ಪುತ್ತೂರು ಸಾರ್ವಜನಿಕ ಆಸ್ಪತ್ರೆಯಲ್ಲಿ 12 ಡಯಾಲಿಸಿಸ್ ಘಟಕ; ರೋಗಿಗಳಿಗೆ ವಿಳಂಬವಿಲ್ಲದೆ ಸೇವೆಗೆ ಅಗತ್ಯ ಕ್ರಮ-ಜಿಲ್ಲಾಧಿಕಾರಿ

0

ಪುತ್ತೂರು: ಪುತ್ತೂರು ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ 12 ಡಯಾಲಿಸಿಸ್ ಯುನಿಟ್‌ಗಳನ್ನು ಹಾಕಿ ಪುತ್ತೂರು ಆಸುಪಾಸಿನ ರೋಗಿಗಳಿಗೆ ವಿಳಂಬವಿಲ್ಲದೆ ಡಯಾಲಿಸಿಸ್ ಸೇವೆ ಒದಗಿಸುವ ವ್ಯವಸ್ಥೆ ಮಾಡಲು ಆರೋಗ್ಯ ಇಲಾಖೆಯ ಮುಖಾಂತರ ಪ್ರಯತ್ನ ನಡೆಯುತ್ತಿದೆ ಎಂದು ದ.ಕ.ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ.ತಿಳಿಸಿದ್ದಾರೆ.

ಸೆ.23ರಂದು ಪುತ್ತೂರಿಗೆ ಭೇಟಿ ನೀಡಿದ ಅವರು ‘ಸುದ್ದಿ’ಯೊಂದಿಗೆ ಮಾತನಾಡಿದರು.ಪುತ್ತೂರು ತಾಲೂಕು ಸಾರ್ವಜನಿಕ ಆಸ್ಪತ್ರೆಯು ಕೋವಿಡ್ ಸಮಯದಲ್ಲಿ ಅತ್ಯುತ್ತಮವಾಗಿ ಸೇವೆ ಒದಗಿಸಿದೆ. ಆದರೆ ಆಸ್ಪತ್ರೆ ಕಟ್ಟಡವು ಹಳೆ ಕಾಲದ ಕಟ್ಟಡವಾಗಿರುವುದರಿಂದ ಕೆಲವೊಂದು ಮೂಲಭೂತ ಸೌಕರ್ಯಗಳ ಕೊರತೆಯಿದೆ ಎಂದರು.ಡಯಾಲಿಸಿಸ್ ವಿಷಯದಲ್ಲಿ ಬಹಳಷ್ಟು ಸಮಸ್ಯೆಗಳಾಗುತ್ತಿತ್ತು.ಶಾಸಕರು ಕೂಡ ಬೇರೆ ಬೇರೆ ಸಭೆಗಳಲ್ಲಿ ಪದೇ ಪದೇ ಈ ವಿಚಾರವನ್ನು ಪ್ರಸ್ತಾಪಿಸುತ್ತಿದ್ದರು.ಈ ನಿಟ್ಟಿನಲ್ಲಿ 12 ಡಯಾಲಿಸಿಸ್ ಘಟಕಗಳನ್ನು ಹಾಕಿ ಆಸುಪಾಸಿನ ರೋಗಿಗಳಿಗೆ ವಿಳಂಬವಿಲ್ಲದೆ ಸೇವೆ ಒದಗಿಸುವ ನಿಟ್ಟಿನಲ್ಲಿ ಪ್ರಯತ್ನ ನಡೆಯುತ್ತಿದೆ ಎಂದು ಡಾ.ರಾಜೇಂದ್ರ ಕೆ.ವಿ.ಹೇಳಿದರು.

ಕೋವಿಡ್ ವಾರ್ಡ್ ಡಯಾಲಿಸಿಸ್ ರೂಮ್: ಪುತ್ತೂರು ತಾಲೂಕು ಸಾರ್ವಜನಿಕ ಆಸ್ಪತ್ರೆಯು ಕೋವಿಡ್ ಆಸ್ಪತ್ರೆಯಾಗಿರುವುದರಿಂದ ಹೆಚ್ಚುವರಿ ವಾರ್ಡ್‌ಗಳ ಅಗತ್ಯವೂ ಇತ್ತು.ಕೋವಿಡ್‌ನ ಎರಡನೇ ಅಲೆ, ಮೂರನೇ ಅಲೆಯ ಬಳಿಕ ನಾಲ್ಕನೇ ಅಲೆಗೆ ಸಿದ್ಧತೆ ಎನ್ನುವಂತೆ ಎಸ್‌ಡಿಆರ್‌ಎಫ್ ಫಂಡ್‌ನಲ್ಲಿ 60 ಲಕ್ಷ ರೂ.ಗಳನ್ನು ದುರಸ್ತಿಗಾಗಿ ಮೀಸಲಿರಿಸಲಾಗಿದೆ.ಹೆಚ್ಚುವರಿಯಾಗಿ ಕೋವಿಡ್ ವಾರ್ಡ್‌ಗಳನ್ನು ರಚಿಸಲಾಗಿದ್ದು, ಕೋವಿಡ್ ಸದ್ಯಕ್ಕೆ ಕಡಿಮೆಯಾಗಿರುವುದರಿಂದ ಈ ವಾರ್ಡ್‌ಗಳನ್ನು ಡಯಾಲಿಸಿಸ್ ರೂಮ್‌ಗಳನ್ನಾಗಿ ಪರಿವರ್ತಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಹೇಳಿದ ಜಿಲ್ಲಾಧಿಕಾರಿಯವರು, ಮುಂದಿನ 15 ದಿನಗಳಲ್ಲಿ ಡಯಾಲಿಸಿಸ್ ಘಟಕದ ಕಟ್ಟಡ ಕಾಮಗಾರಿ ಪೂರ್ಣಗೊಳ್ಳಲಿದೆ.ಜೊತೆಗೆ ಸೋರುತ್ತಿದ್ದ ಮೇಲ್ಛಾವಣಿಗೆ ಟ್ರೆಸ್ ಶೀಟ್, ಝಿಂಕ್ ಶೀಟ್, ಇಂಟರ್ ಲಿಂಕ್‌ಗಳನ್ನು ಹಾಕಿ ಮೂಲಭೂತ ಸೌಕರ್ಯವನ್ನು ಒದಗಿಸುವ ಕೆಲಸವನ್ನು ಮಾಡಲಾಗುತ್ತಿದೆ ಎಂದು ಹೇಳಿದರು.

ದಸರಾ ಕಾನೂನು ಸುವ್ಯವಸ್ಥೆಗೆ ಕ್ರಮ: ದಸರಾಗೆ ಸಂಬಂಽಸಿದಂತೆ ಪೊಲೀಸ್ ಇಲಾಖೆ, ಗುಪ್ತಚರ ಇಲಾಖೆಯ ಮನವಿಯ ಮೇರೆಗೆ ಜಿಲ್ಲೆಯೊಳಗಡೆ ಕಾನೂನು ಸುವ್ಯವಸ್ಥೆಗೆ ಸಂಬಂಽಸಿದಂತೆ ಯಾವೆಲ್ಲಾ ವ್ಯವಸ್ಥೆಗಳನ್ನು ಕೈಗೊಳ್ಳಬೇಕೋ ಅದೆಲ್ಲವನ್ನೂ ಕೈಗೊಳ್ಳಲಾಗುತ್ತಿದೆ.ವಿಶೇಷವಾಗಿ ಹೆಚ್ಚಿನ ತಯಾರಿ ಏನೂ ಇಲ್ಲ.ಆಯಾ ಸಮಯದ ಸಮಸ್ಯೆಗಳನ್ನು ಗಮನಿಸಿಕೊಂಡು ಆದ್ಯತೆಯ ಮೇರೆಗೆ ನಿರ್ದೇಶನಗಳನ್ನು ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಹೇಳಿದರು.

LEAVE A REPLY

Please enter your comment!
Please enter your name here