ಶ್ರೀ ರಾಮಕೃಷ್ಣ ಪ್ರೌಢಶಾಲೆಯಲ್ಲಿ ಪುತ್ತೂರು ವಲಯ ಮಟ್ಟದ ಕ್ರೀಡಾಕೂಟದ ಪೂರ್ವಭಾವಿ ಸಭೆ

0

ಪುತ್ತೂರು: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಪುತ್ತೂರು ಇವರ ವತಿಯಿಂದ ಶ್ರೀ ರಾಮಕೃಷ್ಣ ಪ್ರೌಢಶಾಲೆ ಯ ಸಹಯೋಗದಲ್ಲಿ ನಡೆಯುವ ವಲಯ ಮಟ್ಟದ ಕ್ರೀಡಾಕೂಟದ ಪೂರ್ವಭಾವಿ ಸಭೆ ಸೆ.21ರಂದು ಜರುಗಿತು.


ದಿನಾಂಕ ೨೧-೧೦-೨೦೨೨ ರಂದು ಪ್ರೌಢ ಮತ್ತು ೨೨-೧೦-೨೦೨೨ ರಂದು ಪ್ರಾಥಮಿಕ ಶಾಲಾ ವಲಯ ಮಟ್ಟದ ಕ್ರೀಡಾಕೂಟ ನಡೆಸುವುದೆಂದು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿಗಳಾದ ಸಂದರ ಗೌಡ ಮತ್ತು ಶಾಲಾ ಸಂಚಾಲಕರಾದ ಕಾವು ಹೇಮನಾಥ ಶೆಟ್ಟಿ ಇವರ ಸಮ್ಮುಖದಲ್ಲಿ ಸಭೆಯಲ್ಲಿ ನಿರ್ಧರಿಸಲಾಯಿತು. ವೇದಿಕೆಯಲ್ಲಿ ಹಾರಾಡಿ ಸಿ.ಆರ್.ಪಿ ಪ್ರಸಾದ್ ಕೆ , ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಉಪಾಧ್ಯಕ್ಷರಾದ ಸುಧಾಕರ ರೈ ಉಪಸ್ಥಿತರಿದ್ದರು. ಕೋಡಿಂಬಾಡಿ ಸ.ಹಿ.ಪ್ರಾ.ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕಿ ವಿಜಯ ಪ್ರಭು ಪ್ರಾರ್ಥಿಸಿ ಶಾಲಾ ದೈಹಿಕ ಶಿಕ್ಷಣ ಶಿಕ್ಷಕರಾದ ಸುನೀತಾ ಎಂ ಕಾರ್ಯಕ್ರಮವನ್ನು ನಿರೂಪಿಸಿದರು.

ಕೃತಿ ಕೆ ಎ ಇವಳ ಚಿಕಿತ್ಸೆಗೆ ರೂ 50,000/- ಧನ ಸಹಾಯ: ಶ್ರೀ ರಾಮಕೃಷ್ಣ ಪ್ರೌಢಶಾಲೆಯಲ್ಲಿ ೮ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಬನ್ನೂರು ಗ್ರಾಮದ ಕಂಜೂರಿನ ಆನಂದ ಕುಲಾಲ್ ಮತ್ತು ಪದ್ಮಾವತಿ ಇವರ ಪುತ್ರಿ ಕೃತಿ ಕೆ ಎ ಬೆನ್ನುಮೂಳೆಯ ಶಸ್ತ್ರಚಿಕಿತ್ಸೆಯಾಗಿ ಎ.ಜೆ. ಆಸ್ಪತ್ರೆಯಲ್ಲಿದ್ದು, ಅವಳ ಚಿಕಿತ್ಸೆಯ ನೆರವಿಗಾಗಿ ಸಂಸ್ಥೆಯ ವತಿಯಿಂದ ಸಂಗ್ರಹ ಮಾಡಲಾದ ರೂ ೫೦೦೦೦/- ನಗದನ್ನು ಈ ಸಂದರ್ಭದಲ್ಲಿ ಸಂಚಾಲಕರಾದ ಕಾವು ಹೇಮನಾಥ ಶೆಟ್ಟಿಯವರು ಅವಳ ಪೋಷಕರಿಗೆ ಹಸ್ತಾಂತರಿಸಿ ಶೀಘ್ರ ಗುಣಮುಖಳಾಗಿ ಮರಳಿ ಶಾಲೆಗೆ ಬರುವಂತಾಗಲೆಂದು ಶುಭ ಹಾರೈಸಲಾಯಿತು.

LEAVE A REPLY

Please enter your comment!
Please enter your name here