ಜನನಿ ಫಾರ್ಮರ್ ಪ್ರೊಡ್ಯೂಸರ್ ಕಂಪನಿ ವಾರ್ಷಿಕ ಸಾಮಾನ್ಯ ಸಭೆ

0

ಪುತ್ತೂರು: ಕೆಮ್ಮಿಂಜೆ ಕಲ್ಲಗುಡ್ಡೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಜನನಿ ಫಾರ್ಮರ್ ಪ್ರೊಡ್ಯೂಸರ್ ಕಂಪನಿಯ ಸರ್ವ ಸದಸ್ಯರ ವಾರ್ಷಿಕ ಸಾಮಾನ್ಯ ಸಭೆಯು ಸೆ.೨೩ರಂದು ಬೆಳಿಗ್ಗೆ ೧೦.೩೦ಕ್ಕೆ ಕಲ್ಲಗುಡ್ಡೆಯಲ್ಲಿರುವ ಕೇಂದ್ರ ಕಚೇರಿ ಆವರಣದಲ್ಲಿ ಸಂಸ್ಥೆಯ ಆಡಳಿತ ನಿರ್ದೇಶಕ ಅರುಣ್ ಕುಮಾರ್ ಪುತ್ತಿಲ ಅಧ್ಯಕ್ಷತೆಯಲ್ಲಿ ನಡೆಯಿತು.

ಮುಖ್ಯ ಅತಿಥಿಯಾಗಿದ್ದ ಕೃಷಿ ಸಂಶೋಧನಾ ಪರಿಷತ್ತು ರಾಷ್ಟ್ರೀಯ ಗೇರು ನಿರ್ದೇಶನಾಲಯದ ನಿವೃತ್ತ ಪ್ರಧಾನ ವಿಜ್ಞಾನಿ ಡಾ| ಯಧುಕುಮಾರ್ ಎನ್ ಮಾತನಾಡಿ, ಕೃಷಿಯಲ್ಲಿ ರೈತರು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಹೀಗಾಗಿ ಕಂಪನಿಯು ವ್ಯವಹಾರದ ಜೊತೆಗೆ ಕೃಷಿಯಲ್ಲಿನ ಸುಧಾರಿತ ತಂತ್ರಜ್ಞಾನಗಳು, ರಸಗೊಬ್ಬರಗಳ ಬಳಕೆಯ ಸಮರ್ಪಕವಾದ ಮಾಹಿತಿ ಪಡೆದುಕೊಂಡು ಅವುಗಳನ್ನು ರೈತರಿಗೆ ನೀಡಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಸಂಸ್ಥೆ ಆಡಳಿತ ನಿರ್ದೇಶಕ ಅರುಣ್ ಕುಮಾರ್ ಪುತ್ತಿಲ ಮಾತನಾಡಿ, ಕೃಷಿಕರು ಬೆಳೆದ ಉತ್ಪನ್ನಗಳಿಗೆ ಉತ್ತಮ ಧಾರೆಣೆ ದೊರೆತು ರೈತರ ಸುಖೀ ಜೀವನಕ್ಕಾಗಿ ಗೋದಾಮು, ಸಂಸ್ಕರಣಾ ಘಟಕಗಳನ್ನು ಸ್ಥಾಪಿಸುವ ಯೋಜನೆಯಿದೆ. ಸಂಸ್ಥೆಯ ಮೂಲಕ ಸರಕಾರದ ಯೋಜನೆಗಳನ್ನು ಸಮಾಜದ ಕಟ್ಟಕಡೆಯ ಕೃಷಿಕರಿಗೂ ದೊರಕಿಸುವುವುದು, ಉತ್ತಮ ದಾರಣೆ ಪಡೆಯದು ಸ್ವಾಭಿಮಾನಿಯಾಗಿ ಸಮಾಜದ ಮುಖ್ಯವಾಹಿನಿಗೆ ಬದುಕಬೇಕು. ತಂತ್ರಜ್ಞಾನದ ಮಧ್ಯೆ ಕೃಷಿಯಲ್ಲಿ ಸಮೃದ್ಧ ಜೀವನಕ್ಕೆ ಪೂರಕವಾದ ವಾತಾವರಣ ಕಲ್ಪಿಸಲಾಗುವುದು. ಕೃಷಿ ಸಂಬಂಧಿಸಿದ ಇಲಾಖೆಗಳ ಮಾಹಿತಿಗಳನ್ನು ಸಂಸ್ಥೆಯ ಮೂಲಕ ನೀಡಲಾಗುವುದು ಎಂದರು.
ಸ್ಪರ್ಧಾತ್ಮಕ ದರದಲ್ಲಿ ಮನೆ ಬಾಗಿಲಿಗೆ ರಸಗೊಬ್ಬರ ಸಂಘವು ಒಂದು ವರ್ಷ ಪೂರೈಸಿದ್ದು ಸಂಘದಲ್ಲಿ ೪೨೧ ಸದಸ್ಯರನ್ನು ಹೊಂದಿದೆ. ರೂ.೫.೭೦ಲಕ್ಷ ಪಾಲು ಬಂಡವಾಳ ಹೊಂದಿದೆ. ಕೃಷಿಗೆ ಆವಶ್ಯಕವಾದ ರಸಗೊಬ್ಬರ, ಸಾವಯವ ಗೊಬ್ಬರ, ಕೀಟ ನಾಶಕ, ಟಾರ್ಪಾಲ್, ಕೃಷಿ ಯಂತ್ರೋಪಕರಣಗಳನ್ನು ಸ್ಪರ್ಧಾತ್ಮಕ ದರದಲ್ಲಿ ಮಾರಾಟ ಮಾಡಲಾಗುವುದು. ಅಲ್ಲದೆ ರಸಗೊಬ್ಬರ, ಸಾವಯವ ಗೊಬ್ಬರಗಳನ್ನು ಸ್ಪರ್ಧಾತ್ಮಕ ದರದಲ್ಲಿ ರೈತರ ಮನೆ ಬಾಗಿಲಿಗೆ ತಲುಪಿಸಲಾಗುವುದು ಎಂದು ಅರುಣ್ ಕುಮಾರ್ ಪುತ್ತಿಲ ಹೇಳಿದರು.
ಬೈಫ್ ಕಂಪನಿ ತುಮಕೂರ ಇದರ ಪ್ರಾದೇಶಿಕ ಕಾರ್ಯಕ್ರಮ ಅಧಿಕಾರಿ ರಾಮಕೃಷ್ಣ ಆಳ್ವ ಪ್ರಾಸ್ತಾವಿಕವಾಗಿ ಮಾತನಾಡಿ, ರೈತರಿಂದ ರೈತರಿಗೋಸ್ಕರ ಪ್ರಾರಭಗೊಂಡ ಸಂಸ್ಥೆಯಾಗಿದ್ದು, ೧೦೦೦ ರೈತರಿಗೆ ಸದಸ್ಯತ್ವ ಸೇವಾ ಶುಲ್ಕ ಪಡೆದ, ಕೃಷಿಗೆ ಸಂಬಂಧಿಸಿದ ಸಹಕಾರ, ಬೆಳೆಗರ ಉತ್ತಮ ಮಾರುಕಟ್ಟೆ ಒದಗಿಸುವುದು ಸಂಸ್ಥೆಯ ಉದ್ದೇಶವಾಗಿದೆ. ಭಾರತ ಸರ್ಕಾರದ ನಬಾರ್ಡ್ ಮೂಲಕ ನಡೆಯುವ ಸಂಸ್ಥೆಯಾಗಿದ್ದು ಇದರ ಬಗ್ಗೆ ಯಾವುದೇ ಅನುಮಾನ ಬೇಡ ಎಂದು ತಿಳಿಸಿದರು.

ನಬಾರ್ಡ್‌ನ ಜಿಲ್ಲಾ ಪ್ರಧಾನ ವ್ಯವಸ್ಥಾಪಕಿ ಸಂಗೀತ ಕರ್ತ ಮಾತನಾಡಿ, ನಬಾರ್ಡ್‌ನಿಂದ ರೈತರಿಗೆ ದೊರೆಯವ ಪ್ರಯೋಜನಗಳ ಬಗ್ಗೆ ಮಾಹಿತಿ ನೀಡಿದರು. ಮುಂಡೂರು ಗ್ರಾ.ಪಂ ಅಧ್ಯಕ್ಷೆ ಪುಷ್ಪಾ ಎನ್. ಹಾಗೂ ನರಿಮೊಗರು ಗ್ರಾ.ಪಂ ಉಪಾಧ್ಯಕ್ಷ ಸುಧಾಕರ ಕುಲಾಲ್ ಮಾತನಾಡಿ ಶುಭಹಾರೈಸಿದರು.

ಮುಖ್ಯಕಾರ್ಯನಿರ್ವಹಣಾಧಿಕಾರಿ ಸುಪ್ರಿತ್ ಕುಮಾರ್ ಸ್ವಾಗತಿಸಿ, ವಾರ್ಷಿಕ ವರದಿ ಹಾಗೂ ಆಯ-ವ್ಯಯ ಮಂಡಿಸಿದರು. ಸಿಬಂದಿ ಚೈತ್ರ ಕಾರ್ಯಕ್ರಮ ನಿರೂಪಿಸಿ, ನಿರ್ದೇಶಕ ಬಾಲಚಂದ್ರ ಕಡ್ಯ ವಂದಿಸಿದರು. ನಿರ್ದೆಶಕರು ಹಾಗೂ ಸದಸ್ಯರು ಸಭೆಯಲ್ಲಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here