ಕಾಣಿಯೂರು: ಕಣ್ವರ್ಷಿ ಆಟೋ ರಿಕ್ಷಾ ನಿಲ್ದಾಣದ ಮೇಲ್ಛಾವಣಿ  ಉದ್ಘಾಟನೆ,  ಸಂಘದ ಪದಗ್ರಹಣ ಸಮಾರಂಭ 

0

ಕಾಣಿಯೂರು: ಹಿಂದಿನ ಪಂಚಾಯತ್ ಆಡಳಿತ ಹಾಗೂ ಈಗಿನ ಆಡಳಿತ ಅವಧಿಯಲ್ಲಿ  ಅನುದಾನ ನೀಡಿ ಸುಂದರ ಅಟೋರಿಕ್ಷಾ ನಿಲ್ದಾಣ ನಿರ್ಮಾಣವಾಗಿದೆ.ಸಮಾಜಮುಖಿ ಕಾರ್ಯಗಳಲ್ಲಿಯೂ ಸಕ್ರೀಯರಾಗಿರುವ ಕಾಣಿಯೂರಿನ ರಿಕ್ಷಾ ಚಾಲಕರ ಸಂಘವು ಮಾದರಿಯಾಗಿ ತಾಲೂಕಿನಲ್ಲೇ ಅತ್ಯುತ್ತಮ ಸಂಘವಾಗಿ ಮೂಡಿ ಬಂದಿದೆ ಎಂದು ಕಾಣಿಯೂರು ಕಣ್ವರ್ಷಿ ರಿಕ್ಷಾ ಚಾಲಕ ಮಾಲಕರ ಸಂಘದ ಗೌರವಾಧ್ಯಕ್ಷ,ಕಾಣಿಯೂರು ಗ್ರಾ.ಪಂ.ಉಪಾಧ್ಯಕ್ಷ ಗಣೇಶ್ ಉದುನಡ್ಕ ಹೇಳಿದರು. ಅವರು ಕಾಣಿಯೂರು ಗ್ರಾ.ಪಂ‌.ಅನುದಾನದಲ್ಲಿ ನಿರ್ಮಾಣಗೊಂಡ ರಿಕ್ಷಾ ನಿಲ್ದಾಣದ ಮೇಲ್ಛಾವಣಿ ಉದ್ಘಾಟನಾ ಕಾರ್ಯಕ್ರಮ ಮತ್ತು ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದರು.
ರಿಕ್ಷಾ ನಿಲ್ದಾಣ ಉದ್ಘಾಟಿಸಿದ ಕಾಣಿಯೂರು‌ ಗ್ರಾ.ಪಂ.ಅಧ್ಯಕ್ಷೆ ಲಲಿತಾ ದರ್ಖಾಸ್ ಮಾತನಾಡಿ ರಿಕ್ಷಾ ಚಾಲಕರ ಸಂಘವು ಕಾಣಿಯೂರಿನಲ್ಲಿ ಮಾದರಿಯಾಗಿ ಬೆಳೆಯಲಿ ಎಂದು  ಶುಭಹಾರೈಸಿದರು.ಸಭಾ ಕಾರ್ಯಕ್ರಮದ ದೀಪ ಬೆಳಗಿಸಿ ಮಾತನಾಡಿದ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕಿನ ಪ್ರಬಂಧಕರಾದ ವೈಶಾಲಿರವರು  ಇಲ್ಲಿನ ರಿಕ್ಷಾ ಚಾಲಕರು ಆಪತ್ಭಾಂದವರಾಗಿದ್ದು, ಮಾನವೀಯ ಗುಣವುಳ್ಳವರು ಎಂದರು. ವೇದಿಕೆಯಲ್ಲಿ  ಕಾಣಿಯೂರು‌ ಗ್ರಾ.ಪಂ‌.ಸದಸ್ಯರಾದ ರಾಮಣ್ಣ ಗೌಡ ಮುಗರಂಜ, ವಸಂತ ಪೆರ್ಲೋಡಿ, ಮಾಜಿ ಸದಸ್ಯರಾದ ಸುರೇಶ್ ಓಡಬಾಯಿ, ಶ್ರೀ ಲಕ್ಷ್ಮೀನರಸಿಂಹ ಭಜನಾ ಮಂಡಳಿಯ ಕಾರ್ಯದರ್ಶಿ ಜಯಂತ ಅಬೀರ,ಸಂಘದ ಗೌರವ ಸಲಹೆಗಾರ ಸುಲೈಮಾನ್ ಬೆದ್ರಾಜೆ,ಪದಾಧಿಕಾರಿಗಳಾದ ಗಣೇಶ್ ಬೆದ್ರಾಜೆ,ಧ್ರುವಕುಮಾರ್ ಕಲ್ಪಡ,ಮನೋಜ್ ವೈ.ಟಿ ಉಪಸ್ಥಿತರಿದ್ದರು. ಸಂಘದ ಅಧ್ಯಕ್ಷ ಪ್ರವೀಣ್ ಕೋಳಿಗದ್ದೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಲಿಂಗಪ್ಪ ಗೌಡ ಅರುವ,ಗಣೇಶ್ ಕೋಲ್ಪೆ,ಯತೀಶ್ ಮಾದೋಡಿ,ಮಾಧವ ಕೋಲ್ಪೆ,ಕುಸುಮಾಧರ್ ಕೋಲ್ಪೆ,ಮೋನಪ್ಪ ನಾಯ್ಕ್ ಕಾನವು, ಪ್ರಮೋದ್ ಅಂಬುಲ, ಪುನೀತ್ ಕಲ್ಪಡ,ತೀರ್ಥಪ್ರಸಾದ್,ನಾಗರಾಜ್ ಖಂಡಿಗ,ಪುರಂದರ ಕೋಳಿಗದ್ದೆ,ಚಿದಾನಂದ ಖಂಡಿಗ,ಶರತ್ ಇಡ್ಯಡ್ಕ ಅತಿಥಿಗಳನ್ನು ಗೌರವಿಸಿದರು. ಸಂಘದ ಕಾರ್ಯದರ್ಶಿ ಕುಸುಮಾಧರ ಮರ್ಲಾಣಿ ವಾರ್ಷಿಕ ವರದಿ ಓದಿದರು.ಆನಂದ ಗಾಳಿಬೆಟ್ಟು ಸ್ವಾಗತಿಸಿ , ಮಾಜಿ ಅಧ್ಯಕ್ಷ ರಚನ್ ಬರಮೇಲು ವಂದಿಸಿದರು. ಗೌರವ ಸಲಹೆಗಾರ ಪರಮೇಶ್ವರ ಅನಿಲ ಕಾರ್ಯಕ್ರಮ ನಿರೂಪಿಸಿದರು.ಕಾರ್ಯಕ್ರಮದಲ್ಲಿ ನೂತನ ಅಧ್ಯಕ್ಷ ಮಾಧವ ಕೋಲ್ಪೆ ಹಾಗೂ ಪದಾಧಿಕಾರಿಗಳಿಗೆ ಇವರಿಗೆ ಅಧಿಕಾರ ಹಸ್ತಾಂತರ ಮಾಡಲಾಯಿತು. ರಿಕ್ಷಾ ತಂಗುದಾನಕ್ಕೆ ಅನುದಾನ ನೀಡಿದ ಕಾಣಿಯೂರು‌ ಗ್ರಾ.ಪಂ.ಅಧ್ಯಕ್ಷ ಹಾಗೂ ಉಪಾಧ್ಯಕ್ಷರನ್ನು ಕಾರ್ಯಕ್ರಮದಲ್ಲಿ ಗೌರವಿಸಲಾಯಿತು.

LEAVE A REPLY

Please enter your comment!
Please enter your name here