ಬಿಳಿನೆಲೆ ಹಾಲು ಉತ್ಪಾದಕರ ಸಹಕಾರ ಸಂಘದ ಮಹಾಸಭೆ

0

ಶೇ.25 ಡಿವಿಡೆಂಡ್, ಪ್ರತಿ ಲೀಟರ್ ಹಾಲಿಗೆ 2 ರೂ. ಬೋನಸ್

ಕಡಬ: ಬಿಳಿನೆಲೆ ಹಾಲು ಉತ್ಪಾದಕರ ಸಹಕಾರ ಸಂಘದ 2021-22ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆಯು ಬಿಳಿನೆಲೆ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಸಭಾಭವನದಲ್ಲಿ ಸಂಘದ ಅಧ್ಯಕ್ಷ ಪ್ರದೀಪ್ ಕುಮಾರ್ ಸಿ.ಟಿ ಇವರ ಅಧ್ಯಕ್ಷತೆಯಲ್ಲಿ ಸೆ.21 ರಂದು ನಡೆಯಿತು.

ವರದಿ ಸಾಲಿನಲ್ಲಿ ಸದಸ್ಯರಿಗೆ ಶೇ.25 ಡಿವಿಡೆಂಡ್ ಹಾಗೂ ಪ್ರತಿ ಲೀಟರ್ ಹಾಲಿಗೆ 2 ರೂ ಬೋನಸ್ ನೀಡುವ ಬಗ್ಗೆ ಸಭೆಯಲ್ಲಿ ಘೋಷಿಸಲಾಯಿತು. ಸಂಘವು ಪ್ರಸ್ತುತ ವರ್ಷದಲ್ಲಿ ರೂ. 772663.35 ನಿವ್ವಳ ಲಾಭ ಗಳಿಸಿದೆ. ಮುಖ್ಯ ಅತಿಥಿಗಳಾಗಿದ್ದ ದ.ಕ ಹಾಲು ಒಕ್ಕೂಟದ ಅಧ್ಯಕ್ಷ ಕೆ.ಪಿ. ಸುಚರಿತ ಶೆಟ್ಟಿ ಅವರು ಮಾತನಾಡಿ, ಸಂಘವು ಪ್ರಸ್ತುತ 500 ಲೀ ಹಾಲು ಸಂಗ್ರಹಿಸುತ್ತಿದ್ದು ಮುಂದಿನ ವರ್ಷ 600 ಲೀಟರ್ ಹಾಲು ಸಂಗ್ರಹಿಸುವ ಗುರಿ ಹೊಂದಲಿ ಎಂದು ಶುಭ ಹಾರೈಸಿದರು.

ದ.ಕ ಹಾಲು ಒಕ್ಕೂಟದ ನಿರ್ದೇಶಕ ನಾರಾಯಣ ಪ್ರಕಾಶ್ ಮಾತನಾಡಿ, ಸಂಘಕ್ಕೆ ಸಂಬಂಧಿಸಿ ಆಡಳಿತಾತ್ಮಕ ಕಾನೂನು ಸಲಹೆಯನ್ನು ನೀಡಿದರು. ದ.ಕ ಹಾಲು ಒಕ್ಕೂಟದ ಉಪ ವ್ಯವಸ್ಥಾಪಕ ಡಾ| ಸತೀಶ್ ರಾವ್ ಮಾತನಾಡಿ, ಕೃಷಿಯಲ್ಲಿ ಹೈನುಗಾರಿಕೆ ಹೇಗೆ ಪೂರಕ? ಹಾಗೂ ಹೈನುರಾಸುಗಳ ಆರೋಗ್ಯದ ಬಗ್ಗೆ ಹಾಲಿನ ಗುಣಮಟ್ಟ ಹೇಗೆ ಹೆಚ್ಚಿಸುವದರ ಬಗ್ಗೆ ಮಾಹಿತಿ ನೀಡಿದರು. ಸಹಾಯಕ ವ್ಯವಸ್ಥಾಪಕ ಡಾ. ಸಚಿನ್ ಕುಮಾರ್ ಕೆ.ಎನ್ ಹಾಗೂ ವಿಸ್ತರಣಾಽಕಾರಿ ಹರೀಶ್ ಎಸ್.ಎನ್, ಸಂಘದ ಉಪಾಧ್ಯಕ್ಷೆ ಚಂದ್ರಾವತಿ, ನಿರ್ದೇಶಕರಾದ ಗಿರೀಶ್.ಕೆ, ಈಶ್ವರ ಭಟ್ ಎನ್. ಗುಡ್ಡಪ್ಪ ಗೌಡ ಅಮೈ, ಹೇಮಾವತಿ, ಪೂವಪ್ಪ ಗೌಡ ಮೆರೊಂಜಿ, ಸಜಿ ಕುಮಾರ್ ಚೆಂಡೆಹಿತ್ಲು, ಕೇಶವ ಗೌಡ ಒಗ್ಗು, ಯಮುನಾ ಸಣ್ಣಾರ ಮತ್ತಿತರರು ಉಪಸ್ಥಿತರಿದ್ದರು. ಸಂಘದ ಪ್ರಭಾರ ಕರ‍್ಯದರ್ಶಿ ವಿದ್ಯಾ ಯು.ಎಸ್ ವರದಿ ವಾಚಿಸಿದರು. ನಿರ್ದೇಶಕ ಗಿರೀಶ್ ಕೆ. ವಂದಾನಾರ್ಪಣೆಗೈದರು.

LEAVE A REPLY

Please enter your comment!
Please enter your name here