಜ್ ಶಾಸ್ತ್ರಿ, ಸುಭಾಶ್ ರೈ, ಹೆರಾಲ್ಡ್ ಮಾಡ್ತಾ, ಡಾ.ರವೀಂದ್ರ, ಶರತ್ ಆಳ್ವ, ಗೌರವ ಸಲಹೆಗಾರರಾಗಿ ಸುಬ್ರಾಯ ಅಮ್ಮಣ್ಣಾಯ, ಸವಣೂರು ಸೀತಾರಾಮ ರೈ, ಅರಿಯಡ್ಕ ಚಿಕ್ಕಪ್ಪ ನಾಯೈಕ್, ಬಾಲಕೃಷ್ಣ ಕೊಳತ್ತಾಯ, ದಂಬೆಕಾನ ಸದಾಶಿವ ರೈ, ಶ್ರೀಮತಿ ಇಂದಿರಾ ಆಚಾರ್ಯ, ಚಂದ್ರಹಾಸ ರೈರವರು ಆಯ್ಕೆಯಾದರು.
ಸಭೆಯಲ್ಲಿ ಸುಭಾಶ್ ರೈ ಬೆಳ್ಳಿಪ್ಪಾಡಿ, ಸಂಕಪ್ಪ ರೈ, ಅಣ್ಣಪ್ಪ, ಸುಬ್ರಹ್ಮಣ್ಯ ಶಾಸ್ತ್ರಿ, ಶರಣ್ ಆಳ್ವ, ಡಾ.ಕೆ.ಎಸ್ ಭಟ್, ಎನ್.ಎಸ್ ನಟರಾಜ್ ರವರು ಉಪಸ್ಥಿತರಿದ್ದರು. ಕಾರ್ಯದರ್ಶಿ ನಿತಿನ್ ಪಕ್ಕಳ ವಾರ್ಷಿಕ ವರದಿ, ಲೆಕ್ಕಪತ್ರವನ್ನು ಕೋಶಾಧಿಕಾರಿಗಳ ಪರವಾಗಿ ಉಪಾಧ್ಯಕ್ಷ ಪ್ರೊ.ಝೇವಿಯರ್ ಡಿ’ಸೋಜರವರು ಮಂಡಿಸಿದರು.










