ಕಾವು: ತುಡರ್ ಯುವಕ ಮಂಡಲದಿಂದ ರೂ.10,000 ಪರಿಹಾರ ಧನ ಚೆಕ್ ವಿತರಣೆ

0

ಕಾವು: ಜಿಲ್ಲಾ ಪ್ರಶಸ್ತಿ ಪುರಸ್ಕೃತ ಕಾವು ನನ್ಯ ತುಡರ್ ಯುವಕ ಮಂಡಲದ ತುರ್ತು ಪರಿಹಾರ ನಿಧಿಯಿಂದ ಸದಸ್ಯ ಜಗನ್ನಾಥ ಗೌಡರವರಿಗೆ ರೂ. 10 ಸಾವಿರ ಪರಿಹಾರಧನನೀಡಲಾಯಿತು.

ಇತ್ತೀಚೆಗೆ ಮೂಡಿಗೆರೆ ಸಮೀಪದಲ್ಲಿ ನಡೆದ ಅಪಘಾತದ ಹಲ್ಲೆ ಪ್ರಕರಣದಲ್ಲಿ ಗಾಯಗೊಂಡಿದ್ದ ಜಗನ್ನಾಥ ಗೌಡರವರಿಗೆ ಚಿಕಿತ್ಸಾ ವೆಚ್ಚವಾಗಿ ಆರ್ಥಿಕ ಸಹಾಯ ನೀಡಲಾಯಿತು. ಯುವಕ ಮಂಡಲದ ಅಧ್ಯಕ್ಷ ಜಗದೀಶ್ ನಾಯ್ಕರವರು ಚೆಕ್ ಹಸ್ತಾಂತರಿಸಿದರು. ಯುವಕ ಮಂಡಲದ ಸ್ಥಾಪಕಾಧ್ಯಕ್ಷ ಸುಬ್ರಾಯ ಬಲ್ಯಾಯ, ಮಾಜಿ ಅಧ್ಯಕ್ಷರಾದ ಭಾಸ್ಕರ ಬಲ್ಯಾಯ, ಸುನೀಲ್ ನಿಧಿಮುಂಡ, ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಆಚಾರ್ಯ ನನ್ಯ, ಉಪಾಧ್ಯಕ್ಷ ಶ್ರೀಕುಮಾರ್ ಬಲ್ಯಾಯ, ಸಂಘಟನಾ ಕಾರ್ಯದರ್ಶಿ ರಾಮಣ್ಣ ನಾಯ್ಕ ಆಚಾರಿಮೂಲೆ, ಭಜನಾ ಸಂಘದ ಅಧ್ಯಕ್ಷ ಸಂಕಪ್ಪ ಪೂಜಾರಿ ಚಾಕೋಟೆ, ಸದಸ್ಯರಾದ ಸಂದೇಶ್ ಚಾಕೋಟೆ, ಸತೀಶ ಮದ್ಲ, ಬಾಲಕೃಷ್ಣ ಪಾಟಾಳಿ ನನ್ಯ, ಭವಿತ್ ರೈ ಮದ್ಲರವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here