ರಕ್ತಚಂದನ ಮರದ ದಿಮ್ಮಿ ದಾಸ್ತಾನು; ಆರೋಪಿಗಳ ಜಾಮೀನು ಅರ್ಜಿ ವಜಾ

0

ಪುತ್ತೂರು:ಬೆಳ್ತಂಗಡಿ ತಾಲೂಕಿನ ಮೂಡಿಕೋಡಿ ಗ್ರಾಮ ಅಂಬಲೋಡಿ ಮೀಸಲು ಅರಣ್ಯ ಸರಕಾರಿ ಸ್ಥಳದಲ್ಲಿ ಅಕ್ರಮವಾಗಿ ರಕ್ತಚಂದನ ಮರದ ದಿಮ್ಮಿಗಳನ್ನು ಇರಿಸಿದ್ದ ಪ್ರಕರಣಕ್ಕೆ ಸಂಬಂಧಿಸಿ ಬಂಧಿತರಾಗಿ ನ್ಯಾಯಾಂಗ ಬಂಧನದಲ್ಲಿರುವ ಇಬ್ಬರು ಆರೋಪಿಗಳ ಜಾಮೀನು ಅರ್ಜಿಯನ್ನು ಬೆಳ್ತಂಗಡಿ ನ್ಯಾಯಾಲಯ ತಿರಸ್ಕರಿಸಿದೆ. ಸೆ.12ರಂದು ಆರೋಪಿಗಳಾದ ಯಶವಂತ ಪೂಜಾರಿ ಮತ್ತು ಸಂತೋಷ್ ಭಂಡಾರಿ ಅವರು 23 ರಕ್ತಚಂದನ ದಿಮ್ಮಿಗಳು ಮತ್ತು 3 ಕಟ್ಟಿಗಳನ್ನು ಅಕ್ರಮವಾಗಿ ದಾಸ್ತಾನು ಇರಿಸಿದ್ದ ಕುರಿತು ಅರಣ್ಯ ಸಂಚಾರಿ ಪೊಲೀಸರು ಮಾಹಿತಿ ಪಡೆದು ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.ನ್ಯಾಯಾಂಗ ಬಂಧನದಲ್ಲಿರುವ ಆರೋಪಿಗಳು ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿದೆ.ಪ್ರಾಸಿಕ್ಯೂಶನ್ ಪರ ಸಹಾಯಕ ಸರಕಾರಿ ಅಭಿಯೋಜಕ ಪುತ್ತೂರು ಉರ್ಲಾಂಡಿ ನಿವಾಸಿ ದಿವ್ಯರಾಜ್ ಹೆಗ್ಡೆ ವಾದಿಸಿದ್ದರು.

LEAVE A REPLY

Please enter your comment!
Please enter your name here